ಕೋರಿಕೆ

Author : ಈಶ್ವರ ಸಣಕಲ್ಲ

Pages 145
Year of Publication: 1934
Published by: ರಾ. ಸಾ. ಫ.ಗು.ಹಳಕಟ್ಟಿ
Address: ವಿಜಾಪುರ

Synopsys

ಕೋರಿಕೆ-ಕವಿ ಈಶ್ವರ ಸಣಕಲ್ಲ ಅವರ ಕವನ ಸಂಕಲನ. ಬಹುತೇಕ ಕವನಗಳು ಜಯಕರ್ನಾಟಕ, ಪ್ರಬುದ್ಧ ಕರ್ನಾಟಕ, ರಂಗಭೂಮಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದ.ರಾ. ಬೇಂದ್ರೆ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ಸಣಕಲ್ಲ ಅವರಲ್ಲಿ ಕವಿಜಾತಿ ಸಹಜವಾದ, ತೀರದ ಉತ್ಸಾಹವೂ, ಮೀರದ ಆಸೆಯೂ ಇದೆ. ಆ ಬಲದಿಂದ ಅವರು ಉನ್ನತವಾದ, ಊರ್ಜಿತವಾದ ಲೋಕಗಳನ್ನು ತೆರೆದು ತೋರಿಸುವರು ಎಂದು ಪ್ರಶಂಸಿಸಿದ್ದಾರೆ.

‘ಜಗವೆಲ್ಲ ನಗುತಿರಲಿ..ನಗದಳವು ನನಗಿರಲಿ..’ ಎಂದು ಆರಂಭವಾಗುವ ಕವನದ ಸಾಲೇ ‘ಕೋರಿಕೆ’ ಕವನದ್ದು. ಅದು ಸಂಕಲನದ ಶೀರ್ಷಿಕೆಯೂ ಹಾಗೂ ಸಂಕಲನದ ಮೊದಲ ಕವನವೂ ಇದೇ ಆಗಿದೆ. ಕುರುಡ, ಕಾಲಲೀಲೆ, ಹೇಳಲಾರದ ದುಃಖ, ಬಡತನವೇ ಬೇಕು..ಮುಂತಾದ ಕವನಗಳು ಸೇರಿದಂತೆ ಒಟ್ಟು 49 ಕವನಗಳಿವೆ.

About the Author

ಈಶ್ವರ ಸಣಕಲ್ಲ
(20 December 1906 - 03 December 1984)

’ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು 1906 ಡಿಸೆಂಬರ್ 20ರಂದು. ಹುಟ್ಟೂರು ಬೆಳಗಾವಿ ಜಿಲ್ಲೆಯಗೋಕಾಕ್‌ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿರುವ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಇದ್ದ ಸಣಕಲ್ಲ ಅವರು ಬರೆದಿರುವ ಕೃತಿಗಳೆಂದರೆ ಕೋರಿಕೆ, ಹುಲ್ಕಲ್ಗೆಕಿಡಿ(ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ (ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ).  ಸಹಕಾರ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಥಮ ಬಹುಮಾನ ಸಂದಿದೆ.1980ರಲ್ಲಿ ಬೆಳಗಾವಿಯಲ್ಲಿ ...

READ MORE

Related Books