ಅರ್ಥರೇಖೆ

Author : ಕೃಷ್ಣ ಪರಮೇಶ್ವರ ಭಟ್ (ಕೆ.ಪಿ. ಭಟ್)

Pages 192

₹ 140.00




Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜು ಬೆಂಗಳೂರು

Synopsys

‘ಅರ್ಥರೇಖೆ’ ಕೃತಿಯು ಕೃಷ್ಣ ಪರಮೇಶ್ವರ ಭಟ್ಟ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಲೇಖನಗಳು ಭಾಷಾಶಾಸ್ತ್ರಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧಿಸಿವೆ. ಸಾಹಿತ್ಯಕೃತಿಗಳನ್ನು ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ. `ನವೋದಯ ಕಾವ್ಯದ ಭಾಷೆ ಮತ್ತು ಆಲೋಚನೆ‘ `ರೂಪಕಗಳ ಬಳಕೆ‘ ಹಾಗೂ `ಜಿ.ಎಸ್.ಎಸ್. ಕಾವ್ಯ ಭಾಷೆ’ ಲೇಖನಗಳಲ್ಲಿ ಶಬ್ದಗಳ ಬಳಕೆಯನ್ನು ಆಧರಿಸಿದ ವಿಶ್ಲೇಷಣೆಯಿದೆ. `ಹರಿವ ನೀರಿದು: ಒಂದು ಭಾಷಿಕ ವಿಶ್ಲೇಷಣೆ‘ ಎಂಬುದು ವಾಕ್ಯರಚನೆಯನ್ನಾಧರಿಸಿದೆ. `ಪಾಂಡುವಿನ ಮರಣ ಪ್ರಸಂಗ‘ ಹಾಗೂ `ಮಾಸ್ತಿಯವರ ಕತೆಗಳ ಭಾಷೆ‘ಗಳಲ್ಲಿ ವಾಕ್ಯಗಳ ಒಳರಚನೆ ಹಾಗೂ ಭಾಷೇತರ ಮಾಹಿತಿಗಳ ಹಿನ್ನೆಲೆಯಲ್ಲಿ ವಸ್ತುವನ್ನು ನೋಡುವ ಪ್ರಯತ್ನವಿದೆ. `ಶಂ. ಬಾ. ಅವರ ದೃಷ್ಟಿಯಲ್ಲಿ ಭಾಷೆ ಮತ್ತು ಸಂಸ್ಕೃತಿ‘ `ಕನ್ನಡ ನುಡಿಯ ಜೀವಾಳ‘ – ಲೇಖನಗಳಲ್ಲಿ `ಭಾಷೆ‘ಯ ಹಿನ್ನೆಲೆಯಲ್ಲಿ ಅವುಗಳ ರಚನೆಯನ್ನು ಗಮನಿಸಲಾಗಿದೆ.

About the Author

ಕೃಷ್ಣ ಪರಮೇಶ್ವರ ಭಟ್ (ಕೆ.ಪಿ. ಭಟ್)

ಕೃಷ್ಣಪರಮೇಶ್ವರಭಟ್ (ಕೆ.ಪಿ.ಭಟ್) - ಹುಟ್ಟಿದ ಊರು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೋಕಿನ ಮುತ್ತಿಗೆ(1947). ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ. ಎಂ.ಚಿದಾನಂದ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕನ್ನಡ-ತೆಲುಗು ದ್ವಿಭಾಷಿಕತೆ ಕುರಿತು ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ. ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತಿ.  ಭಾಷಾ ವಿಜ್ಞಾನ. ಭಾಷಾ ಚರಿತ್ರೆ ಮುಂತಾದ ವಿಷಯಗಳ ಕುರಿತು ಕನ್ನಡ. ಇಂಗ್ಲೀಷ್ ನಲ್ಲಿ ಹಲವು ಲೇಖನಗಳು ಪ್ರಕಟಗೊಂಡಿವೆ. ಪ್ರಕಟಿತ ಕೃತಿ- ಅರ್ಥರೇಖೆ  ...

READ MORE

Related Books