ಮ್ಯಾನೇಜ್ ಮೆಂಟ್ ಭಗವದ್ಗೀತೆ

Author : ಮಹಾಬಲ ಸೀತಾಳಭಾವಿ

Pages 192

₹ 200.00




Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

‘ಮ್ಯಾನೇಜ್ ಮೆಂಟ್ ಭಗವದ್ಗೀತೆ ಯಶಸ್ಸಿಗೆ ಕೃಷ್ಣನ ಸೂತ್ರಗಳು’ ಕೃತಿಯು ಮಹಾಬಲ ಸೀತಾಳಭಾವಿ ಅವರ ಪುರಾಣ ಆಧಾರಿತ ಬರವಣಿಗೆಯಾಗಿದೆ. ಕೃತಿಯ ಕುರಿತು ವಿಶ್ಲೇಷಣೆ ಮಾಡಿರುವ ವಿನಾಯಕ ಭಟ್ ಗಾಳಿಮನೆ ಅವರು, ಭಗವದ್ಗೀತೆ ಸಾರ್ವಕಾಲಿಕ ಹಾಗೂ ಸಾರ್ವದೇಶಿಕ ಗ್ರಂಥವಾಗಿದೆ. ಹೌದು, ಶಾಂಕರಭಾಷ್ಯದಿಂದ ತೊಡಗಿ ರಚಿತವಾದ ಗೀತಾಸಾಹಿತ್ಯವೇ ಇದಕ್ಕೆ ನಿದರ್ಶನ.ಆಚಾರ್ಯತ್ರಯಭಾಷ್ಯ, ರಮಣಾದಿ ಮಹರ್ಷಿಗಳ ವ್ಯಾಖ್ಯಾನ, ತಿಲಕರು, ಗಾಂಧೀಜಿ, ವಿನೋಬಾ ಭಾವೆ ಮೊದಲಾದ ಸ್ವಾತಂತ್ಯ್ರ ಹೋರಾಟಗಾರರ ವಿವರಣೆ, ಗೋರಖಪುರ, ಇಸ್ಕಾನ್, ಚಿತ್ರಯ ಮಿಷನ್ ಮೊದಲಾದವರ ಗೀತಾ ಪ್ರಸಾರ ಇತ್ಯಾದಿ.ಇದಕ್ಕೆ ಆಧುನಿಕ ಅತ್ಯುತ್ತಮ ದೃಷ್ಟಾಂತವೆಂದರೆ , ಆತ್ಮೀಯ ಮಿತ್ರ, ವರ್ತಮಾನದ ಪ್ರತಿಭಾಶಾಲಿ ಲೇಖಕ, ಪತ್ರಕರ್ತರಾಗಿರುವ ಮಹಾಬಲ ಸೀತಾಳಭಾವಿಯವರ “ಮ್ಯಾನೇಜ್ಮೆಂಟ್ ಭಗವದ್ಗೀತೆ ”. ಸಂಸ್ಕೃತದ ಹಿನ್ನೆಲೆಯನ್ನು ಹೊಂದಿ ಸುಸಂಸ್ಕೃತ ,ಮನೆತನ ಹಾಗೂ ವ್ಯಕ್ತಿತ್ವವನ್ನು ಹೊಂದಿರುವ ವಿದ್ಯಾ- ವಿನಯಸಂಪನ್ನರು ಮಹಾಬಲ ಸೀತಾಳಭಾವಿ. ಓರ್ವ ಪತ್ರಕರ್ತರಾಗಿ ಸಂಸ್ಕೃತವನ್ನು ಜನಸಾಮಾನ್ಯರಿಗೆ ಅತ್ಯಂತ ಪರಿಣಾಮಕಾರಿಯಾಗಿ ಹೇಗೆ ತಲುಪಿಸಬೇಕೆಂಬ ಅಧಿಕೃತವಾದ ಚಿಂತನೆಯುಳ್ಳ ಲೇಖಕರು ಅವರು. ಅವರ ಭಾಷಾಂತರ ಹಾಗೂ ಇತರ ಸಾಹಿತ್ಯ ರಚನೆಗಳೂ ಇದಕ್ಕೆ ಸಾಕ್ಷಿಯಾಗಿವೆ. ಇನ್ನೂ ಭಗವದ್ಗೀತೆಯನ್ನು ನಿತ್ಯದ ಹಾಗೂ ಬಿಸಿನೆಸ್ ಲಾಭದಾಯಕವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಬೇಕಾದರೆ ಈ ಕೃತಿಯನ್ನು ಓದಬೇಕು ಎಂದಿದ್ದಾರೆ.

ಕೃತಿಯ ಪರಿವಿಡಿಯನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಪರ್ಸನಾಲಿಟಿ ಮ್ಯಾನೇಜ್‌ಮೆಂಟ್, ಭಗವದ್ಗೀತೆಯಲ್ಲಿ ಮ್ಯಾನೇಜ್‌ಮೆಂಟ್ ತಂತ್ರಗಳು, ಪುಟ್ಟಕತೆಗಳಲ್ಲಿ ದೊಡ್ಡ ಮ್ಯಾನೇಜ್‌ಮೆಂಟ್ ಪಾಠ, ಯಶಸ್ಸಿಗೆ ವಕೃಷ್ಣನ ಸೂತ್ರಗಳು ಭಾಗಗಳ ಒಳಗೆ ಅದರ ಅಧ್ಯಾಯಗಳನ್ನು ಹೆಸರಿಸಲಾಗಿದೆ.

About the Author

ಮಹಾಬಲ ಸೀತಾಳಭಾವಿ

ಮಹಾಬಲ ಸೀತಾಳಭಾವಿ ಅವರು ಮೂಲತಃ ಲೇಖಕರು ಹಾಗೂ ಅನುವಾದಕರು.  ಕೃತಿಗಳು: ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ (ಅನುವಾದಿತ ನಾಟಕ), ಚಾಟು ಕವಿತೆಗೆ ಚುಟುಕು ಕತೆ (ಚಾಟೋಕ್ತಿಗಳ ಸಂಗ್ರಹ ಕೃತಿ), 108 ಹಳೆ ಆಚಾರ ಹೊಸ ವಿಚಾರ, ಆಂಟೆನ ಚೆಕಾಫ್ ಕಥೆಗಳು (ಅನುವಾದ), ಮ್ಯಾನೇಜ್ ಮೆಂಟ್ ಕತೆಗಳು (ಯಶಸ್ವಿಗೆ 150 ಅಡ್ಡದಾರಿಗಳು), ಚಾಣಕ್ಯ ನೀತಿ, ಮ್ಯಾನೇಜ್ ಮೆಂಟ್ ಭಗವದ್ಗೀತೆ, ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು, ಈ ತಪ್ಪು ನೀವು ಮಾಡಬೇಡಿ.  ...

READ MORE

Related Books