ಅನಿಮಿತ್ತ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 184

₹ 140.00




Year of Publication: 2013
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿ, ವಿದ್ಯಾಗಿರಿ, ಧಾರವಾಡ

Synopsys

ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅಡಿಗ, ರಾಜರತ್ನಂ, ಗೋಕಾಕ: ತೋಂಟದಾರ್ಯ ಸ್ವಾಮೀಜಿ; ಅತ್ರಿ, ಬೆಳಗಲ್ಲು ವೀರಣ್ಣ ಮುಂತಾದ ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ಮೇರು ವ್ಯಕ್ತಿತ್ವಗಳ ಜೊತೆಗಿನ ತಮ್ಮ ಒಡನಾಟದ ಕೆಲವು ವಿಶಿಷ್ಟ ಮಗ್ಗಲುಗಳನ್ನು  ನಮೂದಿಸಿದ್ದಾರೆ. ಈ ಎಲ್ಲ ಲೇಖನಗಳ ಸ್ವಾಯಿ ಗುಣ ಪ್ರೀತಿಯೇ. ಅವರ ಪ್ರತಿಯೊಂದು ವ್ಯಕ್ತಿ ಸಂಬಂಧದಲ್ಲಿ ಆಪ್ತತೆ, ಆದ್ರ್ರ ಭಾವ, ಅಂತಃಕರಣ ಮುಖ್ಯ ಸೆಲೆಯಾಗಿದೆ.

ಪಟ್ಟಣಶೆಟ್ಟಿ ಅವರ ಆತ್ಮಕಥನಾತ್ಮಕ ಮಾದರಿಯ ಬರಹಗಳೂ ಇಲ್ಲಿವೆ. ಕಾವ್ಯ ಹುಟ್ಟುವ ಹಿಂದಿನ ಪ್ರೇರಣೆ, ರಚನಾ ಕ್ಷಣದ ಅನುಭವಗಳನ್ನು ಅವರು ಸೊಗಸಾಗಿ ದಾಖಲಿಸಿದ್ದಾರೆ. ಕವಿಯ
ಒಳತೋಟೆ ಮತ್ತು ಬರಹಗಾರನಾಗಿ ರೂಪುಗೊಂಡ ಬಗೆಯನ್ನು ಸುಲಲಿತವಾದ ಗದ್ಯದಲ್ಲಿ ಹಿಡಿದಿಟ್ಟಿರುವುದು ಅನಿಮಿತ್ತದ ಹೆಗ್ಗಳಿಕೆ – ಅಗ್ಗಳಿಕೆ.

 

 

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books