ರಶೀತಿಗಳು

Author : ಅಂಜಲಿ ರಾಮಣ್ಣ

Pages 136

₹ 150.00




Year of Publication: 2012
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ರಶೀತಿಗಳು’ ಲೇಖಕಿ, ವಕೀಲೆ ಅಂಜಲಿ ರಾಮಣ್ಣ ಅವರ ಲೇಖನಗಳ ಸಂಕಲನ. `ನಾನು ಬರಹಗಾರ್ತಿ'' ಎಂಬ ನಂಬಿಕೆಯಿಂದ ಬರಹಗೈಯುವವರು ``ನಾ ಬರಹಗಾರಳಲ್ಲ, ಗೊತ್ತಿದೆ'' ಎಂಬ ಪ್ರಾಮಾಣಿಕ ನಿವೇದನೆಯೊಂದಿಗೆ ಬರೆಯುವವರು ಎರಡು ವಿಭಿನ್ನ ಬಗೆಯ ಬರಹಗಳನ್ನು ಮಾಡುತ್ತಾರೆ. ಇದರಲ್ಲಿ ಎರಡನೆಯ ಗುಂಪಿಗೆ ಸೇರುವ ಅಂಜಲಿ ರಾಮಣ್ಣ ಅವರ ಬರಹಗಳನ್ನು ಓದುವಾಗ ಮತ್ತು ಓದಿ ಮುಗಿಸುವವರೆಗೆ ನನಗೆ ನೆನಪಿರುವಂತೆ ನನ್ನ ಮುಖದಲ್ಲಿ ಒಂದು ಮಂದಸ್ಮಿತವಿರುತ್ತದೆ. ಘನಗಂಭೀರವಾಗಿ ಒಂದು ಕಥನವನ್ನು ನಿರೂಪಿಸುವ ದಾರಿ ಅವರದಲ್ಲ. ಅದೇ ಕಾಲಕ್ಕೆ, ಲಘುವಾದ ಬೀಸು ಬರವಣಿಗೆಯೂ ಅದಲ್ಲ. ಅಲ್ಲಿ ಒಂದು ಸಂವೇದನೆ ಇದ್ದೇ ಇರುತ್ತದೆ. ಲವಲವಿಕೆ ಇರುತ್ತದೆ. ಅಗತ್ಯವಿರುವಷ್ಟು ತುಂಟತನವಿರುತ್ತದೆ. ಮನಸ್ಸನ್ನು ಹಿಡಿದು ಗಿಲಿಗಿಲಿ ಅಲುಗಾಡಿಸಿ ಮುದಗೊಳಿಸುವ ಅವರ ಬರವಣಿಗೆಯ ಶೈಲಿ ಭಾವಲಯಗಳಿಗೆಲ್ಲ ಆಕಾರ ಕೊಡಲೂ ನೋಡುತ್ತದೆ. ತುಂಬ ಆದ್ರವೆನ್ನಿಸುವ ಬರಹಗಳನ್ನೂ ಈ ಕೃತಿಯಲ್ಲಿ ಕಾಣಬಹುದಾಗಿದೆ .

About the Author

ಅಂಜಲಿ ರಾಮಣ್ಣ

ವಕೀಲ ವೃತ್ತಿಯೊಂದಿಗೆ ಅಂಕಣಗಳನ್ನು ಬರೆಯುತ್ತಾ, ಕಾನೂನಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿರುವ ಅಂಜಲಿ ರಾಮಣ್ಣ ಅವರು ಅಸ್ತಿತ್ವ ಲೀಗಲ್ ಟ್ರಸ್ಟ್ ಸಂಸ್ಥಾಪಕರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ. ಹಾಗೂ ಮಾನವ ಹಕ್ಕುಗಳು ವಿಷಯದಡಿ ಸ್ನಾತಕೋತ್ತರ ಕಾನೂನು ಪದವೀಧರರಾಗಿರುವ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಡಿಪ್ಲೊಮಾ, ಆಪ್ತ ಸಮಾಲೋಚನೆ ಮತ್ತು ಮಕ್ಕಳ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದಾರೆ. ಮಹಿಳೆ ಹಾಗೂ ಮಕ್ಕಳ ಹಕ್ಕುಗಳು, ಶಿಕ್ಷಣ, ಕಾನೂನು, ಆರ್ಥಿಕ ಪ್ರಗತಿಗೆ ನೆರವು ಮತ್ತು ಎಚ್.ಐ.ವಿ.ಪೀಡಿತ ಮಹಿಳೆಯರ ಸಮೂಹದಲ್ಲಿ ಜಾಗೃತಿ ಮೂಡಿಸಲು ಹೋರಾಡುತ್ತಿರುವ ಅಂಜಲಿ ರಾಮಣ್ಣ, ಕರ್ನಾಟಕ ಸರ್ಕಾರದ ಬಾಲಕಿಯರ ಕಲ್ಯಾಣ ಸಮಿತಿಯ ...

READ MORE

Related Books