ಸರಕಾರಿ ನೌಕರಿಯ ಅಂತರಂಗ ಬಹಿರಂಗ

Author : ಎಸ್. ಜಯಶ್ರೀನಿವಾಸ ರಾವ್

Pages 140

₹ 135.00




Year of Publication: 2021
Published by: ಸಾಹಿತ್ಯ ಸುಧೆ ಪ್ರಕಾಶನ
Address: ಎಂಐಜಿ 45, ಹುಡ್ಕೋ 2ನೇ ಹಂತ, ವಿವೇಕಾನಂದ ಸರ್ಕಲ್‌ ಹತ್ತಿರ ಬೆಂಗಳೂರು.

Synopsys

‘ಸರಕಾರಿ ನೌಕರಿಯ ಅಂತರಂಗ ಬಹಿರಂಗ’ ಕೃತಿಯು ಮೋಹನದಾಸ ಕಿಣಿ ಅವರ ಲೇಖನಗಳ ಸಂಕಲನವಾಗಿದೆ. ಇಲ್ಲಿನ ಲೇಖನಗಳು ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಟಕವಾಗಿರುವ ಬರಹಗಳಾಗಿವೆ. ಈ ಕೃತಿಯಲ್ಲಿ 26 ಲೇಖನಗಳಿವೆ. ರಾಜಕಾರಣಿಗಳು ಒತ್ತಡ, ಕಾರ್ಯ ಒತ್ತಡ, ಸಹೋದ್ಯೋಗಿಗಳ ಜತೆಗಿನ ಒಡನಾಟ, ಸರಕಾರಿ ನೌಕರರ ಮಾಮೂಲಿನ ವರ್ಗಾವಣೆ ಇದೇ ಈ ಪುಸ್ತಕದ ತಿರುಳಾಗಿದೆ. ವಿಷಯ ಮಂಡನೆ, ಹೆಸರು ಉಲ್ಲೇಖಿಸದೆ ಉದಾಹರಣೆ ನೀಡಿರುವ ಕತೆಗಳು, ಸಮಸ್ಯೆ ಯೋಜನೆಯ ವೈಫಲ್ಯ, ಈ ಎಲ್ಲಾ ಆಯಾಮಗಳು ಇಲಾಖೆಯ ಕಾರ್ಯವೈಖರಿಯ ಅರಿವು ಇಲ್ಲದವರಿಗೂ ಅರ್ಥವಾಗುವ ಹಾಗೆ ವಿವರಿಸಿರುವ ಲೇಖಕರ ಬರವಣಿಗೆ ಶೈಲಿ ಇಲ್ಲಿ ಭಿನ್ನವಾಗಿದೆ. ಲಂಚ, ಅಂತರ್ಜಾಲ, ನಿಯಂತ್ರಿತ ಆಡಳಿತ ವ್ಯವಸ್ಥೆ, ಸರಕಾರಿ ನೌಕರರ ವರ್ಗಾವಣೆ ಎಂಬ ಚಿನ್ನದ ಗಣಿ, ಗುತ್ತಿಗೆ ಕಾರ್ಮಿಕ ವ್ಯವಸ್ಥೆಯ ಹೊರನೋಟ ಒಳನೋಟ, ಆರೋಗ್ಯ ವಿಮಾ ಯೋಜನೆಯ ಕಟು ಸತ್ಯಗಳು, ಸರಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವೇ ? ಹೀಗೆ ಎಲ್ಲಾ ವಿಚಾರಗಳು ಇಲ್ಲಿ ವಿಶ್ಲೇಷಿತವಾಗಿದೆ.

About the Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ...

READ MORE

Related Books