ಅರ್ಜುನ

Author : ಬನ್ನಂಜೆ ಗೋವಿಂದಾಚಾರ್ಯ

Pages 95

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಅರ್ಜುನ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕ ಬನ್ನಂಜೆ ಗೋವಿಂದಾಚಾರ್ಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಅರ್ಜುನನ ಕುರಿತಾಗಿ ಪಂಚಪಾಂಡವರಲ್ಲಿ ಮಧ್ಯದವನು, ಶ್ರೀ ಕೃಷ್ಣ ಗೆಳೆಯ. ಬಿಲ್ಕೆವಗಾರಿಕೆಯಲ್ಲಿ ಅಸಮಾನನಾದವನು. ಈಶ್ವರನೊಡನೆ ಸೆಣಸಿ ಅವನನ್ನು ಮೆಚ್ಚಿಸಿ ಪಾಶುಪತಾಸ್ತ್ರ ಪಡೆದ. ಮಹಾಭಾರತ ಯುದ್ಧದಲ್ಲಿ ಕೃಷ್ಣ ಇವನ ಸಾರಥಿ. ಇವನಿಗೆ ಕೃಷ್ಣ ಮಾಡಿದ ಉಪದೇಶವೇ ಭಗವದ್ಗೀತೆ ಎಂದು ಪ್ರಸಿದ್ಧವಾಯಿತು. ಮಾಹನ್‌ ಕ್ಷತ್ರಿಯನಾದ ಅರ್ಜುನ ಶ್ರೀ ಕೃಷ್ಣನ ಸಹೋದರಿ ಸುಭದ್ರೆಯ ಗಂಡ. ಮಹಾಭಾರತ ಯುದ್ದಕ್ಕೋಸ್ಕರ ಸ್ವತಃ ಇಂದ್ರನನ್ನೆ ತನ್ನ ತಪಸ್ಸಿನ ಮೂಲಕ ವರ ಪಡೆದ ಮಹಾನ್‌ ವೀರ. ಈ ಎಲ್ಲಾ ಕಥೆಗಳ ತುಣುಕುಗಳೊಂದಿಗೆ ಈ ಕೃತಿಯಲ್ಲಿ ಅರ್ಜುನನ ಕುರಿತಾಗಿ ವಿವರಿಸಲಾಗಿದೆ.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books