ಕಿರಿಯರು ಕಂಡ ಗಾಂಧಿ

Author : ಸತ್ಯಮಂಗಲ ಮಹಾದೇವ

Pages 156

₹ 140.00




Year of Publication: 2020
Published by: ಗಾಂಧಿಯಾನ ಟ್ರಸ್ಟ್
Address: ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ಕಿರಿಯರು ಕಂಡ ಗಾಂಧಿ’ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಡಾ. ಸತ್ಯಮಂಗಲ ಮಹಾದೇವ ಅವರು ಸಂಪಾದಿಸಿರುವ ಲೇಖನಗಳ ಸಂಕಲನವಿದು. 25 ಲೇಖಕರು ಮಹಾತ್ಮ ಗಾಂಧೀಜಿ ಅವರ ಕುರಿತು ಬರೆದ 25 ಲೇಖನಗಳಿವೆ. ಆತ್ಮಸುಖದ ಸರಳಮಾರ್ಗ - ಗಾಂಧೀಮಾರ್ಗ, ಗಾಂಧಿ ಎಂಬ ತೋರುದೀಪ , ಬಾಪು ಹಾಗೂ ಪ್ರಸ್ತುತತೆ, ಕೈಮಗ್ಗಗಳು ಮತ್ತು ಗಾಂಧೀಜಿ, ಗಾಂಧಿ ಪಂಚಾಯ್ತಿ, ಸಂತನೊಬ್ಬನ ವಿವೇಕದ ನಾಡಿನಲ್ಲಿ, ನನ್ನೊಳಗೆ ಗಾಂಧಿ ಕಾಣುವ ತಾಕತ್ತು, ಶಾಂತಿಯ ತವರು ಗಾಂಧಿ, ಗಾಂಧಿ ವ್ಯಕ್ತಿತ್ವದ ದ್ವಂದ್ವಗಳು, ಗಾಂಧಿ ಮತ್ತು ಸತ್ಯಾಗ್ರಹ, ನಮ್ಮಳೊಗೊಬ್ಬ ಗಾಂಧಿ, ನನ್ನನು ಕವಿಯನ್ನಾಗಿಸಿದರು ಗಾಂಧೀ, ಸತ್ಯಾನ್ವೇಷಕಗಾಂಧಿ, ತಕರಾರುಗಳ ನಡುವೆಯೂ ಗಾಂಧಿಯೊಡನೆ, ಮಹಾತ್ಮಗಾಂಧಿ ಚಿಂತನೆಗಳ ಪ್ರಸ್ತುತತೆ, ಆರ್ಥಿಕತೆಯ ಹರಿಕಾರರಾಗಿ ಗಾಂಧಿ, ಗಾಂಧಿ ಧ್ಯಾನ ಮತ್ತು ಸಂವಿಧಾನಬದ್ಧ ದಾರ್ಶನಿಕತೆ, ಗಾಂಧಿ ಎಂಬ ಸರಳತೆಯ ಸಂತ, ಸಂತರಾದವರಿಗೆ ಪಶ್ಚಿಮವಿರುವುದಿಲ್ಲ, ಮತ್ತೆ ಮತ್ತೆ ಸಕಾಲಿಕವಾಗುವ-ಗಾಂಧಿ, ಎದೆಯಬಾನಿನ ಚಂದಿರ, ನಾ ಕಂಡಂತೆ ಗಾಂಧಿ, ಸೋತವರ ಸಂತೈಸುವ ಸಂತನೊಂದಿಗೆ, ಗಾಂಧಿಯೆಡೆಗೆ ನನ್ನ ನಡಿಗೆ, ನನ್ನೊಳಗಿನ ಗಾಂಧಿ, ಎಷ್ಟೊಂದು ಘಳಿಗೆ ನೆನೆದೇನಾ, ಆದರ್ಶಗಳೇ ಬದುಕಿಗೆ ಜೀವ ಚೈತನ್ಯ, ನನ್ನ ಗಾಂಧಿ, ಕ್ರೌರ್ಯಕ್ಕೆ ಶಾಂತಿಯನ್ನು ಅತೃಪ್ತಿಗೆ ಅಸಹಕಾರವನ್ನು ಪರಿಚಯಿಸಿದ ಗಾಂಧಿ, ಬಾಲ್ಯದಲ್ಲಿ ನಾನು ಕಂಡಂತೆ ಬಾಪು........ ಹಿರಿಯ ಲೇಖಕ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಬೆನ್ನುಡಿ ಬರೆದು ‘ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಉಜ್ಜೀವನಕ್ಕೆ ಗಾಂಧೀಜಿ ಅವರ ಮಾತುಗಳು, ಬರೆಹಗಳು, ಜೀವನಾದರ್ಶಗಳೇ ನಮಗೆ ಪರಿಹಾರೋಪಾಯಗಳಾಗಿವೆ’  ಎಂದು ಅಭಿಪ್ರಾಯಪಟ್ಟಿದ್ದಾರೆ. 

‘21ನೇ ಶತಮಾನದ ಸಮಸ್ಯೆಗಳಿಗೆ ಗಾಂಧೀಜಿ ಅವರ ಚಿಂತನೆಗಳು ಪರಿಹಾರ ಸೂಚಿಸಬಲ್ಲವು. ಸತ್ಯಮಂಗಲ ಮಹಾದೇವ ನಮ್ಮ ನಡುವಿನ ಸೂಕ್ಷ್ಮ ಸಂವೇದಿಯಾದ ಕವಿ. ನಮ್ಮ ಕಿರಿಯ ಸಮಕಾಲೀನರು, ಗಾಂಧೀಜಿ ಅವರನ್ನು ಹೇಗೆ ಪರಿಭಾವಿಸುತ್ತಿದ್ದಾರೆಂಬುದು ಕುತೂಹಲಕಾರಿಯಾದುದು ಎಂಬುದು ಅವರ ಅಭಿಪ್ರಾಯ. ವರ್ತಮಾನದ ಸಂಕಷ್ಟಗಳನ್ನು ನುಂಗಿಕೊಂಡು ಬವಣೆ ಪಡುತ್ತಿರುವಾಗ, ಗಾಂಧೀ ಸ್ಮೃತಿಯು ಇಂಥವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇಲ್ಲಿಯ ಬರೆಹಗಳಲ್ಲಿ ಅದು ಸ್ಪುಟವಾಗಿ ಕಾಣುತ್ತಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Related Books