ಮುಂಜಾವಿಗೊಂದು ನುಡಿಕಿರಣ

Author : ಶಿವರಾಜ ವಿ. ಪಾಟೀಲ

Pages 184

₹ 75.00




Year of Publication: 2013
Published by: ಸ್ಪರ್ಶ್ ಫೌಂಡೇಶನ್
Address: ಬೆಂಗಳೂರು
Phone: 9008475000

Synopsys

‘ಮುಂಜಾವಿಗೊಂದು ನುಡಿಕಿರಣ’ ಕೃತಿಯು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಸಂಪಾದಿತ ವಿಚಾರಧಾರೆಗಳಾಗಿವೆ. ಕೃತಿಗೆ ಬೆನ್ನುಡಿ ಬರೆದಿರುವ ಸಿದ್ಧೇಶ್ವರ ಸ್ವಾಮೀಜಿ ಅವರು ಹೀಗೆ ಹೇಳುತ್ತಾರೆ: ಇಲ್ಲೊಂದು ಹೊತ್ತಿಗೆ; ಮುಂಜಾವಿಗೊಂದು ನುಡಿಕಿರಣ; ಹೊಂಗಿರಣ. ಮೂರುನೂರು ಮೀರುವ ಮಾತುಗಳು; ಮಾತಿನಲ್ಲೆಲ್ಲ ಮಾಣಿಕ್ಯದ ದೀಪ್ತಿ; ಮುತ್ತಿನ ಹೊಳಪು; ಪುಟ್ಟ ಪುಟ್ಟ ವಾಕ್ಯಗಳು; ಒಳಗೆಲ್ಲ ಅನುಭಾವದಮೃತ; ಶಬ್ಧಕಲಶ; ಅರ್ಥಸಾಗರ; ಅಮೂಲ್ಯ ಜ್ಞಾನ; ಮರೆಯಲಾಗದ, ಮರೆಯಲೇಬಾರದ ಸಂದೇಶ. ಯಾರಿಗೆ? ಎಲ್ಲರಿಗೆ. ಸಣ್ಣವರು, ದೊಡ್ಡವರು, ಬಲ್ಲಿದವರು ಉಲಿಗಲು, ಉದಾಹರಣೆಗೆ ನಾಲ್ಕರು; ಪೀಠಸ್ಥನಾಗಿರುವ ವ್ಯಕ್ತಿ ಪೀಠಾಧಾರವಾದ ಭೂತಾಯಿಗೆ ಕೃತಜ್ಞನಾಗಿರುವುದನ್ನು ಮರೆಯಬಾರದು.. ಮೃದುವಾಗಿರು, ಆದರೆ ದೃಢವಾಗಿರು ದಿಟ್ಟತನವಿರಲಿ, ಆದರೆ ಒರಟುತನ ಬೇಡ ವಿನಯವಿರಲಿ, ಆದರೆ ದೈನ್ಯತೆ ಬೇಡ.. ಪರಿಸರ ಮಾಲಿನ್ಯಕ್ಕಿಂತ ಮಾನಸಿಕ ಮಾಲಿನ್ಯ ಹೆಚ್ಚು ಅಪಾಯಕಾರಿ..ಪವಿತ್ರವಾದ ನ್ಯಾಯಸ್ಥಾನದಿಂದ ಅನ್ಯಾಯವು ಎಂದಿಗೂ ಹರಿದು ಬರಬಾರದು...ಇಂಥ ನೂರಾರು ಸೂತ್ರೋಕ್ತಿಗಳು, ಅವಶ್ಯ ಮನನೀಯ. ದಿನಕ್ಕೊಂದರಂತೆ ಅವಶ್ಯ ಸ್ಮರಣೀಯ. ಅದರಿಂದ ಬದುಕು ಹಸನು, ಸಮಾಜ ಸ್ವಸ್ಥ, ಎಲ್ಲೆಡೆ ನೆಮ್ಮದಿ ಎಂದು ಇಲ್ಲಿ ವಿಶ್ಲೇಷಿಸಿದ್ದಾರೆ.

About the Author

ಶಿವರಾಜ ವಿ. ಪಾಟೀಲ

ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ನವರು. 1940 ರಲ್ಲಿ ಜನನ. ತಂದೆ ವಿರುಪಣ್ಣ ಪಾಟೀಲರು, ತಾಯಿ ಮಲ್ಲಮ್ಮನವರು. ಪ್ರಾಥಮಿಕ ಶಿಕ್ಷಣ ಹುಟ್ಟೂರಾದ ಮಲದಕಲ್ ನಲ್ಲಿ, ಮಾಧ್ಯಮಿಕ ಶಿಕ್ಷಣ ರಾಯಚೂರಿನ ಹಮ್ ದರ್ದ್ ಪ್ರೌಢಶಾಲೆಯಲ್ಲಿ, ಬಿ.ಎಸ್,ಸಿ ಪದವಿಯನ್ನು ಗುಲಬರ್ಗಾದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಗುಲಬರ್ಗಾದ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುತ್ತಾರೆ. ಕೃತಿಗಳು: ಮುಂಜಾವಿಗೊಂದು ನುಡಿಕಿರಣ , ...

READ MORE

Related Books