ಅನೇಕ

Author : ಡಿ.ಎಸ್.ನಾಗಭೂಷಣ

Pages 278

₹ 125.00




Year of Publication: 2005
Published by: ಲೋಹಿಯಾ ಪ್ರಕಾಶನ.
Address: ಕ್ಷಿತಜಾ, ಕಪ್ಪಗಲ್ಲು ರೋಡ್‌, ಗಾಂಧಿ ನಗರ, ಬಳ್ಳಾರಿ- 583103
Phone: 08392257412

Synopsys

ಅನೇಕ ಕೃತಿಯು ಸಾಹಿತ್ಯ ಹಾಗೂ ಸಾಮಾಜಿಕ ವಿಚಾರಗಳ ಲೇಖನ ಸಂಗ್ರಹವಾಗಿದ್ದು ಲೇಖಕ ಡಿ.ಎಸ್.‌ ನಾಗಭೂಷಣ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಒಂದು ಕ್ಷೇತ್ರ, ಆಕಾಶವಾಣಿಯ ಕುರಿತಾದ ಎರಡು ಲೇಖನಗಳಿವೆ. ಇಲ್ಲಿ ವಿವಿಧ ಸಾಂದರ್ಭಿಕ ವಿಷಯಗಳಿಗೆ ಸಾಹಿತ್ಯಿಕ, ಸಂಸ್ಕೃತಿಕ, ವೈಜ್ಞಾನಿಕ, ರಾಜಕೀಯಗಳಿಗೆ ಲೇಖಕರು ನೀಡಿದ ಪ್ರತಿಕ್ರಿಯೆಗಳೂ ಮತ್ತು ವಿವಿಧ ಪತ್ರಿಕೆಗಳ ಸಂಪಾದಕರು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ಈ ಕೃತಿಯಲ್ಲಿ ಸೇರ್ಪಡೆಯಾಗಿದೆ. ಅನೇಕ ಕಮ್ಮಟಗಳನ್ನು ದಾಖಲಾಗಿ ಉಳಿಸಳು ಈ ಸಂಗ್ರಹದಲ್ಲಿ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿ ಕುವೆಂಪು ಸ್ವಾತಂತ್ರ್ಯೋತ್ತರ ಸನ್ನಿವೇಶದಲ್ಲಿ, ಮಾಸ್ತಿ ಕತೆಗಳಲ್ಲಿ ಧರ್ಮ, ದಲಿತ ಚಳುವಳಿ ಮುಂದೇನು, ಬದಲಾಗುತ್ತಿರುವ ಬಾನುಲಿ, ಐದು ಪ್ರತಿಕ್ರಿಯೆಗಳು, ಜಾಗತೀಕರಣದ ಸ್ವರೂಪ ಮತ್ತು ಆತಂಕಗಳು, ಕುಸುಮಬಾಲೆ, ನಾಲ್ಕು ಸಂದರ್ಶನಗಳು, ಎರಡು ಸಾಹಿತ್ಯ ಕಮ್ಮಟಗಳು, ಗುರುಕಾರುಣ್ಯ ಮತ್ತು ಚಾಟಿಯೇಟು ಮುಂತಾದ ಒಟ್ಟು 21 ಲೇಖನಗಳು ಈ ಕೃತಿಯಲ್ಲಿ ನಾವು ಕಾಣಬಹುದು.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Reviews

ಹೊಸತು- ಆಗಸ್ಟ್‌-2005

ಸಾಹಿತ್ಯ ಮತ್ತು ಸಾಮಾಜಿಕ ವಿಚಾರಗಳ ಲೇಖನಗಳ ಸಂಗ್ರಹ 'ಅನೇಕ'. ಇವರ 'ಗಮನ' ಕೃತಿ ಪ್ರಕಟವಾಗಿ ಹದಿನೈದು ವರ್ಷ ಗಳು ಕಳೆದಿದ್ದು ಈಗ ಈ ಗ್ರಂಥ ಬಂದಿದೆ. ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಕ್ರಿಯಾಶೀಲರಾಗಿ ಯೋಚಿಸುವ ನಾಗಭೂಷಣ ಅವರು ಹಲವು ಚಳುವಳಿಗಳಿಂದ ಪ್ರಭಾವಿತರಾದರೂ ತಮ್ಮ ಸ್ವಂತಿಕೆ ಯನ್ನು ಉಳಿಸಿಕೊಂಡಿದ್ದಾರೆ. ಸಾಹಿತ್ಯ ಕೃತಿಗಳನ್ನು ಸಂಸ್ಕೃತಿಯ ದೃಷ್ಟಿಯಿಂದ ಗಂಭೀರವಾಗಿ ಚರ್ಚಿಸುವುದು ಇವರ ಆಸಕ್ತಿ ಹಲವು ಕಡೆ ಚದುರಿಹೋದ ಲೇಖನಗಳನ್ನು ಸೇರಿಸಿರುವು ದರಿಂದ ಏಕರೂಪತೆ ಕಾಣುವುದಿಲ್ಲ. ಕುವೆಂಪು, ಮಾಸ್ತಿ ಮತ್ತು ಶಿವರುದ್ರಪ್ಪನವರ ಬಗ್ಗೆ ಈ ಕೃತಿಯಲ್ಲಿ ಹೆಚ್ಚಿನ ಚರ್ಚೆ ಕಂಡುಬರುತ್ತದೆ. ನಾಲ್ಕು ಸಂದರ್ಶನ ಲೇಖನಗಳು ಕೃತಿಗೆ ಒಳ್ಳೆಯ ಸೇರ್ಪಡೆಯಾಗಿವೆ. ಜಾಗತೀಕರಣ ಪ್ರಭಾವದ ಹಿನ್ನೆಲೆಯಲ್ಲಿ ಆಕಾಶವಾಣಿಯ ಮಿತಿ ಮತ್ತು ಶಕ್ತಿಗಳನ್ನು ಎರಡು ಲೇಖನಗಳಲ್ಲಿ ತಮ್ಮ ಅನುಭವದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಒಟ್ಟಾರೆ 'ಅನೇಕ' ಅನೇಕ ಪುಸ್ತಕಗಳಲ್ಲಿ ಒಂದಾಗದೆ ಸಂಗ್ರಹಯೋಗ್ಯ ಸಂಕಲನವಾಗಿದೆ.

Related Books