ವಡೇವು

Author : ಸಿದ್ಧರಾಮ ಹಿರೇಮಠ

Pages 212

₹ 125.00




Year of Publication: 2013
Published by: ಅಂಬಾರಿ ಪ್ರಕಾಶನ
Address: ಮೈಸೂರು

Synopsys

‘ವಡೇವು’ಲೇಖಕ ಸಿದ್ಧರಾಮ ಹಿರೇಮಠ ಅವರ ಕೃತಿ. ಒಂದು ಸೃಜನಶೀಲ ಮನಸ್ಸು ಸಾಮಾನ್ಯರ ಜಾಡಿನಲ್ಲಿ ನಡೆದಾಡಿದ ಅನುಭವದ ಕಥನ. ಒಮ್ಮೆ ಗುಲ್‌ಮೊಹರ್‌ನಂತೆ ಅರಳುವ, ಮತ್ತೊಮ್ಮೆ ಮಂಡಕ್ಕಿಯೊಂದಿಗೆ ಉರಿಯುವ ಬದುಕನ್ನು ಕಾಣುವ ವೈರುಧ್ಯಗಳ ಮಧ್ಯೆ ಸಾಗುವ ಈ ಪ್ರಯಾಣದ ವೇಗವೇ ಹೆರಿಗೆ ಸ್ವರೂಪದ್ದು. ವರದಿಗಳಲ್ಲಿ ಸಮಾಜದ ಮಧ್ಯೆ ಮನುಷ್ಯನನ್ನು ಹುಡುಕುವುದು ಒಂದು ಮಾದರಿಯಾದರೆ, ಸಮಸ್ಯೆಗಳ ಮಧ್ಯೆ ಬದುಕನ್ನು ರೂಪಿಸಿಕೊಳ್ಳುವವರ ಮತ್ತೊಂದು ಮಾದರಿ ಇದೆ. ಹಿರೇಮಠರಿಗೆ ಇಲ್ಲಿ ಎರಡನೆಯ ಮಾದರಿ ಇಷ್ಟವಾಗಿದೆ. ಬದುಕನ್ನು ವಿಶ್ಲೇಷಿಸುವ, ಪ್ರಶ್ನಿಸುವ ಅವಕಾಶವನ್ನು ಪಡೆದುಕೊಂಡ ಇಲ್ಲಿಯ ಲೇಖನಗಳು 'ಪ್ರಾದೇಶಿಕ ಕೈಪಿಡಿ'ಯಂತಿವೆ.

About the Author

ಸಿದ್ಧರಾಮ ಹಿರೇಮಠ
(31 October 1965)

ಸಿದ್ಧರಾಮ ಹಿರೇಮಠ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರು. ಬಾನುಸುರಿದ ಮಾತು, ಅನನ್ಯ, ನನ್ನೊಳಗಿನ ನಾನು, 35 ಗಜಲು 45 ಹೈಕುಗಳು, ಇವರ ಕವನ ಸಂಕಲನಗಳಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಆಂಡಯ್ಯ ಕೃತಿಯನ್ನು ಸಂಪಾದಿಸಿದ್ದಾರೆ. ವಡೇವು ಕೂಡ್ಲಿಗಿ ತಾಲೂಕಿನ ವೈಶಿಷ್ಟ್ಯಗಳ ಲೇಖನಗಳ ಸಂಗ್ರಹವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಗಜಲ್ ಕೃತಿಯಲ್ಲಿ ಇವರ ಗಜಲ್ ಗಳು ಪ್ರಕಟಗೊಂಡಿವೆ. ...

READ MORE

Related Books