ವಿಭೂತಿ ವಿಭಾವನೆ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 128

₹ 80.00




Year of Publication: 2002
Published by: ಚಿತ್ರಭಾನು ಪ್ರಕಾಶನ
Address: ಭಾರತಿ, 6ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ವಿ.ನಗರ, ಮೈಸೂರು

Synopsys

‘ವಿಭೂತಿ ವಿಭಾವನೆ’ ಸಿ. ಪಿ. ಕೃಷ್ಣಕುಮಾರ್‌ ಅವರ ಲೇಖನಗಳ ಸಂಗ್ರಹವಾಗಿದೆ. ಅಂಥ ಆಪತ -ಆಧ್ಯಾತ್ಥಿಕ ಚಿಂತನೆ ಅಪರೂಪವಾದುದು. ಇಲ್ಲಿ ಅಂತಹ ಕೆಲವು ವ್ಯಕ್ತಿ ಚಿತ್ರಗಳನ್ನೂ ಸಾಧನೆಗಳನ್ನೂ ಕಾಣಬಹುದು. ಇನ್ನುಳಿದ ಕೆಲವು ವಿಚಾರಪರ ಲೇಖನಗಳೂ ನಮ್ಮ ಚಿಂತನೆಯನ್ನು ಹಲವು ಪಟ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Reviews

ಹೊಸತು-2003- ಮಾರ್ಚ್

ಸಾಮಾನ್ಯವಾಗಿ ಒಳ್ಳೆಯ ಆಲೋಚನೆ-ಒಳ್ಳೆಯ ಮಾತುಗಳು-ಒಳ್ಳೆಯ ಕೆಲಸಗಳು ಈ ಮೂರನ್ನೂ ಕೈಗೊಂಡಿರುವ ಹಾಗೂ ಇವೆಲ್ಲವನ್ನೂ ಮನುಕುಲದ ಏಳೆಗಾಗಿ ವ್ಯಯಿಸುತ್ತಿರುವವರು ವಿಭೂತಿ ಪುರುಷರೆಂದು ಖ್ಯಾತನಾಮರಾಗುತ್ತಾರೆ. ಅಂಥ ಧಾರ್ಮಿಕ - ಆಧ್ಯಾತ್ಮಿಕ ಚಿಂತನೆ ಅಪರೂಪವಾದುದು. ಇಲ್ಲಿ ಅಂತಹ ಕೆಲವು ವ್ಯಕ್ತಿ ಚಿತ್ರಗಳನ್ನೂ ಸಾಧನೆಗಳನ್ನೂ ಕಾಣಬಹುದು. ಇನ್ನುಳಿದ ಕೆಲವು ವಿಚಾರಪರ ಲೇಖನಗಳೂ ನಮ್ಮ ಚಿಂತನೆಯನ್ನು ಹಲವು ಪಟ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟು21 ಲೇಖನಗಳಿವೆ.

 

Related Books