ಅಮೃತ ಮತ್ತು ವಿಷ

Author : ರಂಜಾನ್ ದರ್ಗಾ

Pages 208

₹ 125.00




Year of Publication: 2014
Published by: ಲೋಹಿಯಾ ಪ್ರಕಾಶನ
Address: ಬಳ್ಳಾರಿ

Synopsys

ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಬೆಳಕಿನ ಹೊಸ ದಾರಿಗಾಗಿ ಹುಡುಕಾಟ ನಡೆಸುವ ಎರಡು ಸೆಲೆಯನ್ನು, ಮತಾಂಧತೆಯ ಕಿಚ್ಚಿನಲ್ಲಿ ಬತ್ತಿ ಹೋಗುತ್ತಿರುವ ಮಾನವತೆಯ ಜೀವಸೆಲೆಯನ್ನು ಹಿಡಿದಿಡಲು ಲೇಖಕ ರಂಜಾನ್ ದರ್ಗಾ ಅವರು ಈ ಕೃತಿಯಲ್ಲಿ ಯತ್ನಿಸಿದ್ದಾರೆ. ಬಸವಣ್ಣನಿಂದ ಅಂಬೇಡ್ಕರ್ ವರೆಗೆ, ಮಾರ್ಕ್ಸನಿಂದ ನೆರೂಡಾವರೆಗೆ ಜೀವ ಸಂಕುಲದ ಉನ್ನತಿಗಾಗಿ ಚಿಂತಿಸಿದ ಎಲ್ಲರನ್ನೂ ದರ್ಗಾ ಅವರು ತಮ್ಮ ಈ ಲೇಖನಗಳ ಮೂಲಕ ಪರಿಚಯಿಸಿದ್ದಾರೆ.

 

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books