
'ಸುರಧೇನು' ಶ್ರೀ ಮಹಾದೇವ ಬಸರಕೋಡ ಅವರ ವಿವಿಧ ವಿಷಯಗಳ ಮೇಲೆ 'ಕ್ಷ' ಕಿರಣ ಬೀರುವ ಅಮೂಲ್ಯ ಲೇಖನಗಳ 24ರ ಕಟ್ಟು. 'ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿನ ಆಕಳುಗಳಲ್ಲಿ ಕಂಡು, ಅದರ ಸದುಪಯೋಗಪಡಿಸಿಕೊಂಡವರು ನಮ್ಮ ಹಿರಿಯರು. ಹಾಗೆಯೇ ಶ್ರೀಮಹಾದೇವರ ಈ 'ಸುರಧೇನು' ಹೊತ್ತಗೆಯ ಲೇಖನಗಳು. ಸಮಾಜಕ್ಕೆ ನೀಟಾದ ಜೀವನಕ್ಕೊಂದು 'ಪಯನ' ಸುರಧೇನುವಿನ ಕ್ಷೀರಧಾರೆಯಿಂದ ಸದ್ಭಾವನೆ. ಸಹಬಾಳ್ವೆ, ಶಾಂತಿ ಸ್ಮರಣೆ, ಸಂತೃಪ್ತಿಯ ಪಂಚಗವ್ಯಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲವು.

ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ಮಹಾದೇವ ಬಸರಕೋಡ ಅವರು ಬಾಗಲಕೋಟೆಯ ಜಿಲ್ಲೆಯ ಅಮೀನಗಡಕ್ಕೆ ಬಂದು ನೆಲೆ ನಿಂತವರು. ಇವರ ತಂದೆಯ ಹಿಂದಿನ ತಲೆಮಾರಿನವರೆಲ್ಲರೂ ನಿರಕ್ಷರರಾದರೂ ಕೂಡ ಮನೆತನದ ಮೂಲ ಉದ್ಯೋಗ ನೇಕಾರಿಕೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡು ಕೌಶಲದ ಬದುಕನ್ನು ರೂಢಿಸಿಕೊಂಡವರು. ಮಹಾದೇವ ಬಸರಕೋಡ ಅವರು ಆಲಮಟ್ಟಿ ಮತ್ತು ನಿಡಗುಂದಿಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದರು. ಧಾರವಾಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೆ.ಎಸ್.ಎಸ್ ಕಾಲೇಜನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಾಗಲೇ ಸಾಹಿತ್ಯ ಕ್ಷೇತ್ರದ ಸೆಳೆತಕ್ಕೆ ಒಳಗಾದರು. ಪದವಿ ಶಿಕ್ಷಣವನ್ನು ವಿಜಯಪುರದ ...
READ MORE