ವಿಜ್ಞಾನ ವಿಸ್ಮಯ

Author : ಪಾ.ವೆಂ. ಆಚಾರ್ಯ

Pages 224

₹ 125.00




Year of Publication: 2003
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಶಿವಾನಂದ ವೃತ್ತ ಬಳಿ, ಬೆಂಗಳೂರು-560001
Phone: 08022203580

Synopsys

ಕಸ್ತೂರಿ, ಕರ್ಮವೀರ, ತುಷಾರ, ಉದಯವಾಣಿ ಇತರೆ ಪತ್ರಿಕೆಗಳಲ್ಲಿ ಪಾ.ವೆಂ. ಆಚಾರ್ಯರು ವೈಜ್ಞಾನಿಕ ವಿಷಯ ಆಧರಿಸಿ ವಿವಿಧ ಶೀರ್ಷಿಕೆಯ ಅಂಕಣಗಳಡಿ ಬರೆದ ಲೇಖನಗಳ ಸಂಗ್ರಹ-ವಿಜ್ಞಾನ ವಿಸ್ಮಯ.

ಸಾಮಾನ್ಯಜ್ಞಾನ, ಖಗೋಳ ವಿಜ್ಞಾನ, ಮನೋವಿಜ್ಞಾನ, ಪ್ರಾಣಿ ಲೋಕ, ಭೂಭೌತಿಕ ವಿಜ್ಞಾನ, ಸಸ್ಯಲೋಕ, ವೈದ್ಯಕೀಯ, ಅನ್ವಯಿಕ ವಿಜ್ಞಾನ ಸೇರಿದಂತೆ ವಿಜ್ಞಾನಿಗಳ ಬದುಕು ಬರೆಹ ಕುರಿತ ಮಾಹಿತಿಯ ಲೇಖನಗಳಿವೆ. ಜನಸಾಮಾನ್ಯರ ದಿನನಿತ್ಯದ ಜೀವನಕ್ಕೂ ಉಪಯೋಗವಾಗಬಲ್ಲ ಮಾಹಿತಿಯನ್ನು ಪಾವೆಂ ಈ ಕೃತಿಯಲ್ಲಿ ನೀಡಿದ್ದಾರೆ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಸಾಹಿತಿ ಎಸ್.ಎಲ್. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Reviews

ಹೊಸತು- ಜುಲೈ -2003

ಮುರಲೀಧರ - ರಾಧಾಕೃಷ್ಣರಾವ್ - ಪಿ. ವಿ. ಆಚಾರ್ಯ - ಲಾಂಗೂಲಾಚಾರ್ಯ - ಪಾ ವೆಂ - ಹೀಗೆ ಪತ್ರಿಕೆಗಳಿಗೆ ವಿವಿಧ ಹೆಸರುಗಳಿಂದ ಲೇಖನಗಳನ್ನು ಬರೆಯುತ್ತಿದ್ದ ಸಾಹಿತ್ಯ ವಲಯದ ಬಹುದೊಡ್ಡ ಹೆಸರಿನವರು ಪಾಡಿಗಾರು ವೆಂಕಟರಮಣ ಆಚಾರ್ಯರು. ಜನ ಸಾಮಾನ್ಯದ ಕೈಗೆಟುಕದ ಗಂಭೀರ ವೈಜ್ಞಾನಿಕ ಸಾಹಿತ್ಯವನ್ನು ಇಂಗ್ಲಿಷ್‌ನಲ್ಲಿ ಓದಿ ತಿಳಿದು ಕನ್ನಡದಲ್ಲಿ ಬರೆದ ಅವರ ಈ ಲೇಖನಗಳನ್ನೋದುವುದೇ ಒಂದು ವಿಸ್ಮಯಲೋಕ ಪ್ರವೇಶಿಸಿದಂತೆ. ಪಾ ವೆಂ ಸಮಗ್ರ ಸಂಪುಟ ಯೋಜನೆಯ ವೈಜ್ಞಾನಿಕ ಬರಹಗಳ ಒಂದು ಸಂಕಲನ.

Related Books