ಹೊಸಗನ್ನಡ ಸಾಹಿತ್ಯದ ನಾಲ್ಕು ಮಾರ್ಗಗಳು

Author : ಶೋಭಾ ನಾಯಕ

Pages 48

₹ 30.00




Year of Publication: 2008
Published by: ಬಾಲಾಜಿ ಪ್ರಕಾಶನ
Address: ಪ್ಲಾಟ್ ಸಂಖ್ಯೆ: 697, ಬುಡಾ ಸೆಕ್ಟರ-40, ಎನ್.ಎ. ಹನುಮಣ್ಣವರ ರಸ್ತೆ, ಹನುಮಾನ ನಗರ, ಬೆಳಗಾವಿ

Synopsys

ಲೇಖಕಿ ಶೋಭಾ ನಾಯಕ (ಪ್ರಸಾದ) ಅವರ ಕೃತಿ, ‘ಹೊಸಗನ್ನಡ ಸಾಹಿತ್ಯದ ನಾಲ್ಕು ಮಾರ್ಗಗಳು’. ಈ ಕೃತಿಗೆ ಮುನ್ನುಡಿ ಬರೆದ ಶಾಂತಿನಾಥ ದಿಬ್ಬದ ‘ ನವೋದಯ ಸಾಹಿತ್ಯದ ಹಿಂದಿನ ಪ್ರೇರಣೆಗಳನ್ನು ಪಾಶ್ಚಾತ್ಯ ಮತ್ತು ದೇಸಿ ಎಂದು ವಿಭಜಿಸಿಕೊಂಡಿರುವ ಕ್ರಮ ಸರಿಯಾಗಿದೆ. ಪ್ರತಿಯೊಂದು ಸಾಹಿತ್ಯಪಂಥ ಇತಿಮಿತಿಗಳನ್ನು ಗುರುತಿಸಿ, ಪಟ್ಟಿಮಾಡಿ ಕೊಟ್ಟಿರುವುದು ಓದುಗರ ದೃಷ್ಟಿಯಿಂದ ಹೆಚ್ಚು ಪ್ರಯೋಜನಕರವೆನಿಸುತ್ತದೆ. ಆಯಾ ಸಾಹಿತ್ಯ ಪ್ರಕಾರದ ಲಕ್ಷಣ ಬಗ್ಗೆ ತಿಳಿಸುವಾಗ ಸೂಕ್ತ ಉದಾಹರಣೆಗಳನ್ನು ಕೊಟ್ಟಿರುವುದು ಪರಿಣಾಮಕಾರಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ

 

About the Author

ಶೋಭಾ ನಾಯಕ
(16 June 1979)

ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...

READ MORE

Related Books