ಗಾಂಧಿ ವಿಚಾರಧಾರೆ ಮತ್ತು ಅಭಿವೃದ್ಧಿಯ ಆತಂಕಗಳು

Author : ಎನ್. ಜಗದೀಶ್ ಕೊಪ್ಪ

Pages 232

₹ 195.00




Year of Publication: 2020
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

‘ಗಾಂಧಿ ವಿಚಾರಧಾರೆ ಮತ್ತು ಅಭಿವೃದ್ಧಿಯ ಆತಂಕಗಳು’ ಲೇಖಕ ಜಗದೀಶ ಕೊಪ್ಪ ಅವರ ಲೇಖನಗಳ ಸಂಕಲನ. ಇಲ್ಲಿ ಗಾಂಧಿ ವಿಚಾರಧಾರೆಯನ್ನು ಕುರಿತು ಐದು ದೀರ್ಘ ಲೇಖನಗಳು, ಹಾಗೂ ಭಾರತದ ಕೃಷಿರಂಗದ ಬಿಕ್ಕಟ್ಟುಗಳನ್ನು ಕುರಿತು ಕುಲಾಂತರಿ ತಳಿಗಳು, ಕೃಷಿ ವಿಜ್ಞಾನಿಗಳ ವಂಚನೆ, ಮಾನ್ಸಂಟೊ ಎಂಬ ಮಹಾಮಾರಿ ಬೀಜಕಂಪನಿಯ ಇತಿಹಾಸ, ರೈತರ ಆತ್ಮಹತ್ಯೆ, ವಿದರ್ಭ ವಿದವೆಯ ನೋವಿನ ಕಥನ ಕುರಿತ ಆರು ಲೇಖನಗಳು, ಪಶ್ಚಿಮ ಘಟ್ಟದ ಕಥೆ ವ್ಯಥೆ , ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ ಅವಲೋಕನ ಮತ್ತು ದೇವರ ಕಾಡು ಎಂಬ‌ ನಮ್ಮ ಪೂರ್ವಿಕರ ಜ್ಞಾನ ಶಿಸ್ತು ಕುರಿತು ಎರಡು ಲೇಖನಗಳು, ಅಪ್ಪಿಕೋ‌ ಚಳವಳಿಯ‌ ಇತಿಹಾಸ, ಮಲೀನ ಗಂಗೆಯ ಗಾಥೆ, ಪ್ಲಾಸ್ಟಿಕ್ ಮತ್ತು ‌ಇ ತ್ಯಾಜ್ಯ, ಬಯಲು ಶೌಚಾಲಯದ ಸಮಸ್ಯೆಗಳು, ಅಮರ್ಥ್ಯ ಸೇನ್ ಹಾಗೂ ಡಾ.ವಂದನಾ ಶಿವ ಇವರ‌ ಚಿಂತನೆಗಳ ಲೇಖನಗಳು ಹೀಗೆ ಒಟ್ಟು 30ಕ್ಕೂ ಹೆಚ್ಚು ಲೇಖನಗಳು ಸಂಕಲನಗೊಂಡಿವೆ.

ಈ ಕೃತಿಯು ವರ್ತಮಾನದ ಭಾರತದ ಬಿಕ್ಕಟ್ಟು ಹಾಗೂ ಅಭಿವೃದ್ಧಿಯ ವಿಕಾರಗಳನ್ನು ತೆರದಿಡುತ್ತದೆ. ವಿಜಯವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಕರಾವಳಿ ಮುಂಜಾವು ದಿನಪತ್ರಿಕೆ ಮತ್ತು ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಲೆಖನಗಳಿಗೆ 2015ರಲ್ಲಿ 50 ಸಾವಿರ ನಗದು ಒಳಗೊಂಡ ಕರ್ನಾಟಕ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, 2017ರಲ್ಲಿ ಬೆಳಗಾವಿ ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ 50 ಸಾವಿರ ನಗದು ಮತ್ತು ಕಟ್ಟಿಮನಿ ಪತ್ರಿಕೋದ್ಯಮ ಪ್ರಶಸ್ತಿ. ಮೈಸೂರು ಕುವೆಂಪು ವಿದ್ಯಾವರ್ಧಕ ಸಂಘದ 25 ಸಾವಿರ ರೂ. ನಗದನ್ನು ಒಳಗೊಂಡ ಹೆಚ್.ಕೆ. ವೀರಣ್ಣಗೌಡ ಪ್ರಶಸ್ತಿ ಮತ್ತು ಅದೇ ವರ್ಷ ಬೆಂಗಳೂರು ಅನಿಕೇತನ ಬಳಗದ 25 ಸಾವಿರ ರೂ. ನಗದು ಮತ್ತು ತೇಜಸ್ವಿ ಹೆಸರಿನ‌ ಪತ್ರಿಕೋದ್ಯಮ ಪ್ರಶಸ್ತಿ ದೊರಕಿದ್ದು ನನ್ನ ಪತ್ರಿಕೋದ್ಯಮದ ಬದುಕು ‌ಸಾರ್ಥಕ ಎನಿಸಿದೆ’  ಎನ್ನುತ್ತಾರೆ ಲೇಖಕ ಜಗದೀಶ ಕೊಪ್ಪ.

 

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books