ಮನಸಿನ ಮಾತು ಕೇಳಿ

Author : ಅಕ್ಷರ ದಾಮ್ಲೆ

Pages 86

₹ 80.00




Year of Publication: 2020
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಅಕ್ಷರ ದಾಮ್ಲೆ ಅವರ ಲೇಖನಗಳ ಸಂಕಲನ ‘ಮನಸಿನ ಮಾತು ಕೇಳಿ’. ಕೃತಿಗೆ ಮುನ್ನುಡಿ ಬರೆದ ಆರ್ ಶ್ರೀನಿವಾಸ ಮೂರ್ತಿ, ‘ಈ ಪುಸ್ತಕ ಮನಸ್ಸಿನ ಆರೋಗ್ಯವನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಈ ಹೊತ್ತಿಗೆಯಲ್ಲಿ ವ್ಯಕ್ತಿತ್ವ, ಜೀವನದಲ್ಲಿನ ಯಶಸ್ಸು ಹಾಗೂ ವೈಫಲ್ಯಗಳು, ಯೋಚನಾ ಶಕ್ತಿ, ನೆನಪಿನ ಶಕ್ತಿ, ಕಲಿಕೆ, ಜೀವನದ ಗುರಿ ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪ್ರಸ್ತುತಪಡಿಸಲಾಗಿದೆ.

ಮಾನಸಿಕ ಆರೋಗ್ಯದ ಈ ಎಲ್ಲಾ ಅಂಶಗಳಲ್ಲಿ ವಿಜ್ಞಾನ ಹಾಗೂ ದೈನದಿಂದ ಅಭ್ಯಾಸಗಳ ಸಂಯೋಗ ಇರುವುದು ಈ ಪುಸ್ತಕದ ವಿಶೇಷತೆ. ಲೇಖಕರು ಮಾನಸಿಕ ಆರೋಗ್ಯದ ಹಲವು ಅಂಶಗಳನ್ನು ವಿವರಿಸಲು ಧಾರ್ಮಿಕ, ಇತಿಹಾಸ, ಸಂಸ್ಕೃತಿಗಳಿಂದ ಹಲವು ಕಥೆಗಳನ್ನು ಬಳಸಿದ್ದಾರೆ. ಈ ಎಲ್ಲಾ ವರ್ಗದ ಜನರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಬಳಸುವುದಕ್ಕೆ ಸೂಕ್ತ ಪುಸ್ತಕ ಇದಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ, ವ್ಯಕ್ತಿತ್ವ ವಿಕಸನದ ಹಂತದ ಒತ್ತಡಗಳು ಹಾಗೂ ಶೈಕ್ಷಣಿಕ ಒತ್ತಡಗಳು ಸೇರಿದಂತೆ ಹಲವು ಮಾನಸಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಪುಸ್ತಕವನ್ನು ಓದುವ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಥೈಸಿಕೊಳ್ಳಬಹುದು ಹಾಗೂ ಅವರ ದೈನಂದಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಜೊತೆಗೆ, ಮನಸ್ಸಿನ ಆರೋಗ್ಯದ ವಿವಿಧ ಮುಖಗಳನ್ನು ಪರಿಚಯಿಸಿರುವ ಕಾರಣ, ಜನರ ಮಾನಸಿಕ ಆರೋಗ್ಯ ಉತ್ತಮಗೊಳ್ಳುವುದಷ್ಟೇ ಅಲ್ಲದೇ ಅಗತ್ಯವಿದ್ದಾಗ ಸಹಾಯ ಪಡೆಯಲು ಸಾಧ್ಯವಾಗುತ್ತದೆ.’ ಎಂದು ಪ್ರಶಂಸಿದ್ದಾರೆ.

About the Author

ಅಕ್ಷರ ದಾಮ್ಲೆ

ಲೇಖಕ ಅಕ್ಷರ ದಾಮ್ಲೆ ಅವರು ಮನಃಶಾಸ್ತ್ರಜ್ಞರು. ತಾಯಿ ಜಯಲಕ್ಷ್ಮಿ ದಾಮ್ಲೆ, ಬೆಂಗಳೂರಿನಲ್ಲಿ ವಾಸವಿದ್ದಾರೆ.    ...

READ MORE

Related Books