ವೈದ್ಯರ ಚೌ ಚೌ ಬಾತ್

Author : ಎ ಪಿ ಭಟ್

Pages 372

₹ 0.00




Year of Publication: 2022
Published by: ಜ್ಞಾನ ಗಂಗಾ ಪ್ರಕಾಶನ ಪುತ್ತೂರು
Address: ಜ್ಞಾನ ಗಂಗಾ ಪುಸ್ತಕ ಮಳಿಗೆ ಮುಖ್ಯ ರಸ್ತೆ ಪುತ್ತೂರು 574201
Phone: 9480451560

Synopsys

ಲೇಖಕ ಡಾ. ಎ.ಪಿ. ಭಟ್‌ರವರ ಎರಡನೇ ಕೃತಿ 'ವೈದ್ಯರ ಚೌ ಚೌ ಬಾತ್'. ಇಲ್ಲಿ ವೈದ್ಯಕೀಯ ಲೇಖನಗಳು ,ವ್ಯಕ್ತಿ ಚಿತ್ರಗಳು ಮತ್ತು ಇತರ ಪ್ರಬಂಧಗಳ ಬರಹಗಳಿವೆ. ಅವೆಲ್ಲವೂ ವೈವುಧ್ಯಮಯ, ವೈಶಿಷ್ಟ್ಯ ಪೂರ್ಣ, ಆರೋಗ್ಯದಾಯಕ ಮಾತ್ರವಲ್ಲದೇ ವಾಸ್ತವಿಕ ನೆಲೆಗಳಿನಿಂದ ಕೂಡಿವೆ.  
 ಪುಸ್ತಕದ ಬಗ್ಗೆ ಕೆ. ಭಾಸ್ಕರ ಕೋಡಿಂಬಾಳ ಅವರು, "ಈ ಕೃತಿಯುದ್ದಕ್ಕೂ ಗಮನಿಸಬಹುದಾದ ಪ್ರಮುಖ ಅಂಶ, ಲೇಖಕರು ಪ್ರತಿಯೊಬ್ಬರನ್ನೂ, ಪ್ರತಿಯೊಂದನ್ನೂ ಅವರ ಅಥವಾ ಅದರ ಗುಣ ಮಾತ್ರದಿಂದ ಗುರುತಿಸುತ್ತಾರೆ, ಗೌರವಿಸುತ್ತಾರೆ. ಲೇಖಕರಿಗೆ ಸಾಧಕರಾದ ಆರ್.ಎನ್. ಶೆಟ್ಟಿ, ಶಿವರಾಮ ಕಾರಂತ, ಘಾ, ಆಂಟನಿ ಪತ್ರಾವೋ ಮುಂತಾದವರು ಎಷ್ಟು ಪ್ರಮುಖವಾಗಿ ಕಂಡಿದ್ದಾರೋ, ಅಷ್ಟೇ ಪ್ರಮುಖವಾಗಿ ನೈಚೋರ್ ಮಾಡುವ ಪೊಡಿಯಾ ಬ್ಯಾರಿ, ಬಾಡಿಗೆ ಕಾರು ಓಡಿಸುತ್ತಿದ್ದ ಬೌತೀಸ್ ಸೋಜರು, ಕೆಲಸದಾಳು ಪುಟ್ಟಕ್ಕು, ಕಾಂಪೌಂಡರ್ ನಾರಾಯಣ ಮಯ್ಯ ಮುಂತಾದವರು ಕಾಣುತ್ತಾರೆ.  
 ತನ್ನ ನೆನಪಿನಂಗಳದಲ್ಲಿ ನೆಲೆಸಿದ ಹಲವಾರು ಮಹನೀಯರನ್ನು ಪರಿಚಯಿಸುವ ಪರಿಯನ್ನು ಓದಿದಾಗ ಸ್ವತಃ ಲೇಖಕ ಡಾ. ಎ.ಪಿ. ಭಟ್ ಅಂದರೆ ಯಾರು, ಏನು, ಎಂತವರು ಎಂದು ನಮಗೆ ಪರಿಚಕರಾಗುತ್ತಾರೆ. ಸಂಬಂಧಗಳು, ಸಂಪ್ರದಾಯಗಳು, ಇವುಗಳ ಪ್ರಕಟಣೆ, ಆಚರಣೆ, ಎಲ್ಲವೂ ಕಥಾರೂಪವನ್ನು ಪಡೆದು ಓದಲು ಹಿತಕರವಾಗಿದೆ. ಇದಲ್ಲದೇ ಲೇಖಕರು ಈ ಕೃತಿಯಲ್ಲಿ ತನ್ನದೇ ವೈದ್ಯ ವೃತ್ತಿಯ ಹಲವು ಅನುಭವಗಳನ್ನು, ಜ್ಞಾನವನ್ನು ಹಂಚಿಕೊಂಡಿದ್ದಾರೆ. ಈ ಕೃತಿಯೊಳಗಡೆ ಏನಿದೆಯೆಂದು ಪಟ್ಟಿ ಮಾಡುವುದಕ್ಕಿಂತಲೂ ಏನಿಲ್ಲವೆಂದು ಪಟ್ಟಿ ಮಾಡುವುದೇ ಸುಲಭ. 
 ಒಟ್ಟಾರೆಯಾಗಿ ಡಾ. ಎ.ಪಿ. ಭಟ್ಟರು ಸಿದ್ಧಪಡಿಸಿದ "ವೈದ್ಯರ ಚೌಚೌ ಬಾತ್" ಮಕ್ಕಳಿಂದ ಹಿಡಿದು ವೃದ್ಧರ ತನಕದ ಎಲ್ಲಾ ವಯೋಮಾನದವರು ಉಣ್ಣಬಹುದಾದ ಬಗೆ ಬಗೆಯ ಸಾಹಿತ್ಯದ ರಸದೌತಣವಾಗಿ ಹೊರಹೊಮ್ಮಿದೆ” ಎಂದು ಹೇಳಿದ್ದಾರೆ. 

About the Author

ಎ ಪಿ ಭಟ್
(11 April 1956)

ಲೇಖಕ ಎ.ಪಿ. ಭಟ್ ಅವರು ವೃತ್ತಿಯಿಂದ ವೈದ್ಯರು. ಓದು-ಬರಹ, ಸಂಗೀತ ಕೇಳುವುದು ಇವರ ಹವ್ಯಾಸ ಕೃತಿಗಳು: ವೈದ್ಯನ ವಗೈರೆಗಳು ...

READ MORE

Related Books