ಅಂಧಶ್ರದ್ಧೆ

Author : ಚಂದ್ರಕಾಂತ ಪೋಕಳೆ

Pages 88

₹ 60.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

'ಅಂಧಶ್ರದ್ಧೆ’ ಪ್ರಶ್ನೆ ಚಿಹ್ನೆ ಮತ್ತು ಪೂರ್ಣ ವಿರಾಮ ಕೃತಿಯು ಚಂದ್ರಕಾಂತ ಪೋಕಳೆ ಅವರ ಕನ್ನಡಡ ಅನುವಾದಿತ ಲೇಖನಸಂಕಲನವಾಗಿದೆ. ಕೃತಿಯ ಮೂಲ ಮರಾಠಿಯಾಗಿದ್ದು, ನರೇಂದ್ರ ದಾಭೋಲ್ಕರ್, ಪ. ರಾ. ಆರ್ಡೆ ಲೇಖಕರು. ಕೃತಿಯು ಹಲವಾರು ವಿಚಾರಗಳ ಕುರಿತು ಮಾತನಾಡುತ್ತದೆ, ಮಾಂತ್ರಿಕರು, ಪವಾಡ ಪುರುಷರು ನಮ್ಮಿಂದ ಸೇವೆಯ ರೂಪದಲ್ಲಿ ಹಣ-ಶ್ರಮ ಎರಡನ್ನೂ ಇಲ್ಲವಾಗಿಸುತ್ತಾರೆ. ಮಾಧ್ಯಮಗಳಂತೂ ಇಂಥ ಕಪಟ ಸನ್ಯಾಸಿಗಳಿಗೆ ಹೆಚ್ಚಿನ ಪ್ರಾಧಾನ್ಯ ಜಾಹಿರಾತಿನೊಂದಿಗೆ ನೀಡಿ ಜನರನ್ನು ತಪ್ಪುದಾರಿ ಗೆಳೆಯಲು ರಾಜಮಾರ್ಗ ತೋರುತ್ತಾರೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ನಾವಿಂದು ಇಂಥ ಅನಿಷ್ಟ ಪ್ರವೃತ್ತಿಯಿಂದ ದೂರವಾಗಿ ಜಾಗ್ರತರಾಗಬೇಕಾಗಿದೆ. ಇಂದು ಮಹಾರಾಷ್ಟ್ರದಲ್ಲಿ ಅಂಧಶ್ರದ್ಧಾ ನಿರ್ಮೂಲನ ಸಮಿತಿಯವರು ಆಂದೋಲನದ ರೂಪದಲ್ಲಿ ಜನಜಾಗೃತಿ ಮೂಡಿಸಿದ್ದಾರೆ. ಪ್ರಶ್ನೋತ್ತರ ರೂಪದಲ್ಲಿದ್ದು ಅತ್ಯಂತ ಪರಿಣಾಮಕಾರಿಯಾಗಿ ಜನರೊಂದಿಗೆ ಸಂವಹನಿಸುವಂಥ ಕಸುವು ಈ ಕೃತಿಗಿದೆ. ತನ್ನ ನೆಮ್ಮದಿಗಾಗಿ ಅವರಿವರ ಮಾತನ್ನು ಕೇಳಿ ಇನ್ನಷ್ಟು ಕಂಗೆಡುವ ಜನರಿಗೆ ಸರಿಯಾದ ಮಾರ್ಗದರ್ಶನ ಇಲ್ಲಿ ಸೂಚಿಸಲಾಗಿದೆ. ಮಾತ್ರವಲ್ಲ ಸರಿ ಯಾವುದು ತಪ್ಪು ಯಾವುದು ಎಂದೂ ಸಮರ್ಥವಾಗಿ ವಿವರಿಸಲ್ಪಟ್ಟಿದೆ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Reviews

(ಹೊಸತು, ಸೆಪ್ಟೆಂಬರ್ 2014, ಪುಸ್ತಕದ ಪರಿಚಯ)

ನಾವಿಂದು ಅಂಧಶ್ರದ್ಧೆಯ ದಾಸಾನುದಾಸರಾಗಿದ್ದೇವೆ. ಇದಕ್ಕೆ ಕಾರಣ ಚಿಂತನೆ ವಿಮರ್ಶೆಗಳ ಅಭಾವ. ಇಂಥ ವೈಜ್ಞಾನಿಕ ಯುಗದಲ್ಲೂ ಅದರ ಎಲ್ಲ ಸೌಕರ್ಯಗಳನ್ನು ಅನುಭವಿಸುತ್ತಲೇ ವೈಜ್ಞಾನಿಕ ಸಾಧನಗಳ ಮೂಲಕವೆ ಮೂಢನಂಬಿಕೆಗಳನ್ನು ಮುಗ್ಧ ಜನರ ಮನದಲ್ಲಿ ಬಿತ್ತುವುದು ಅಕ್ಷಮ್ಯ. ನಮ್ಮ ಸುತ್ತಲೂ ನಮ್ಮ ಅಜ್ಞಾನವನ್ನು ದುರುಪಯೋಗ ಪಡಿಸುತ್ತ ನಮಗೆ ಕೆಲಸಕ್ಕೆ ಬಾರದ ಸಲಹೆ ನೀಡುತ್ತ ನಮ್ಮ ಕಷ್ಟಗಳಿಗೆ ಗ್ರಹಗತಿಗಳನ್ನು ಕಾರಣವಾಗಿಸಿ ಪರಿಹಾರ ಸೂಚಿಸುತ್ತೇವೆಂದು ನಂಬಿಸುವ ಬಾಬಾ-ಬಾವಾಗಳಿದ್ದಾರೆ. ಮಾಂತ್ರಿಕರು, ಪವಾಡಪುರುಷರು ನಮ್ಮಿಂದ ಸೇವೆಯ ರೂಪದಲ್ಲಿ ಹಣ-ಶ್ರಮ ಎರಡನ್ನೂ ಇಲ್ಲವಾಗಿಸುತ್ತಾರೆ. ಮಾಧ್ಯಮಗಳಂತೂ ಇಂಥ ಕಪಟಸನ್ಯಾಸಿಗಳಿಗೆ ಹೆಚ್ಚಿನ ಪ್ರಾಧಾನ್ಯ ಜಾಹಿರಾತಿನೊಂದಿಗೆ ನೀಡಿ ಜನರನ್ನು ತಪ್ಪುದಾರಿಗೆಳೆಯಲು ರಾಜಮಾರ್ಗ ತೋರುತ್ತಾರೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ನಾವಿಂದು ಇಂಥ ಅನಿಷ್ಟ ಪ್ರವೃತ್ತಿಯಿಂದ ದೂರವಾಗಿ ಜಾಗ್ರತರಾಗಬೇಕಾಗಿದೆ. ಇಂದು ಮಹಾರಾಷ್ಟ್ರದಲ್ಲಿ ಅಂಧಶ್ರದ್ಧಾನಿರ್ಮೂಲನ ಸಮಿತಿಯವರು ಆಂದೋಲನದ ರೂಪದಲ್ಲಿ ಜನಜಾಗೃತಿ ಮೂಡಿಸಿದ್ದಾರೆ. ಪ್ರಶೋತ್ತರ ರೂಪದಲ್ಲಿದ್ದು ಅತ್ಯಂತ ಪರಿಣಾಮಕಾರಿಯಾಗಿ ಜನರೊಂದಿಗೆ ಸಂವಹನಿಸುವಂಥ ಕಸುವು ಈ ಕೃತಿಗಿದೆ. ತನ್ನ ನೆಮ್ಮದಿಗಾಗಿ ಅವರಿವರ ಮಾತನ್ನು ಕೇಳಿ ಇನ್ನಷ್ಟು ಕಂಗೆಡುವ ಜನರಿಗೆ ಸರಿಯಾದ ಮಾರ್ಗದರ್ಶನ ಇಲ್ಲಿ ಸೂಚಿಸಲಾಗಿದೆ. ಮಾತ್ರವಲ್ಲ ಸರಿ ಯಾವುದು ತಪ್ಪು ಯಾವುದು ಎಂದೂ ಸಮರ್ಥವಾಗಿ ವಿವರಿಸಲ್ಪಟ್ಟಿದೆ.

 

Related Books