ಮಂದಹಾಸ ಮೀಮಾಂಸೆ

Author : ಪ್ರಭುಶಂಕರ

Pages 256

₹ 150.00




Year of Publication: 2003
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಮಂದಹಾಸ ಮೀಮಾಂಸೆ ಸಮಗ್ರ ಲಲಿತ ಪ್ರಬಂಧವಾಗಿದೆಲೇಖಕ ಪ್ರಭುಶಂಕರ ಅವರ ಲೇಖನಗಳ ಸಮಗ್ರ ಸಂಕಲನವಾಗಿ ಕೃತಿ ಪ್ರಕಟವಾಗಿದೆ

ವಿನೋದ ಸಾಹಿತ್ಯದ ಪ್ರಕಾರಕ್ಕೆ ಸೇರಿ ಹೋಗಿರುವ ಪ್ರಭಶಂಕರ ಅವರ ಲಲಿತ ಪ್ರಬಂಧಗಳು ಸುಧಾ, ಪ್ರಜಾವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಹಾಗೇ ಎತ್ತಿಗೆ ಜ್ವರ ಎಮ್ಮೆಗೆ ಬರೆ ಎಂಬ ಅವರ ಸಂಕಲನದಲ್ಲೂ ಪ್ರಕಟವಾಗಿವೆ. ಅಭಿನವ ಪ್ರಕಾಶನದ ಕೃತಿಯಲ್ಲಿ ಪ್ರಭುಶಂಕರ ಅವರ ಸಮಗ್ರ ಲೇಖನಗಳನ್ನು ಒಂದೆಡೆ ಸೇರಿಸಿಮಂದಹಾಸ ಮೀಮಾಂಸೆಎಂಬ ಪುಸ್ತಕದಲ್ಲಿ ಹೊರ ತಂದಿದ್ಧಾರೆ.  

ಮಂದಹಾಸ ಮೀಮಾಂಸೆ, ಪಾದುಕಾ ಸಹಸ್ರಾ, ನಾಯಿ ತಂದ ಪೇಚು, ಹುಚ್ಚಾಸ್ಪತ್ರೆ , ಲೋಭಿಗಳು, ಮದುವೆಯಾದದ್ದು ಏಕೆ?, ಸಮಯಸ್ಫೂರ್ತಿ, ವೈದ್ಯರು, ಬಿಟ್ಟೆನೆಂದರೆ ಬಿಡದು, ಸೈಂಧವ ವಧೆ, ಸಾವಿನ ಸುತ್ತ, ಎತ್ತಿಗೆ ಜ್ವರ ; ಎಮ್ಮೆಗೆ ಬರೆ, ಸಭಾ ಮರ್ಯಾದೆ, ಸಂಶಯ ಪಿಶಾಚಿ, ಅನಾಮಧೇಯ ಪತ್ರಗಳು, ಕರ್ತವ್ಯದಲ್ಲಿ ಅತಿನಿಷ್ಠೆ, ಗೊರಕೆ, ಉಪಚಾರ, ಸೆಮಿನಾರುಗಳು, ಜಟಕಾ ಗಾಡಿಯ ಪ್ರಯಾಣ, ಒಂದೂವರೆ ಹುಲಿ ಮೊದಲಾದ ಬರಹಗಳನ್ನು ಈ ಕೃತಿ ಒಳಗೊಂಡಿದೆ.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books