ಗಾಂಧಿ ಬಿಂಬ ದರ್ಶನ

Author : ಮಹಾಬಲೇಶ್ವರ ರಾವ್

Pages 152

₹ 149.00




Year of Publication: 2021
Published by: ಸುಧಾ ಎಂಟರ್ ‌ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560101
Phone: 98454 49811

Synopsys

ಗಾಂಧಿ ಯುಗದ ಜಗದ ಚೇತನ. ಅವರಂತೆ ಅವರೊಡನೆ ಒಡನಾಡಿದವರು, ಪಾಂತನದ ಒಡನಾಡಿಯಾದವರು ಬೇರೊಬ್ಬರಿಲ್ಲ. ಅವರ ಬದುಕು ಆಖ್ಯಾನಗಳ ಆಗರ, ಪ್ರಸಂಗಗಳ ಸಾಗರ, ಈ ಅಪರಂಪಾರದಿಂದ ಆಯ್ದ ನೂರಕ್ಕೂ ಹೆಚ್ಚು ಮುತ್ತುಗಳನ್ನು ಡಾ. ಮಹಾಬಲೇಶ್ವರ ರಾವ್‌ ಈ ಅನನ್ಯ ಕೃಷಿಯಲ್ಲಿ ವ್ಯವಸ್ಥಿತವಾಗಿ ಪೋಣಿಸಿದ್ದಾರೆ. ಈ ಕೃತಿಯಲ್ಲಿ ಬಿಂಬಿತವಾಗಿರುವ ಗಾಂಧಿ ಬಿಂಬಗಳು ಸರಳ, ಸಂದಿಗ್ಧ ಮತ್ತು ಸಂಕೀರ್ಣ ಮೌಲ್ಯಗಳ ಸಮ್ಯಕ್ ದರ್ಶನ ಮಾಡಿಸುತ್ತವೆ. ಗಾಂದಿ ಎಂಬ ನಿರ್ಮಲ ಬೆಳಕನ್ನು ಬಾಲವ ಘಟನೆಗಳ ಮೂಲಕವೇ ಲೇಖಕರು ನಮ್ಮ ಮನದಂಗಳದಲ್ಲ ಹರಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಗಾಂಧಿ ಮೌಲ್ಯಗಳ ಅನನ್ಯ ಕೈಪಿಡಿಯೇ ಗಾಂಧಿ ಬಿಂಬ ದರ್ಶನ.

About the Author

ಮಹಾಬಲೇಶ್ವರ ರಾವ್

ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್‌ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.  ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ.  ...

READ MORE

Related Books