ದಲಿತ ಚಿಂತನ

Author : ಡಿ.ಎಸ್. ವೀರಯ್ಯ

Pages 232

₹ 200.00




Year of Publication: 2005
Published by: ಪಿತಾಮಹ ಪ್ರಕಾಶನ
Address: #73, ಬನಶಂಕರಿ, 3ನೇ ಹಂತ, ಬಿ.ಡಿ.ಎ ಲೇಔಟ್, 8ನೇ ಮುಖ್ಯ ರಸ್ತೆ, ಗಿರಿನಗರ, ಬೆಂಗಳೂರು-560085
Phone: 9448091814

Synopsys

‘ದಲಿತ ಚಿಂತನ’ ಕೃತಿಯು ಡಿ.ಎಸ್.ವೀರಯ್ಯ ಅವರ ವೈಚಾರಿಕ ಲೇಖನಗಳ ಸಂಕಲನವಾಗಿದೆ. ಕೃತಿಯ ಕುರಿತು ಮುನ್ನುಡಿ ಬರೆದ ಜಾಣಗೆರೆ ವೆಂಕಟರಾಮಯ್ಯ ಅವರು, `ದಲಿತ ಚಿಂತನೆಗೆ ಹೊರತಾಗಿಯೂ ಕೆಲವು ಲೇಖನಗಳು ಇಲ್ಲಿ ಸೇರಲ್ಪಟ್ಟಿವೆ. ಮಹಿಳಾ ಮೀಸಲಾತಿ ಈ ರಾಷ್ಟ್ರಕ್ಕೆ ಅನಿವಾರ್ಯವೆ? ಗಾಂಧೀಜಿ, ಶಾಸ್ತ್ರಿ ಕಂಡ ಕನಸಿನ ಭಾರತ ನನಸಾಗುತ್ತಿದೆಯೇ? ಜಗದ್ಗುರುಗಳು ಮತ್ತು ದಲಿತರು ಭ್ರಷ್ಟಾಚಾರ ಮತ್ತು ಯುವಜನತೆ!' ಮುಂತಾದ ಚಿಂತನ ಬರಹಗಳೂ ಸೇರಿರುವುದನ್ನು ಗಮನಿಸಿದರೆ ವೀರಯ್ಯನವರಿಗೆ ದಲಿತ ಚಿಂತನ ಜೊತೆಗೆ ದೇಶ, ಭಾಷೆ, ಜನತೆಯ ಸಮೂಹ ಪ್ರಶ್ನೆಯೂ ತುಂಬಿಕೊಂಡಿದೆ ಎಂಬುದರ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ವೀರಯ್ಯನವರು ಅಪರೂಪದ ಚಿಂತಕ, ಬರಹಗಾರ ಎಂದು ಯಾರಾದರೂ ಗುರುತಿಸಬಹುದು. ಪತ್ರಿಕಾ ಬರಹಕ್ಕಾಗಿ ಬರೆದ ಕಾರಣದಿಂದ ಕೆಲವು ಲೇಖನ ಬದುಕು, ಸಮಸ್ಯೆ ಮತ್ತು ದುರಂತಗಳನ್ನೇ ಹೆಚ್ಚಾಗಿ ಒಳಗೊಂಡ ಲೇಖನಗಳಾಗಿರುವುದರಿಂದ ಅಲ್ಲಲ್ಲಿ ಕೆಲ ವಿಚಾರ, ಸಂಗತಿ, ಘಟನೆಗಳು ಪುನರಾವರ್ತಿತವಾದರೂ ಆಭಾಸ ಅನ್ನಿಸಲಾರವು. ರಾಜಕೀಯ ರಂಗದಲ್ಲಿಯೂ ಅಂಬೇಡ್ಕರರ ಕರೆಯಂತೆ ರಾಜಕೀಯ ಸ್ಥಾನಮಾನ ಪಡೆಯಲು ಬಿಜೆಪಿ ಸೇರಿ ಅಲ್ಲಿ ರಾಜ್ಯದ ಎಸ್‌ಸಿ/ಎಸ್‌ಟಿ ಮೊರ್ಚಾದ ಅಧ್ಯಕ್ಷರೂ ಆಗಿದ್ದು ಹಾಗೂ ಪ್ರಸ್ತುತ ವಿಧಾನ ಪರಿಷತ್ತಿನ ಸದಸ್ಯರೂ ಆಗಿರುವ ಡಿ.ಎಸ್.ವೀರಯ್ಯನವರು ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಜಿತರಾಗಿದ್ದು ನೋವಿನ ಸಂಗತಿ, ಚುನಾವಣೆ ಆಕ್ರಮ ಮತ್ತು ಅನ್ಯಾಯಗಳ ಪರಿಣಾಮವಾಗಿ ವೀರಯ್ಯನವರು ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವಿನ ಕಿರೀಟ ಧರಿಸುವುದು ತಪ್ಪಿತು ಎಂಬ ವಾಸ್ತವ ಸಂಗತಿ ಕಣ್ಣ ಮುಂದಿದೆ. ಈ ಚಿಂತನಾ ಲೇಖನಗಳಲ್ಲಿ ಮೂಡಿಸಿದ್ದಾರೆ. ಈ ಕೃತಿ ಕೂಡಾ ವೀರಯ್ಯನವರಿಂದ `ದಲಿತ ಸಮೂಹ ಮತ್ತು ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆಯಿಟ್ಟುಕೊಳ್ಳಬಹುದು, ಆ ಭರವಸೆಯನ್ನು ತಮ್ಮ ಕಾಳಜಿ ಮತ್ತು ನಿಷ್ಠೆ ಇವುಗಳ ಹಿನ್ನೆಲೆಯಿಂದಲೇ ಸೃಷ್ಟಿಯಾಗಿದೆ ಎಂಬುದನ್ನು ದಾಖಲಿಸಲು ಸಮಾಧಾನವಾಗುತ್ತದೆ’ ಎಂದಿದ್ದಾರೆ.

About the Author

ಡಿ.ಎಸ್. ವೀರಯ್ಯ

ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು:  ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ  ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ.  ...

READ MORE

Related Books