ಹೊರ ನೋಟ

Author : ಕೆ.ಎನ್. ಗಣೇಶಯ್ಯ

Pages 112

₹ 95.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸ ಬರೆಯಲೂ ಹಾಗೂ ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ,

ಬರಹಗಾರ ಕೆ. ಎನ್. ಗಣೇಶಯ್ಯ ಅವರು ಇತಿಹಾಸದ ಬೆನ್ನು ಹತ್ತಿ ಆದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ಇಲ್ಲಿ ಶ್ರಮಿಸಿದ್ದಾರೆ. ತಮ್ಮ ವಿಭಿನ್ನ ಕಥಾಸಾಹಿತ್ಯದ ಮೂಲಕ ಕರ್ನಾಟಕದ ಜನತೆಗೆ ಪರಿಚಿತರು. 'ಹೊರ ನೋಟ' ಗಣೇಶಯ್ಯನವರ ವಿಶಿಷ್ಟ ಆಸಕ್ತಿ, ಸಂಶೋಧನೆ, ಒಳನೋಟಗಳನ್ನು ಸ್ವಾರಸ್ಯಪೂರ್ಣವಾಗಿ ಹೇಳುವ ಲೇಖನಗಳ ಸಂಗ್ರಹ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Reviews

ಇಲ್ಲಿನ ನೋಟವೆಂದರೆ ಕೇವಲ ಅವಲೋಕನವಲ್ಲ, ಅಳೆದು– ತೂಗುವುದಲ್ಲ. ಒಂದು ಅಸ್ತಿತ್ವದಿಂದ ಹೊರಗೆ ನಿಂತು ನೋಡುವಾಗ ದೊರಕುವ ಅದರ ಹೊರಗಿನ ಭೌತಿಕ ವೀಕ್ಷಣೆಗೂ ಮಿಗಿಲಾಗಿ ಆ ಅಸ್ತಿತ್ವವನ್ನು ಹೊರಗಿನವರಾಗಿ ಪರಿಶೀಲಿಸಿ ಹೊರನೋಟ ಪಡೆಯುವ ಕ್ರಮ ಎಂಬುದು ಲೇಖಕರ ಅಂಬೋಣ. ಈ ಕುರಿತಂತೆ ದೇಹದ ಮಸಾಜ್, ನಾಗಾಗಳ ಜೀವನಕ್ರಮ, ಆಚರಣೆ, ಮಯನ್ಮಾರ್, ಥಾಯ್ಲೆಂಡ್ ದೇಶಗಳ ಜನಜೀವನ, ಅಲ್ಲಿನ ಸಂಸ್ಕೃತಿಯ ಅವಲೋಕನದ ಚಿತ್ರಣವಿದೆ ಈ ಪುಸ್ತಕದಲ್ಲಿ.

‌ಮಹಾಯುದ್ಧಗಳ ಘೋರ ಪರಿಣಾಮ, ಲಕ್ಷಗಟ್ಟಲೆ ಯಹೂದಿಗಳ ಜೀವಂತ ಸಮಾಧಿ, ಬದುಕುವ ಹಕ್ಕನ್ನೇ ಕಸಿದುಕೊಂಡ ನಾಜಿಗಳ ವಿಕೃತ ಕ್ರೌರ್ಯ, ಅದನ್ನು ಇಂದಿಗೂ ಧ್ವನಿಸುತ್ತಿರುವ ಬರ್ಲಿನ್ ಮುಂತಾದ ಸ್ಥಳಗಳು, ಕಥೆಗಳು ಪುಸ್ತಕದ ತುಂಬ ಢಾಳಾಗಿವೆ. ಇವುಗಳನ್ನು ಕಂಡು ಲೇಖಕರಲ್ಲಿ‌ ಮೂಡಿದ ಹೊರನೋಟದ ದೃಶ್ಯಾವಳಿಯೂ ಕೂಡ. ಹೊರಗನ್ನು ಅರಿಯುವ ಬಗೆಗೆ ಮಾರ್ಗದರ್ಶಿಯಂತಿದೆ ಇದು.

ಕೃಪೆ: ಪ್ರಜಾವಾಣಿ, (2020 ಫೆಬ್ರುವರಿ 02)

Related Books