ಶರಣ ಬಂಡಾಯ

Author : ಸರಜೂ ಕಾಟ್ಕರ್‌

Pages 100

₹ 50.00




Year of Publication: 2003
Published by: ಲೋಹಿಯಾ ಪ್ರಕಾಶನ
Address: ಕಪ್ಪುಗಲ್ಲು ರಸ್ತೆ, ಬಳ್ಳಾರಿ

Synopsys

‘ಶರಣ ಬಂಡಾಯ’ ಸರಜೂ ಕಾಟ್ಕರ್‌ ಅವರ ಲೇಖನ ಸಂಕಲನವಾಗಿದೆ. ಬಸವಾದಿ ಶರಣರ ವಚನ ಸಾಹಿತ್ಯದಿಂದ ಕೆಲವು ವಿಚಾರಪೂರಿತ ವಚನಗಳನ್ನಾಯ್ದು ಈ ಕೃತಿಯಲ್ಲಿ ವಿಶ್ಲೇಷಿಸುತ್ತ ಅವರು ತಿಳಿಸಿದ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವೆಂದು ಮನಗಾಣಿಸುತ್ತಾರೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Reviews

ಹೊಸತು- 2004- ಜನವರಿ

ಕಾಯಕ ತತ್ವವನ್ನು ಬೋಧಿಸಿ ದಾಸೋಹ ಕಲ್ಪನೆಯನ್ನು ಪ್ರಚುರ ಪಡಿಸಿ ಧಾರ್ಮಿಕ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿ ಮೊದಲ ಬಂಡಾಯದ ದನಿಯೆತ್ತಿದವರು ಶರಣರು, ಹನ್ನೆರಡನೆಯ ಶತಮಾನದಲ್ಲಿ ಸಮಾಜದಲ್ಲೊಂದು ಕ್ರಾಂತಿಯನ್ನೇ ಮಾಡಿದ ಈ ಬುದ್ದಿಜೀವಿಗಳು ಜನತೆಗೆ ನೀಡಿದ ಉತ್ತಮ ಕೊಡುಗೆಯೆಂದರೆ ವಚನ ಸಾಹಿತ್ಯವೆನ್ನಬಹುದು. ಬಸವಾದಿ ಶರಣರ ವಚನ ಸಾಹಿತ್ಯದಿಂದ ಕೆಲವು ವಿಚಾರಪೂರಿತ ವಚನಗಳನ್ನಾಯ್ದು ಈ ಕೃತಿಯಲ್ಲಿ ವಿಶ್ಲೇಷಿಸುತ್ತ ಅವರು ತಿಳಿಸಿದ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವೆಂದು ಮನಗಾಣಿಸುತ್ತಾರೆ

Related Books