ಅಜರಾಮರ ಅಯೋಧ್ಯೆ

Author : ಸುಶ್ರಾವ್ಯ ಜೀವಾಳ ಬಿ. ಕೆ.

Pages 152

₹ 130.00




Year of Publication: 2019
Published by: ಸಮನ್ವಿತ ಪ್ರಕಾಶನ

Synopsys

ರಾಮಾಯಣ, ರಾಮಜನ್ಮಭೂಮಿ, ಮಂದಿರ ನಿರ್ಮಾಣ ಮತ್ತು ಧ್ವಂಸ, ನ್ಯಾಯಾಲಯ ವ್ಯಾಜ್ಯ-ತೀರ್ಪುಗಳೆಲ್ಲವನ್ನೂ ಸಂಗ್ರಹಿಸಿ ಒಟ್ಟಿಗೆ ನೀಡುವ ಕೃತಿ ’ಅಜರಾಮರ ಅಯೋಧ್ಯ”. ರಾಮಜನ್ಮಭೂಮಿ ವಿವಾದಿತ ಸ್ಥಳದ ಕುರಿತು ಲೇಖಕರು ಇತಿಹಾಸವನ್ನು ಅವಲೋಕಿಸಿ, ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

About the Author

ಸುಶ್ರಾವ್ಯ ಜೀವಾಳ ಬಿ. ಕೆ.
(04 May 1988)

ಲೇಖಕಿ ಸುಶ್ರಾವ್ಯ ಜೀವಾಳ ಬಿ.ಕೆ ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಿದರಹಳ್ಳಿಯವರು. ತಂದೆ ಕೃಷ್ಣಪ್ಪ ಬಿ. ಆರ್‌. ತಾಯಿ ಕಮಲಾಕ್ಷಿ ಟಿ. ’ನಾನು ಮತ್ತು ಅರಳಿಮರ’ ಅವರ ಮೊದಲ ಕೃತಿ. ’ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ’ ದೊರೆತಿದೆ. ...

READ MORE

Reviews

ರಾಮರಾಮ ಅಜರಾಮರ 

ಪ್ರಕಾಶಕರೂ ಆಗಿರುವ ಕೆ. ವಿ. ರಾಧಾಕೃಷ್ಣ ಅಯೋಧ್ಯಾ ತೀರ್ಪು ಬರುತ್ತಿದ್ದಂತೆ, ಅಜರಾಮರ ಅಯೋಧ್ಯೆ ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಅಯೋಧ್ಯೆಯ ಕುರಿತ ಎಲ್ಲ ವಿವಾದಗಳು, ಅವಕ್ಕೆ ಉತ್ತರಗಳು, ಸಾಕ್ಷಿಗಳು, ಸಾಬೀತುಗಳೆಲ್ಲ ಈ ಪುಸ್ತಕದಲ್ಲಿವೆ. ಅಜರಾಮರ ರಾಮ ಜನ್ಮಸ್ಥಾನ ವಿಮೋಚನೆಗೆ ನಡೆದ ಸಾವಿರದ ಸಂಘರ್ಷದ ಒಟ್ಟು ಕಥನ ಇದು ಎಂದು ಅವರಿದನ್ನು ಕರೆದುಕೊಂಡಿದ್ದಾರೆ. ಒಂಚೂರು ರಾಮಾಯಣವೂ, ಸೀತಾಕಲ್ಯಾಣವೂ, ಸುಗ್ರೀವನ ಭೂಗೋಳ ಜ್ಞಾನವೂ, ರಥಯಾತ್ರೆಯ ವಿವರವೂ, ನ್ಯಾಯಾಲಯದ ವಾದವಿವಾದವೂ, ಪತ್ರಿಕಾ ವರದಿಗಳ ಸಾರವೂ ಇರುವ ಈ ಕೃತಿಯ ಸಕಾಲಿಕವಾಗಿ ಹೊರಬಂದಿದೆ. ಸಾಮಾನ್ಯವಾಗಿ ಚರಿತ್ರಾರ್ಹ ಸಂಗತಿಗಳು ಘಟಿಸಿದಾಗ ಇಂಗ್ಲಿಷಿನಲ್ಲಿ ಆ ಕುರಿತು ಅಧ್ಯಯನಪೂರ್ಣ ಕೃತಿಗಳು ಬರುತ್ತಿರುತ್ತವೆ. ಅಷ್ಟೇ ಅಧ್ಯಯನಶೀಲತೆಯಿಂದ ರಾಧಾಕೃಷ್ಣ ಇದನ್ನು ರಚಿಸಿದ್ದಾರೆ. 

ಕೃಪೆ: ಕನ್ನಡಪ್ರಭ, ಬಿಸಿಲು ನೆರಳು (2020 ಜನವರಿ 12)

Related Books