ಪಾಥೇರಸ್

Author : ಮೇಘನಾ ಸುಧೀಂದ್ರ

Pages 120

₹ 150.00




Year of Publication: 2022
Published by: ಸಾವಣ್ಣ ಪ್ರಕಾಶನ
Address: ಸಾವಣ್ಣ ಪ್ರಕಾಶನ, ಮೈಸೂರು

Synopsys

ಲೇಖಕಿ, ಕತೆಗಾರ್ತಿ ಮೇಘನಾ ಸುಧೀಂದ್ರ ಅವರು ಅಪ್ಪ-ಮಗಳ ಸಂಬಂಧದ ಬಗೆಗೆ ಬರೆದಿರುವ ವಿಶೇಷ ಕೃತಿ ಪಾಥೇರಸ್ . ಮೇಟಾವರ್ಸ್ ಎಂಬ ಆಲ್ಟರ್ನೇಟ್ ಜಗತ್ತನ್ನು ಈಗಿನ ದೊಡ್ಡ ದೊಡ್ಡ ಕಂಪನಿಗಳು ಸೃಷ್ಟಿ ಮಾಡುತ್ತಿವೆ. ಅಲ್ಲೀಗ ಮನುಷ್ಯ ಒಂದು ‘ಅವತಾರ್ ’ ರೂಪದಲ್ಲಿ ಜೀವಂತ ಇರುತ್ತಾನೆ. ಅವನಿಗೇ ಆದ ಒಂದು ನೀತಿ, ನಿಯಮ ಇದ್ದು ತಾನು ಅತ್ಯಂತ ಶಕ್ತಿಶಾಲಿಯೆಂದು ಅಂದುಕೊಂಡು, ಅವನಿಗೆ ಅಂತ್ಯವೇ ಇಲ್ಲ ಎಂಬ ಮನಸ್ಥಿತಿಯೊಂದಿಗೇ ಕಾಲ ಕಳೆಯುತ್ತಾನೆ. ದೇವರ ಅವತಾರಕ್ಕೆ ಕೊನೆ ಇರುವಾಗ ಮನುಷ್ಯನ ‘ಅವತಾರ್’ ಕೊನೆಯಾಗುವುದಿಲ್ಲವೇ ? ಮೆಟಾವರ್ಸಿನ ‘ಅವತಾರ್’ ನಲ್ಲಿ ಅಪ್ಪನನ್ನು ಶಾಶ್ವತವಾಗಿ ನೋಡುವ ಮಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಸಿಂದೆಸಿ ಮಾಡುತ್ತಿದೆ. ಯಾರು ಸಿಂದೆಸಿ ? ಯಾವ ಪ್ರಾಜೆಕ್ಟ್ ಎಂಬ ಕುತೂಹಲಕರವಾದ ಮಾಹಿತಿ ಈ ಪುಸ್ತಕದಲ್ಲಿದೆ. ಮಗಳ ಎಲ್ಲೆ ಮೀರಿದ ಕನಸುಗಳಿಗೆ ಅಪ್ಪ ಮಾತ್ರ ರೆಕ್ಕೆ ಕೊಡಲು ಸಾಧ್ಯ. ಅಂತಹ ‘ಅವತಾರ್’ ನೀಳ್ಗತೆಯನ್ನು ಇಲ್ಲಿ ಓದಬಹುದು.

About the Author

ಮೇಘನಾ ಸುಧೀಂದ್ರ

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಹೊಸ ಪೀಳಿಗೆಯ ಕಥೆಗಳು ಬರೆಯುವುದು ...

READ MORE

Related Books