ಒಂದೆಲೆ ಮೇಲಿನ ಕಾಡು

Author : ಸ.ವೆಂ.ಪೂರ್ಣಿಮಾ

Pages 170

₹ 200.00




Year of Publication: 2024
Published by: ಹಾಡ್ಲಹಳ್ಳಿ ಪಬ್ಲಿಕೇಷನ್ಸ್
Address: 9 ನೇ ಮುಖ್ಯ ರಸ್ತೆ, ಕೆ. ಆರ್. ಪುರಂ, ಹಾಸನ -573201
Phone: 8747043485

Synopsys

'ಒಂದೆಲೆ ಮೇಲಿನ ಕಾಡು' ಕೃತಿಯು ಸ.ವೆಂ. ಪೂರ್ಣಿಮಾ ಅವರ ಅಪರೂಪದ ಗುಣವಿಶೇಷಣಗಳನ್ನು ಪಡೆದ ಬರಹಗಳ ಸಂಚಯವಾಗಿದೆ. ಇಲ್ಲಿನ ಪ್ರತಿ ಬರಹವೂ ಲೇಖಕಿಯ ಅನುಭವದೊಂದಿಗೆ ನಂಟು ಹೊಂದಿರುವುದರಿಂದ ಭಾವುಕತೆಗೆ, ಖಾಸಗಿತನಕ್ಕೆ ಹೆಚ್ಚು ಪ್ರಾಧಾನ್ಯತೆ. ಆದರೆ, ಇವು ಕೇವಲ ಭಾವೋತ್ಕಟತೆಯನ್ನು ಗುಣವಾಗಿ ಹೊಂದಿರುವ ಬರಹಗಳೆಂದು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಈ ಭಾವುಕತೆಯು ಅಂತಃಕರಣದ ಲೋಕಕ್ಕೆ ಸಂಬಂಧಿಸಿದ, ಹೇಳಲೇಬೇಕಾದ ಮತ್ತು ಪ್ರತಿಯೊಬ್ಬರೂ ಕೇಳಲೇಬೇಕಾದ ಸಿಹಿ-ಕಹಿ-ಒಗರುಗಳ ಕಥನಗಳನ್ನು ಅಡಗಿಸಿಕೊಂಡಿದೆ. ಇಂತಹ ಕಥನಗಳಿಲ್ಲದೆ ಬದುಕು ಪೂರ್ಣವಾಗುವುದಿಲ್ಲ. “ತುಂಬಿ ಹರಿಯುತ್ತಿರುವ ಹೇಮಾವತಿ, ಉಕ್ಕುತ್ತಿರುವ ಜಲಪಾತಗಳು, ಮೋಡವನ್ನೇ ಮುಸುಕು ಹಾಕಿಕೊಂಡಂತಿರುವ ಘಟ್ಟಗಳು, ಶುಭ್ರವಾಗಿ ಹಸಿಬಾಣಂತಿಯಂತೆ ಹಸಿರ ಸಿರಿ. . .” “ನೋವೂ ನೆನಪಾಗಿ ಸಂಭ್ರಮವಾಗುವುದಕ್ಕೆ, ಸಮಯ ತೆಗೆದುಕೊಳ್ಳುತ್ತದೆ.” “ಒಳ್ಳೆಯ ಮಾತುಗಳು ಹಾಗೆ. . ಸುತ್ತಲೂ ಸಂತೋಷವನ್ನು ಕೊಡುತ್ತವೆ. ನಾವೂ ಹೆಚ್ಚು ಸಂತೋಷವಾಗಿರುತ್ತೇವೆ.” “ಒಡೆದು ಹೋದ ಕುಟುಂಬಗಳು, ಮುರಿದುಬಿದ್ದ ಗೆಳೆತನ, ದಾಯಾದಿಗಳ ಕಲಹ, ಅಣ್ಣ-ತಮ್ಮಂದಿರ ಆಸ್ತಿ ವಿವಾದ, ಮದುವೆಯ ಮನಸ್ತಾಪ. . . ಹಣಕಾಸಿನ ಜಗಳಗಳು ಹೀಗೆ ಸರಿಪಡಿಸಲಾಗದು ಯಾವುದೂ ಇಲ್ಲ. ಎಲ್ಲವೂ ಸರಿಯಾಗುತ್ತವೆ.” “ಅಣ್ಣ ತಂಗಿ ಅಕ್ಕ ತಮ್ಮ ಎಂದು ಅಂದುಕೊಳ್ಳಲು ಒಡಹುಟ್ಟಲೇ ಬೇಕಿಲ್ಲ. ಆ ಭಾವನೆಯನ್ನು ಬೆಳೆಸಿಕೊಂಡರೆ ಸಾಕು. . . ಸ್ವೀಕರಿಸಿದರೆ ಆಯ್ತು… ನಮ್ಮವರು ಎಂದುಕೊಂಡರೆ ಮಾತ್ರ ಅಂತರ ಕಡಿಮೆಯಾಗುತ್ತದೆ… ಎಲ್ಲರೂ ಹತ್ತಿರವಾಗುತ್ತೇವೆ.” ಇವು ನಾವೇ ಆಡಿರಬಹುದಾದ, ಬರೆಯಬಹುದಾದ ಮಾತುಗಳಂತೆ ಅನ್ನಿಸುತ್ತದೆಯಲ್ಲವೆ. ಒಂದು ಒಳ್ಳೆಯ ಮಾತಿನ, ಬರಹದ ಹೆಚ್ಚುಗಾರಿಕೆ ಇದೇ ಆಗಿರುತ್ತದೆ. ಇನ್ನೊಬ್ಬರ ಅನುಭವದ ನುಡಿ ನಮ್ಮದು ಅನ್ನಿಸುವಂತೆ ಮಾಡುವುದು. ಏಕಾಂತದ ಅನುಭವ ಲೋಕಾಂತದ ಅನುಭವವಾಗುವುದು. ಪೂರ್ಣಿಮಾರ ಈ ಬರಹಗಳು ಅಂಥ ಅನುಭವವನ್ನು ಒದಗಿಸಬಲ್ಲವು. ಮೊದಲು ಹೇಳಿದಂತೆ ಪೂರ್ಣಿಮಾರ ಗದ್ಯವು ಕಥನ, ಮೌಖಿಕ ಕಾವ್ಯ, ಪ್ರಬಂಧದ ಲಾಲಿತ್ಯ ಹಾಗೂ ಬದುಕಿನ ಭಾವತೀವ್ರತೆಯನ್ನು ಗುಣವಾಗಿಸಿಕೊಂಡು ಮುಪ್ಪರಿಗೊಂಡಿದೆ. ಮನೆಗೊಂದು ಹಿರಿತಲೆ ಇರಬೇಕು, ಕೃಷ್ಣನೆಂದರೆ ಕತೆ, ಪರ್ಸಿನಲ್ಲಿ ದುಡ್ಡು ಕಾಣೆಯಾದ, ʻರಂಗನಾಯಕಿʼ, ಈಚಲು ಚಾಪೆಯ ಮೇಲೆ, ಬೂಬಮ್ಮನ ಮಕ್ಕಳು ಇವು ಮತ್ತು ಇಂಥ ಬರಹಗಳು ವ್ಯಕ್ತಿಚಿತ್ರಗಳಂತೆ ಕಂಡರೂ ಅವುಗಳ ಗದ್ಯದ ಸೊಬಗು, ಪಕ್ವ ನಿರೂಪಣೆ ಹಾಗೂ ಬದುಕನ್ನು ನೋಡುವ ಲೇಖಕಿಯ ಪಕ್ವತೆಯಿಂದಾಗ ಓದುಗರಿಗೆ ಬೇರೆಯದೇ ನೆಲೆಯ ಅನುಭವವನ್ನು ನೀಡಬಲ್ಲವು. 

About the Author

ಸ.ವೆಂ.ಪೂರ್ಣಿಮಾ

ಸ.ವೆಂ.ಪೂರ್ಣಿಮಾ ಮೂಲತಃ ಜನಪದ ಗಾಯಕಿ. ಬಾಲ್ಯದಲ್ಲಿಯೇ, ತಮ್ಮ ತಂದೆಯ ಆಪ್ತರಾಗಿದ್ದ ಎಸ್ ಕೆ ಕರೀಂಖಾನ್ ರವರ ಪ್ರಭಾವಕ್ಕೆ ಒಳಗಾಗಿದ್ದರು. ನೆಲಮೂಲ ಸಂಸ್ಕೃತಿಯ ಬಗೆಗೆ ಅವರಿಗೆ ಅಪಾರ ಒಲವು. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಅಭ್ಯಾಸ ಮಾಡಿದರು. ಜೊತೆಗೆ ಗಮಕ ಕಲೆಯನ್ನೂ ಕರಗತ ಮಾಡಿಕೊಂಡರು. ಇವರು ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಬರಹಗಳು ಅನೇಕ ಜಿಲ್ಲಾ ಮತ್ತು ರಾಜ್ಯಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅನೇಕ ಸಂಘ ಸಂಸ್ಥೆಗಳ ಒಡನಾಟವಿದೆ. ಸಕಲೇಶಪುರದ ಸಂವಹನ ವೇದಿಕೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ "ಜನಪದ ಸಂವಹನ" ಎಂಬ ಕಲಾತಂಡವನ್ನು ...

READ MORE

Related Books