ಕದಳಿ ಹೊಕ್ಕು ಬಂದೆ

Author : ರಹಮತ್ ತರೀಕೆರೆ

Pages 264

₹ 225.00

Buy Now


Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

ಸಂಸ್ಕೃತಿ ಚಿಂತಕ, ಸಂಶೋಧಕ ರಹಮತ್ ತರೀಕೆರೆ ಪ್ರವಾಸ- ಸುತ್ತಾಟಗಳಲ್ಲಿಯೂ ಆಸಕ್ತರಾದವರು. ತಮ್ಮ ಪ್ರವಾಸದ ಕಥನಗಳ ಬರಹಗಳನ್ನು ಈ ಗ್ರಂಥದಲ್ಲಿ ಸಂಕಲಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 24 ಲೇಖನಗಳಿವೆ. ಅಕ್ಕಮಹಾದೇವಿಯ ಲೀನವಾದ ಶ್ರೀಶೈಲ ಸಮೀಪದ ‘ಕದಳಿ’ ಹೊಕ್ಕು ಬಂದ ಲೇಖನದಿಂದ ಆರಂಭವಾಗುತ್ತದೆ. ಪುತಿನ ಅವರ ಮೇಲುಕೋಟೆ, ಹಿಮಾಲಯದ ವಿಚಿತ್ರ ಹಳ್ಳಿ, ಕೆರೂರಿನ ಖತಲ ರಾತ್ರಿ, ತೇಜಸ್ವಿಯಿಲ್ಲದ ‘ನಿರುತ್ತರ’, ಕೊಡಚಾದ್ರಿಯಲ್ಲಿ ಒಂದಿರುಳು ಹಾದಿತಪ್ಪಿ, ಪುರಾತನ ಲಖನೋ; ಸದ್ಯದ ವರಸೆ, ಹಳ್ಳಿಯಾದ ಹಳೆಯ ರಾಜಧಾನಿ, ಇನ್ನೂ ಬಾರದ ಕೊಟ್ಟೂರು ರೈಲು, ರೈಲಿನಲ್ಲಿ ಹಿಮಗಿರಿಯ ಪಯಣ, ರಾಮದುರ್ಗದ ಸಪ್ಪಳಿಲ್ಲದ ಕೆಲಸಗಾರ, ಸಕ್ರೆಬಯಲಿನ ಮಾವುತರು, ಮಂಗಳಾಪುರದ ಕರಡಿ ಖಂದರರು, ಮಳೆಗಳಲ್ಲಿ ‘ಮದುಮಗಳು’ ಕಲ್ಕತ್ತೆಯಲ್ಲಿ ಕನ್ನಡದ ಕೊಂಡಿ ಬರಹಗಳಿವೆ. ಸುತ್ತಾಟದ ಅನುಭವ ಕಟ್ಟಿ ಕೊಡುವ ರೀತಿ ಸೊಗಸಾಗಿದೆ. ಪ್ರವಾಸದಲ್ಲಿ ಆಸಕ್ತರಾಗಿರುವವರು ಮಾತ್ರವಲ್ಲದೆ ಸಂಸ್ಕೃತಿ- ಸಾಹಿತ್ಯದಲ್ಲಿ ಆಸಕ್ತರಾಗಿರುವವರು ಕೂಡ ಓದಬಹುದಾದ ಪುಸ್ತಕ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Reviews

(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)

ರಹಮತ್ ತರೀಕರೆಯವರ ಬರಹಗಳೆಂದರೆ, ಹೊಸ ಲೋಕವೊಂದನ್ನು ಪ್ರವೇಶಿಸಿದಂತೆ. ನಮಗರಿವಿಲ್ಲದ ಎಷ್ಟೊಂದು ವಿಚಾರಗಳು ಅಲ್ಲಿ ಒಂದರ ಹಿಂದೊಂದು ಸಾಲುಗಟ್ಟಿ ನಮ್ಮನ್ನೆದುರುಗೊಳ್ಳುತ್ತವೆ. ವ್ಯಾಪಕ ಓದು - ಅಧ್ಯಾಪನ - ಪ್ರವಾಸ - ಬರವಣಿಗೆಗಳಿಂದ ಕಂಗೆಡದೆ. ತುಂಬ ಅಪ್ತವಾಗಿ ಅವನ್ನು ಕಂಡಿದ್ದರಿಂದ ಇದುವರೆಗೂ ೨೩ ಕೃತಿಗಳನ್ನು ಅವರು ಬರೆಯಲು ಸಾಧ್ಯವಾಯಿತು. ಈ ಕೃತಿಯ ಬಗ್ಗೆ ಹೇಳುವುದಾದರೆ ಇತಿಹಾಸ ಪ್ರಸಿದ್ಧ ತಾಣಗಳೆಲ್ಲವೂ ಇವರನ್ನು ಕೈಬೀಸಿ ಕರೆಯುತ್ತಿರುತ್ತವೆ. ಓಗೊಟ್ಟು ಇವರು ಹೊರಟರೆಂದರೆ ಒಂದು ತರಗೆಲೆಯ ಮರ್ಮರವನ್ನೂ ಸೂಕ್ಷ್ಮವಾಗಿ ಕಿವಿಗೊಟ್ಟು ಕೇಳಿಸಿಕೊಳ್ಳುತ್ತ ಪ್ರವಾಸದ ಕ್ಷಣಕ್ಷಣವನ್ನೂ ಆಸ್ವಾದಿಸಬಲ್ಲವರು. ಇವರ ಮೊದಲ ಆಯ್ಕೆ ಬೆಟ್ಟ ಪ್ರದೇಶಗಳು, ಹಳ್ಳಿಗಾಡುಗಳು, ಸಮುದ್ರದ ನಡುವೆ ಇಣುಕುತ್ತಿರುವ ದ್ವೀಪ ಸಮೂಹಗಳು ಸೌಂದರ್ಯದ ಜೊತೆಗೆ ಸ್ಥಳೀಯ ವಿಶೇಷತೆಗಳೇನಾದರೂ ಇದ್ದರೆ ಮೊದಲು ತಿಳಿದುಕೊಳ್ಳುವುದು, ಊರಿನ ಆದರಣೀಯ ವ್ಯಕ್ತಿಗಳೊಂದಿಗೆ ಸಂವಾದ, ಪುರಾಣ ಪ್ರಸಿದ್ಧ ಸ್ಥಳಗಳಲ್ಲಿನ ಕಳೆದುಹೋದ ಸಂಸ್ಕೃತಿಯನ್ನು ಇಂದಿನ ಕಾಲಕ್ಕೆ ತಳಕುಹಾಕಿ ತುಲನೆ ಮಾಡುವುದು ಇವೆಲ್ಲ ರಹಮತ್‌ಗೆ ತುಂಬ ಪ್ರಿಯವಾದ ಹವ್ಯಾಸಗಳು. ಒಂದೆಡೆ ಕುಳಿತುಮಾಡುವ ಅಧ್ಯಯನದಿಂದ ಸಿಗುವ ಜ್ಞಾನ ಒ೦ದು ತೆರನಾದರೆ, ದೇಶ ಸಂಚಾರ ಮಾಡುತ್ತಾ ಸ್ವಾನುಭವದಿ೦ದ ಗಳಿಸಿದ ಸತ್ಯದ ಅರಿವೇ ಇನ್ನೊಂದು ತರಹದ್ದು. ಅದನ್ನು ಈ ಪುಸ್ತಕದಲ್ಲಿ ಮನಗಾಣಿಸಲಾಗಿದೆ.

 

Related Books