ನೆನಪಿನ ಡಬ್ಬಿ

Author : ಮಹೇಶ ಅರಬಳ್ಳಿ

Pages 136

₹ 130.00




Year of Publication: 2021
Published by: ಕವಿತಾ ಪ್ರಕಾಶನ
Address: #101, ಸೃಷ್ಠಿ ಸಾಲಿಗ್ರಾಮ ಅಪಾರ್ಟ್ ಮೆಂಟ್, ಜಯಲಕ್ಷ್ಮೀ ವಿಲಾಸ್ ರೋಡ್, ಚಾಮರಾಜಪುರಂ, ಮೈಸೂರು-570025
Phone: 9880105526

Synopsys

‘ನೆನಪಿನ ಡಬ್ಬಿ’ ಬದುಕಿಗೆ ಹೆಗಲಾದ ಅಪ್ಪನ ಚಿತ್ರಣ ಕೃತಿಯು ಮಹೇಶ ಅರಬಳ್ಳಿ ಅವರ ನೆನಪುಗಳ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ವೊರಬದ ಮಲ್ಲಿಕಾರ್ಜುನ ಅವರು, ‘ನಮ್ಮ ಸಮಾಜದಲ್ಲಿ ಅಮ್ಮನನ್ನು ನೆನಪಿಸಿಕೊಂಡು ಕವಿತೆ ರಚನೆ, ಅನುಭವ ಕಥನ ರಚನೆ ಮಾಡುವವರು ಜಾಸ್ತಿ, ಅದೇಕೋ ಅಪ್ಪನನ್ನು ನೆನಪಿಸಿಕೊಳ್ಳುವುದು ತುಸು ಕಡಿಮೆಯೇ ಎಂದು ಹೇಳಬಹುದು. ಈ ಪುಸ್ತಕದಲ್ಲಿ ಬದುಕಿಗೆ ಹೆಗಲಾದ ಅಪ್ಪನ ಚಿತ್ರಣ'ವನ್ನು ಮಹೇಶ ಅರಬಳ್ಳಿ ಕಟ್ಟಿಕೊಟ್ಟಿದ್ದಾರೆ.  ಈ ಕೃತಿಯಲ್ಲಿ ಮಹೇಶ ತಮ್ಮ ತಂದೆಯ ಬಗೆಗಿನ ನೆನಪುಗಳನ್ನು ತುಂಬಾ ಆಪ್ತವಾಗಿ ದಾಖಲಿಸಿದ್ದಾನೆ. ತಂದೆಯನ್ನು ಕೇಂದ್ರವಾಗಿಟ್ಟುಕೊಂಡು ಅಜ್ಜ, ಅಜ್ಜಿ, ಇತರ ಸಂಬಂಧಿಗಳನ್ನು ನೆನಪಿಸಿಕೊಂಡಿದ್ದಾನೆ. ತಾಯಿ, ತನ್ನ ಅಕ್ಕಂದಿರು, ಸೋದರ ಇವರೆಲ್ಲರನ್ನೊಳಗೊಂಡಂತೆ ತನ್ನನ್ನು ಅಪ್ಪ ಹೇಗೆ ಸಲುಹಿದ ಎಂಬುದನ್ನು ಬಿಡಿ ಬಿಡಿ ಚಿತ್ರಗಳ ಚಿತ್ತಾರದ ಮೂಲಕ ತುಂಬ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾನೆ. ಆದರೆ ಇದು ಕೇವಲ ವ್ಯಕ್ತಿಯನ್ನು ಕುರಿತ ಅಥವಾ ಒಂದು ಕುಟುಂಬದ ಪ್ರವರವನ್ನು ದಾಖಲಿಸುವ ಪ್ರಯತ್ನ ಮಾತ್ರ ಅಲ್ಲ ಎನ್ನುವುದು ತೀರಾ ಗಮನಾರ್ಹ. ಆಧುನಿಕ ಬದುಕು ನಮ್ಮ ಎಲ್ಲ ಕುಟುಂಬಗಳಿಗೆ, ಕುಟುಂಬ ಸಂಬಂಧಗಳಿಗೆ ಒಂದು ಸೀಮಿತ ಚೌಕಟ್ಟನ್ನು ಹಾಕಿದೆ. ಇವುಗಳ ನಡುವೆಯೇ ವಾತ್ಸಲ್ಯದ ಒಳತಂತು ನಮ್ಮ ಬದುಕನ್ನು ಹೇಗೆ ಚ೦ದಗೊಳಿಸಬಹುದು ಎಂಬುದನ್ನು ಮಹೇಶ ತನ್ನ ಬರಹಗಳ ಮೂಲಕ ನಿರ್ವಹಿಸಿದ್ದಾನೆ. ಜೊತೆಗೆ ಸಣ್ಣ ಸಣ್ಣ ಪ್ರಸಂಗಗಳ ಮೂಲಕವೇ ಬದುಕಿಗೊಂದು ದೊಡ್ಡ ಸಂಚಲನ ನೀಡುವ ಸೂಕ್ತ ಇಲ್ಲಿದೆ. ಇಂಥ ಬರಹಗಳ ಗುಚ್ಚವನ್ನು ‘ನೆನಪಿನ ಡಬ್ಬಿ' ಎಂದು ಕರೆಯಲಾಗಿದೆ. ಇದೊಂದು ಧ್ವನಿಪೂರ್ಣ ಶೀರ್ಷಿಕೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ಮಹೇಶ ಅರಬಳ್ಳಿ

ಮಹೇಶ ಅರಬಳ್ಳಿ ಅವರು ಮೂಲತಃ ಮೈಸೂರಿನವರು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು, ಇನ್ಪೋಸಿಸ್ ಕಂಪೆನಿಯಲ್ಲಿ ಐಟಿ ಮ್ಯಾನೇಜರ್ ಆಗಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕೃತಿಗಳು : ನೆನಪಿನ ಡಬ್ಬಿ ...

READ MORE

Related Books