ವರ್ತಮಾನ ಭಾರತ

Author : ಪುರುಷೋತ್ತಮ ಬಿಳಿಮಲೆ

Pages 304

₹ 325.00




Year of Publication: 2024
Published by: ಚಿರಂತ್ ಪ್ರಕಾಶನ
Address: #241, 22, 2ನೇ ಹಂತ, 1ನೇ ಮೈನ್, 2ನೇ ಕ್ರಾಸ್, ವೆಂಕಟಪುರ, ಕೋರಮಂಗಲ
Phone: 8660966208

Synopsys

‘ವರ್ತಮಾನ ಭಾರತ’ ಪುರುಷೋತ್ತಮ ಬಿಳಿಮಲೆ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಕುರಿತು ಡಾ. ಜಿ. ರಾಮಕೃಷ್ಣ ಅವರು ಹೀಗೆ ಹೇಳಿದ್ದಾರೆ; ಇಪ್ಪತ್ತೊಂದು ಲೇಖನಗಳಿರುವ ಈ ಸಂಕಲನದಲ್ಲಿ ಪ್ರತ್ಯೇಕ ವಿಷಯಗಳನ್ನು ಕುರಿತ ಗಾಢ ಮತ್ತು ನಿಷ್ಕೃಷ್ಟ ಚಿಂತನೆಗಳಿವೆ. ವಿಷಯಗಳ ವ್ಯಾಪ್ತಿಯು ಪ್ರೊ|| ಬಿಳಿಮಲೆಯವರ ಸರ್ವಾಂಗೀಣ ಆಸಕ್ತಿ ಮತ್ತು ಪ್ರೌಢಿಮೆಗಳ ಸೂಚಕವಾಗಿದೆ ಕೂಡ. ಇಡೀ ದೇಶಕ್ಕೆ ಪರಿಚಯವಿರುವ ಧೀರೋದಾತ್ತ ರೈತ ಚಳುವಳಿಯಿಂದ ಹಿಡಿದು ಒಂದು ಕೀರ್ತಿಶಾಲಿ ವಿಶ್ವವಿದ್ಯಾನಿಲಯವನ್ನು ಹಾಳುಗೆಡಹುವ ಕ್ರೂರ ಹುನ್ನಾರವನ್ನು ಬಯಲುಮಾಡುವುದನ್ನೊಳಗೊಂಡು ಪ್ರಜಾಪ್ರಭುತ್ವದ ನೆಲೆಗಳು, ಹುಚ್ಚೆದ್ದ ಸಮರಶೀಲತೆ, ಭಾಷಾನೀತಿ, ಕಾವ್ಯಧರ್ಮ, ರಾಷ್ಟ್ರೀಯತೆಯ ಮಜಲುಗಳು, ಮೌಖಿಕ ಇತಿಹಾಸ, ಸಾಹಿತ್ಯ ವಿಮರ್ಶೆ, ಮಾಧ್ಯಮಗಳ ಹೀನಾಯ ಮೌನ, ಮುಂತಾದ ವಿಷಯಗಳು ಇಲ್ಲಿ ಅಡಕಗೊಂಡಿವೆ. ನಮ್ಮ ಪ್ರಸಕ್ತ ಚಿಂತನೆಗಳ ಆಯಾಮಗಳನ್ನು ಗುರುತಿಸಿ ಪ್ರತಿಯೊಂದು ಸಂದರ್ಭದಲ್ಲೂ ಸಾಧಕ - ಬಾಧಕಗಳನ್ನು ಗುರುತಿಸುವುದು ಅವರ ವೈಶಿಷ್ಟ್ಯ. ಯಾವುದಕ್ಕೂ ಅಂಕಿ - ಅಂಶಗಳ ಆಧಾರವಿಲ್ಲದೆ ಚರ್ಚೆಯನ್ನು ಬೆಳೆಸದಿರುವುದು ಪ್ರೊಫೆಸರ್ ಬಿಳಿಮಲೆಯವರ ವಿದ್ವತ್ತಿನ ಶಿಸ್ತು.

ನಮ್ಮ ಪ್ರಸಕ್ತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ಧರಿಸಿರುವ ಹಾಗೂ ಧರಿಸಬಹುದಾದ ಲಕ್ಷಣಗಳನ್ನು ವಿಮರ್ಶೆ ಮಾಡುವಾಗ ಸಹ ಅವರು ಅಂಕಿ - ಅಂಶಗಳನ್ನು ಗಮನಿಸದೆ ವಾದವನ್ನು ಮಂಡಿಸುವುದಿಲ್ಲ. ಉದಾಹರಣೆಗೆ, ಶ್ರೀಲಂಕಾದ ರಾಜಕೀಯ ಸಂದಿಗ್ಧತೆಯನ್ನು ಕುರಿತ ಲೇಖನವನ್ನು ವಿಚಕ್ಷಣೆಯಿಂದ ಗಮನಿಸಬಹುದು. ಪೂರ್ಣಪ್ರಮಾಣದ ಮಾಹಿತಿ ಇಲ್ಲದೆ ವಿಶ್ಲೇಷಣೆ ನೀಡುವುದು ನೈಜ ವಿದ್ವತ್ತಿನ ಲಕ್ಷಣವಲ್ಲ. ನಿಷ್ಕೃಷ್ಟತೆಯು ವಿದ್ವತ್ತಿನ ಮೂಲ ಲಕ್ಷಣವೆಂದು ಮಹಾಭಾರತದ ಯಕ್ಷಪ್ರಶ್ನೆಯ ಭಾಗದಲ್ಲಿ ಪ್ರಸ್ತಾಪವಿದೆ: ಕಿಂ ಪಾಂಡಿತ್ಯಂ, ಪರಿಚ್ಛೇದಃ || ಈ ಶಿಸ್ತನ್ನು ಪ್ರೊ|| ಬಿಳಿಮಲೆಯವರ ಲೇಖನಗಳಲ್ಲಿ ಮತ್ತು ಚರ್ಚೆಯಲ್ಲಿ ಕಾಣುತ್ತೇವೆ. ಗ್ರಂಥದ ಮಹತ್ವಕ್ಕೆ ಇದು ಮೂಲ ಕಾರಣ, ಪ್ರಧಾನ ಹೂರಣವಾಗಿದೆ ಎಂದಿದ್ದಾರೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Related Books