ಬೆಂಕಿ ಬೆಳಕು

Author : ನಾಗಭೂಷಣ ಬಗ್ಗನಡು

Pages 156

₹ 130.00




Year of Publication: 2020
Published by: ಜ್ಯೋತಿ ಪ್ರಕಾಶನ
Address: ಎಂ-45, ಕರ್ನಾಟಕ ಬ್ಯಾಂಕ್ ರಸ್ತೆ, ವಿವೇಕಾನಂದ ಸರ್ಕಲ್ ಹತ್ತಿರ, ಮೈಸೂರು- 570023
Phone: 9844212231

Synopsys

‘ಬೆಂಕಿ ಬೆಳಕು’ ಡಾ. ನಾಗಭೂಷಣ ಬಗ್ಗನಡು ಅವರ ಐತಿಹಾಸಿಕ ವ್ಯಕ್ತಿ/ಸಂಗತಿಗಳ ಅವಲೋಕನ ಕೃತಿ. ಬೆಳಕಾಗಿ ಬಂದು ಬೆಂಕಿಯಾಗಿ ಉಳಿದ ಬಸವ ತತ್ವ, ಸೈದ್ಧಾಂತಿಕ ವಾದಗಳು ಮತ್ತು ದಲಿತ ಕಾವ್ಯ, ಕಾವ್ಯ ಚರಿತೆಯಿಂದ ಹೊರಗೆ ಉಳಿದ ತತ್ವಜ್ಞಾನಿ ಕವಿ ನಾರೇಯಣ, ಕನ್ನಡ ಸಾಹಿತ್ಯ ಚರಿತೆಗಳು ನಿರಾಕರಿಸಿದ ಮಧ್ಯಕಾಲೀನ ಕನ್ನಡ ಸಾಹಿತ್ಯದ ಬಹುತ್ವದ ನೆಲೆಗಳು, ಶರೀಫ್ ಮತ್ತು ಕೋಮು ಸೌಹಾರ್ದತೆ, ನವ್ಯ ಸಣ್ಣ ಕಥೆಗಳಲ್ಲಿ ದಲಿತ ಪ್ರಜ್ಞೆ, ಧರ್ಮದಾಚೆಯ ಧಾರ್ಮಿಕ ಪ್ರತಿನಿಧಿ ಶರೀಫ ಸಾಹೇಬ, ವಚನ ಚಳವಳಿ:ಒಂದು ವಿಮುಕ್ತಿ ಪರ ಚಿಂತನೆ,  ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಎಚ್.ವಿ. ಸಾವಿತ್ರಮ್ಮನವರ ಕಥೆಗಳಲ್ಲಿ ಸ್ತ್ರೀವಾದಿ ನೋಟ, ದಲಿತರ ಬದುಕು-ಮೆಲುಕು: ಒಂದು ಅವಲೋಕನ, ಐವತ್ತರ ಹೊಸ್ತಿಲಲ್ಲಿ ಬಂಡಾಯ ಸಾಹಿತ್ಯ ಸಂಘಟನೆ, ರಾಮಾಯಣ ಪರಂಪರೆಯ ಸಾಲಿನಲ್ಲಿ ಸಾಲಿ ರಾಮಚಂದ್ರರಾಯರ ಶ್ರೀರಾಮ ಚರಿತವು. ಪುರುಷ ಮೌಲ್ಯ ನಿರಾಕೃತ: ಸ್ತ್ರೀ ದೇಹ ಸಂಕಥನ ಹೀಗೆ ಒಟ್ಟು 16  ಅಧ್ಯಾಯಗಳ ಮೂಲಕ ವಿಷಯವನ್ನು ವಿಶ್ಲೇಷಿಸಿದ ಕೃತಿ ಇದು. 

About the Author

ನಾಗಭೂಷಣ ಬಗ್ಗನಡು
(01 June 1976)

ಸಂಶೋಧಕ, ಲೇಖಕ ನಾಗಭೂಷಣ ಬಗ್ಗನಡು ಅವರು ಮೂಲತಃ ತುಮಕೂರಿನ ದೊಡ್ಡೇನಹಳ್ಳಿ ಗ್ರಾಮದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ‘ಬದಲಾಗುತ್ತಿರುವ ಆಧುನಿಕ ಪರಿಸರದಲ್ಲಿ ಜಾನಪದ’ ಪ್ರಬಂಧ ಮಂಡಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವೀಧರರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.   ಬಂಡಾಯ ಚಳವಳಿ, ತಳ ಸಮುದಾಯಗಳ ಹಕ್ಕುಗಳ ಹೋರಾಟ, ಜನಪರ ಚಳವಳಿಗಳಲ್ಲಿ ಸಕ್ರಿಯರು. ಇವರ ಮೊದಲ ಕೃತಿ ‘ಆಧುನಿಕ ಜಾನಪದ’. ಕಡಕೋಳ ಮಡಿವಾಳಪ್ಪ, ಸುಡುಗಾಡು ಸಿದ್ಧರು, ಕಾಲುದಾರಿ, ಬೆಂಕಿ ಬೆಳಕು, ಲಂಕೇಶ್ ಒಂದು ನೆನಪು ಹಾಗೂ ಸಂಶೋಧನಾ ಕೃತಿಗಳು: ವೃತ್ತಿ ರಂಗಭೂಮಿ ನಾಟಕಗಳಲ್ಲಿ ಅಸ್ಪೃಷ್ಯತೆ ಮತ್ತು ದಲಿತತ್ವದ ನೆಲೆಗಳು, ದಲಿತ ಪುರಾಣಗಳು.  ...

READ MORE

Related Books