ಕೊಪೆನ್ ಹೇಗನ್ ಋತುಸಂಹಾರ

Author : ನಾಗೇಶ ಹೆಗಡೆ

Pages 120

₹ 72.00




Year of Publication: 2010
Published by: ಭೂಮಿ ಬುಕ್ಸ್‌

Synopsys

ಕೋಪನ್ ಹೇಗನ್ ಋತುಸಂಹಾರ ಎಂಬ ಪುಸ್ತಕವು ನಾಗೇಶ ಹೆಗಡೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ 'ಸಂಹಾರ'ಕ್ಕೆ ಸಂಹಾರದ್ದೇ ಅರ್ಥವಿದೆ. ಮನುಷ್ಯನ ಅತಿಯಾಸೆ ಮತ್ತು ಅಕೃತ್ಯಗಳಿಂದಾಗಿ ಭೂಮಿಯ ಹವಾಮಾನ ಏರುಪೇರು ಆಗುತ್ತಿದೆ. ಕಾಲಕಾಲಕ್ಕೆ ಮಳೆ, ಚಳಿ, ಬೇಸಿಗೆ ಇವೆಲ್ಲ ಹದವಾಗಿದ್ದರೆ ಋತುಗಳು ಸರಿಯಾಗಿವೆ. ನಿಸರ್ಗ ಸಮತೋಲವಾಗಿದೆ ಎನ್ನುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವೆಲ್ಲ ಅಧ್ವಾನವಾಗುತ್ತಿವೆ. ಋತುಗಳ ಸಂಹಾರವೇ ಆಗುತ್ತಿದೆ. ಈ ಸಮಸ್ಯೆಯ ವಿವಿಧ ಆಯಾಮಗಳನ್ನು ಚರ್ಚಿಸುವುದು ಈ ಗ್ರಂಥದ ಉದ್ದೇಶ ಎಂದು ಲೇಖಕರು ಪುಸ್ತಕದ ಬಗ್ಗೆ ತಿಳಿಸಿದ್ದಾರೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books