ಆ ಲೋಚನ

Author : ರಾಧಾಕೃಷ್ಣ ಕಲ್ಚಾರ್

₹ 170.00




Published by: ಸೇವಂತಿ ಪ್ರಕಾಶನ

Synopsys

ಲೇಖಕ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಸಂಕಲನ ‘ಆ ಲೋಚನ’. ಓದಿದವರನ್ನು ಆಲೋಚನೆಗೆ, ಚಿಂತನೆಗೆ ಹಚ್ಚುವ ಬರಹಗಳ ಸಂಗ್ರಹ ಆಲೋಚನ. ಇದರಲ್ಲಿರುವ ಒಟ್ಟು ಬರಹಗಳು 54. ಹೊಸದಿಗಂತ ಪತ್ರಿಕೆಯಲ್ಲಿ ಬಿಡಿಬಿಡಿಯಾಗಿ ಪ್ರಕಟಗೊಳ್ಳುತ್ತಿದ್ದ ಬರಹಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಕೂಡು ಕುಟುಂಬ, ಕೂಡಿ ಉಣ್ಣುವ ಸಂತಸ, ಓದಿನ ಮಹತ್ವ, ಜೀವನದ ಮಹತ್ವದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಬೇಕು?, ಓದಿನ ಮಹತ್ವ, ಸಂಬಂಧಗಳನ್ನು ಗಟ್ಟಿಗೊಳಿಸುವುದು ಹೀಗೆ ಅನೇಕ ವಿಚಾರಗಳ ಕುರಿತ ಲೇಖನ ಈ ಕೃತಿಯಲ್ಲಿದೆ.

About the Author

ರಾಧಾಕೃಷ್ಣ ಕಲ್ಚಾರ್
(03 September 1965)

ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು. ತಂದೆ ಮಾಣಿಪ್ಪಾಡಿ ಕೇಶವ ಭಟ್ಟ, ತಾಯಿ ಕನಕಲಕ್ಷ್ಮಿ. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ. ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರರು ಉಪನ್ಯಾಸಕ, ಅಂಕಣಕಾರ, ಸಾಹಿತಿ,ವಿಮರ್ಶಕ ,ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡುಮನೆ  (ಕಾದಂಬರಿ), ಅವರವರ ದಾರಿ (ಕಥಾಸಂಕಲನ) , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ - ಇವರ ಕೃತಿಗಳು. ಜೊತೆಗೆ ತರಂಗ,ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ...

READ MORE

Related Books