ಅಂತರಂಗದ ಬೆಳಕು

Author : ಹುಸೇನಸಾಬ ವಣಗೇರಿ

Pages 92

₹ 80.00




Year of Publication: 2022
Published by: ಹುಸೇನಸಾಬ ವಣಗೇರಿ
Address: ಮುಧೋಳ್ ಫೊಸ್ಟ್, #352 ಹಳೆಪೇಟಿ ಓನಿ ಸಿಟಿ, ಯೆಲಬುರ್ಗ ತಾಲೂಕು, ಕೊಪ್ಪಳ ಜಿಲ್ಲೆ- 583236
Phone: 7829606194

Synopsys

‘ಅಂತರಂಗದ ಬೆಳಕು’ ಕೃತಿಯು ಹುಸೇನಸಾಬ ವಣಗೇರಿ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇಲ್ಲಿ ಮೊದಲ ಲೇಖನದಲ್ಲಿಯೇ ಹುಸೇನ್ ಸಾಬ್ ರವರ ಮೇಲೆ ಅವರ ತಂದೆಯ ಗಾಢ ಪ್ರಭಾವವನ್ನು ಕಾಣಬಹುದಾಗಿದೆ. "ಅಪ್ಪನ ಪ್ರೀತಿಯ ಮುಂದೆ ಮತ್ತಾವ ಪರಿಕರವೂ ದೊಡ್ಡದಲ್ಲ" ಎಂದು ನಿವೇದಿಸಿಕೊಳ್ಳುವ, ಅಪ್ಪನನ್ನು ಆತ್ಮೀಯ ಸ್ನೇಹಿತನಾಗಿ ಕಾಣುವ ಲೇಖಕರು ತನ್ನಪ್ಪನ ಬದುಕು ಬವಣೆಯ ಕುರಿತಾದ ಬರಹ ಎಂಥವರನ್ನೂ ಸಹ ಗಾಢವಾಗಿ ಕುಲುಕುವಂಥದ್ದಾಗಿದೆ. ಅದರೊಂದಿಗೆ ಅಪ್ಪನ ನೆಪದಲ್ಲಿ ಕೃಷಿಕನೊಬ್ಬನ ಬದುಕಿನ ಚಿತ್ರಣವೂ ಸಿಗುತ್ತದೆ. ಅದು ಕೇವಲ ಒಬ್ಬ ವ್ಯಕ್ತಿಯನ್ನು ನಿರ್ದೇಶಿಸದೆ ಈ ನಾಡಿನ ಎಲ್ಲಾ ಅನ್ನದಾತರ ಜೀವನದ ಮೇಲೆ ಬೆಳಕು ಚೆಲ್ಲುವಂತೆ ಮನನವಾಗುತ್ತದೆ. "ಅಪ್ಪ ಅನ್ನೋ ಪದಕ್ಕೆ ಸಾವಿರ ಆನೆಗಳ ಬಲ, ಕೋಪದಲ್ಲಿಯೂ ಪ್ರೀತಿ ತೋರುವ ಆತನ ವ್ಯಕ್ತಿತ್ವ ವರ್ಣಿಸಲಾಗದು" ಎಂಬಂತಹ ಮಾತುಗಳು ಮನವನ್ನು ಸ್ಪರ್ಶಸಿ ಮುದ ನೀಡುವುದರೊಂದಿಗೆ ಕಣ್ಣಾಳಿಗಳಲ್ಲಿ ಕಂಬನಿ ಮೂಡಿಸುತ್ತವೆ. ಒಂದು ಬರಹಕ್ಕೆ ಇರುವ ತಾಕತ್ತು ಅದು. ಅದೇ ರೀತಿ ಜನ್ಮದಾತೆಯಾದ ಅಮ್ಮನ ಕುರಿತಾಗಿ "ಓದು ಬರಹ ಅವಳಿಗೆ ಗೊತ್ತಿಲ್ಲ, ತನ್ನ ಜೀವನನುಭವದಿಂದ ಕಲಿತ ಅಧ್ಯಾಯಗಳೇ ನಮಗೆಲ್ಲಾ ಪಾಠ, ನನ್ನವ್ವನಿಗೆ ಪ್ರಪಂಚ ಜ್ಞಾನ ಕಡಿಮೆ ಇರಬಹುದು ಆದರೆ ಅವಳ ಪಾಲಿಗೆ ಮಕ್ಕಳೇ ಪ್ರಪಂಚವಿರಬಹುದೇನೋ ಎಂದು ನನಗೆ ಭಾಸವಾಗುತ್ತದೆ" ಎಂಬ ಕಕ್ಕುಲಾತಿಯ ನುಡಿಗಳಿಗೆ ದನಿಯಾಗುವುದರೊಂದಿಗೆ ಆಧುನಿಕತೆಯ ಮುಖವಾಡ ಹಾಕಿಕೊಂಡ ಜಗತ್ತು ಹೇಗೆ ಹೆತ್ತು - ಹೊತ್ತು, ಸಾಕಿ - ಸಲಹಿದ ತಂದೆ - ತಾಯಿಯನ್ನು ಪ್ರಸ್ತುತ ಕಾಲಮಾನದಲ್ಲಿ ಹೇಗೆ ಮತ್ತು ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ, ಯಾವ ಬಗೆಯ ಅಮಾನವೀಯ ಧೋರಣೆಗಳನ್ನು ತಳೆಯುತ್ತಿದೆ ಎಂಬುದರ ಬಗೆಗೆ ಚರ್ಚಿಸುತ್ತಾ ತಮ್ಮ ಇಂಗಿತವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಹೀಗೆ ವಯುಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಗೆ ಪಸರಿಸುವ ಹುಸೇನ್ ಸಾಬ್ ಅವರ ಲೇಖನಗಳು ಸಾರ್ವತ್ರಿಕ ಆಯಾಮಗಳನ್ನು ಇಲ್ಲಿ ಪಡೆದುಕೊಳ್ಳುತ್ತವೆ.

About the Author

ಹುಸೇನಸಾಬ ವಣಗೇರಿ
(01 May 1995)

ಲೇಖಕ ಹುಸೇನಸಾಬ ವಣಗೇರಿ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಮುಧೋಳದಲ್ಲಿ ನಂತರ ಪದವಿಪೂರ್ವ ಶಿಕ್ಷಣವನ್ನು ನರೇಗಲ್ಲನ ಕೆ.ಎಸ್.ಎಸ್ ಕಾಲೇಜಿನಲ್ಲಿ ಪೂರೈಸಿದರು. ಗದಗಿನ ಕನ್ನಡ ಕಿರಣ ಶಿಕ್ಷಣ ಸಮಿತಿ ಬಿ.ಎಸ್.ಡಬ್ಲೂ. ಮಹಾವಿದ್ಯಾಲಯ,ದಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯ ವಿಭಾಗದಲ್ಲಿ ಪದವೀಧರರು. ಹುಬ್ಬಳ್ಳಿಯ ಸರ್ದಾರ್ ವೀರನಗೌಡ ಪಾಟೀಲ, ಮಹಿಳಾ ವಿದ್ಯಾಪೀಠದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಲ್ಲಿ ಒಂದು ವರ್ಷ ಉಪನ್ಯಾಸಕರಾಗಿದ್ದು, ಸದ್ಯ, ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದಲ್ಲಿ ಪಿ.ಹೆಚ್.ಡಿ ವಿದ್ಯಾರ್ಥಿ. ...

READ MORE

Related Books