ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ

Author : ಜಿ.ಪಿ. ರಾಜರತ್ನಂ

Pages 118

₹ 1.00




Year of Publication: 1948
Published by: ಹಿಂದ್ ಕಿಸಾನ್ಸ್ ಲಿಮಿಟೆಡ್
Address: 11, ಜವಾಹರ ಲಾಲ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು

Synopsys

ಪವಿತ್ರವಾದ ವಸ್ತ್ರವಿಶೇಷತೆಯೇ ಬಾವುಟ. ಇಲ್ಲಿಯ ಬಣ್ಣ, ಚಿತ್ರಗಳಿಗೂ ವಿಶೇಷ ಅರ್ಥ ಉಂಟು. ಈ ಬಾವುಟಗಳು ಆಯಾ ದೇಶದ ಸಂಸ್ಕೃತಿ-ನಂಬಿಕೆಗಳನ್ನು ಪ್ರತಿನಿಧಿಸುತ್ತವೆ. ಮಹಾಭಾರತದಲ್ಲಿ ಈ ಧ್ವಜಗಳು ಚಿನ್ನ-ಬೆಳ್ಳಿಯಿಂದ ಕೂಡಿರುತ್ತಿದ್ದವು. ಕ್ರಮೇಣ ಬಣ್ಣದ ಹಲಗೆಗಳಾಗಿ ಮಾರ್ಪಾಡು ಹೊಂದಿವೆ. ಈಗ ಬಟ್ಟೆಯಾಗಿ ಉಳಿದಿದೆ. ಬಾವುಟ ಯಾವುದರಿಂದ ಮಾಡಿದ್ದಾರೆ ಎನ್ನುವುದು ಮುಖ್ಯವಲ್ಲ. ಅದರ ಹಿರಿಮೆ-ಗರಿಮೆಗಳು ಮುಖ್ಯ. ಬಾವುಟಕ್ಕೆ ಸಂಬಂಧಿಸಿದ ಭಾರತದ ಪುರಾತತ್ವ ಸಂಶೋಧನಾ ಶಾಖೆಯ ವರದಿಗಳು, ಸಾರನಾಥ ವಸ್ತು ಸಂಗ್ರಹಾಲಯದ ಕೈಪಿಡಿ, ಬುದ್ಧನ ವಚನಗಳು, ಅಶೋಕನ ಶಾಸನಗಳು, ಗಾಂಧೀಜಿಯವರ ಬರೆಹಗಳು, ಕೆಲ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಧ್ವಜದ ಮಹತ್ವ ಹಾಗೂ ಘನತೆಯ ಬಗ್ಗೆ ಲೇಖಕರು ಬರೆದಿದ್ದಾರೆ. ಅಶೋಕ ಭಾರತ, ನಮ್ಮ ರಾಷ್ಟ್ರಧ್ವಜ, ಸಾರನಾಥ, ಸಾರನಾಥದ ಸಿಂಹಶೀರ್ಷ, ಧರ್ಮಚಕ್ರ, ದೇವನಾಂ ಪ್ರಿಯ, ಪ್ರಿಯದರ್ಶಿ, ಅಶೋಕ ಭಾರತ ಹೀಗೆ ಒಟ್ಟು 9 ಶೀರ್ಷಿಕೆಯಡಿ ಅಧ್ಯಾಯಗಳಿವೆ.

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books