ನೂರೈವತ್ತು ನಲ್ನುಡಿಗಳು

Author : ಎಂ.ಆರ್. ವಾಸುದೇವ ಸಾಮಗ



Year of Publication: 1981
Published by: ಸಂಯಮಂ ಪ್ರಕಾಶನ
Address: ಮಣೂರು

Synopsys

‘ ನೂರೈವತ್ತು ನಲ್ನುಡಿಗಳು’ ಎಂಬ ಕೃತಿಯನ್ನು ಬರೆದವರು ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ, ಖ್ಯಾತ ತಾಳಮದ್ದಳೆ ಅರ್ಥಧಾರಿ, ಸಾಮಗ ಮನೆತನದ ಶ್ರೀ ಎಂ.ಆರ್.ವಾಸುದೇವ ಸಾಮಗರು. ಇದು ದ್ವಿತೀಯ ಮುದ್ರಣ(2009). 1981ರಲ್ಲಿ ಮೊದಲೊಮ್ಮೆ ಪ್ರಕಟವಾಗಿ ಪುಸ್ತಕಗಳೆಲ್ಲವೂ ಓದುಗರ ಕೈ ಸೇರಿತ್ತು. ಶ್ರೀ ಮಲ್ಪೆ ವಾಸುದೇವ ಸಾಮಗರ ಜನ್ಮ ಷಷ್ಟ್ಯಬ್ದದ ಶುಭ ಸಂದರ್ಭದಲ್ಲಿ ಈ ಕೃತಿಯು ಪ್ರಕಟವಾಗಿದೆ. ಈ ವಿಚಾರಗಳನ್ನು ತಮ್ಮ ಮುನ್ನುಡಿ ಲೇಖನದಲ್ಲಿ ಶ್ರೀ ವಾಸುದೇವ ಸಾಮಗರ ಪುತ್ರ, ಕಲಾವಿದ ಶ್ರೀ ಮಲ್ಪೆ ಪ್ರದೀಪ ವಿ. ಸಾಮಗ ಅವರು ತಿಳಿಸಿರುತ್ತಾರೆ. ಮೊದಲ ಮುದ್ರಣಕ್ಕೆ ಶ್ರೀಮಲ್ಪೆ ವಾಸುದೇವ ಸಾಮಗರು ಬರೆದ ಮುನ್ನುಡಿ ಲೇಖನವನ್ನೂ ಇಲ್ಲಿ ನೀಡಲಾಗಿದೆ. ಈ ಕೃತಿಯ ಪ್ರಕಾಶಕರು ಸಂಯಮಂ ಪ್ರಕಾಶನ, ಮಣೂರು. ಲೇಖಕ ಶ್ರೀ ಮಲ್ಪೆ ವಾಸುದೇವ ಸಾಮಗರು ಈ ಹೊತ್ತಗೆಯಲ್ಲಿ ನೂರೈವತ್ತು ಸಂಸ್ಕೃತ ಸುಭಾಷಿತಗಳ ಪದ್ಯಾನುವಾದವನ್ನು ನೀಡಿರುತ್ತಾರೆ. ಮೊದಲ ಮುದ್ರಣದ ಪುಸ್ತಕವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗಡೆಯವರ ಸೂಚನೆಯಂತೆ ಧರ್ಮಸ್ಥಳದ ದೀಪೋತ್ಸವದ ಶುಭಾವಸರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳೆಡೆಯಲ್ಲಿ ಬಿಡುಗಡೆಯಾಗಿತ್ತು.

About the Author

ಎಂ.ಆರ್. ವಾಸುದೇವ ಸಾಮಗ

ಎಂ.ಆರ್.ವಾಸುದೇವ ಸಾಮಗ- ಯಕ್ಷಗಾನ ಕಲಾವಿದರಾದ ವಾಸುದೇವ ಸಾಮಗ ಅವರು ತಾಳಮದ್ದಲೆಯ ಎಂಭತ್ತು ಪ್ರಸಂಗಗಳು ಎಂಬ ಗ್ರಂಥವನ್ನು ಸಂಪಾದಿಸಿದ್ದಾರೆ.  ...

READ MORE

Related Books