ಆಗಂತುಕರು

Author : ಸಂಧ್ಯಾ ಶರ್ಮ ವೈ.ಕೆ

Pages 196

₹ 150.00
Year of Publication: 2021
Published by: ಸಪ್ನ ಬುಕ್ ಹೌಸ್ ಪ್ರೈ.ಲಿ
Address: ಆರ್.ಒ #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9 ,
Phone: 08040114455

Synopsys

ವೈ.ಕೆ.ಸಂಧ್ಯಾ ಶರ್ಮಾ ಅವರ ಕಥಾ ಸಂಕಲನ ‘ಆಗಂತುಕರು’. ಸುಬ್ರಾಯ ಚೊಕ್ಕಾಡಿ.ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ‘ಈ ಸಂಕಲನದಲ್ಲಿ ಹದಿನಾರು ಕಥೆಗಳಿವೆ. ಈ ಹದಿನಾರು ಕಥೆಗಳೂ ಗ್ರಾಮೀಣ ಬದುಕಿನ ಸುಖ ದುಃಖಗಳು, ಸಾವು, ಮಕ್ಕಳ ಸ್ವಾರ್ಥ ಹಾಗೂ ಧನದಾಹ,ಅಂತಃಕರಣದ ಉಕ್ಕು,ಮಹಿಳಾ ವಿಮೋಚನೆ, ಕೃತಘ್ನತೆ,...ಹೀಗೆ ಹತ್ತು ಹಲವು ವೈವಿಧ್ಯಪೂರ್ಣ ವಸ್ತುಗಳಿಂದ ಕೂಡಿವೆ. ಒಂದೇ ವಸ್ತುವಿಗೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚುಕಥೆಗಳಿದ್ದರೂ ಆ ಕಥೆಗಳು ಒಂದೇ ರೀತಿಯಲ್ಲಿರದೆ ಆ ವಸ್ತುವಿನ ವಿವಿಧ ಮೈಗಳನ್ನು ಅನಾವರಣಗೊಳಿಸುವ ರೀತಿ ಗಮನಾರ್ಹವಾಗಿದೆ.ಉದಾಹರಣೆಯಾಗಿ ಸಾವನ್ನು ವಸ್ತುವಾಗುಳ್ಳ "ಹುಟ್ಟು ಹಬ್ಬ",ಮಹಿಳಾ ವಿಮೋಚನೆ",ಪುನರಪಿ ಮರಣಂ"ಮೊದಲಾದ ಕಥೆಗಳನ್ನು ನೋಡಬಹುದು.ಯಶವಂತ ಚಿತ್ತಾಲರ "ಪಯಣ"ಕಥೆಯನ್ನು ನೆನಪಿಸುವ" ಹುಟ್ಟುಹಬ್ಬ"ಕಥೆಯಲ್ಲಿ ಮಾಧವರಾಯರು ತಮ್ಮ ಹುಟ್ಟುಹಬ್ಬದ ದಿನದಂದೇ ಸಾವನ್ನು ಕಾಣುವ ಅಪೂರ್ವ ಘಟನೆಯಿದೆ.ಅದೇ ,"ಪುನರಪಿ ಮರಣಂ"ಕಥೆಯಲ್ಲಿ ಸುಂದರ ಮೂರ್ತಿಯವರ ಸಾವು ಎರಡು ಸಲ ಸಂಭವಿಸುವ ವಿಚಿತ್ರ ಘಟನೆಯಿದೆ.ಅದೇ ಮಹಿಳಾ ವಿಮೋಚನೆಯ ಕಥೆಯು ಸತ್ಯವಾನ್ ಸಾವಿತ್ರಿಯ ಕಥೆಯನ್ನು ನೆನಪಿಸುವ ಹಾಗೆ ಕಥಾ ನಾಯಕಿಯು ತನ್ನನ್ನು ಒಯ್ಯಲು ಬಂದ ಯಮನನ್ನು ಜಾಣತನದಿಂದ ದೂರ ಮಾಡಿದ ಸ್ವಾರಸ್ಯಕರ ಕಥೆಯಿದೆ.ಅಂದರೆ ಈ ಎಲ್ಲ ಕಥೆಗಳ ಮೂಲಕ ಸಾವು ಎನ್ನುವ ಒಂದು ವಸ್ತುವನ್ನು ಭಿನ್ನ ಭಿನ್ನ ರೀತಿಯಿಂದ ಸಂಧ್ಯಾ ಶರ್ಮ ಅವರು ಅನಾವರಣಗೊಳಿಸಿದ ರೀತಿಯು ಗಮನಾರ್ಹ’ ಎಂದು ಹೇಳಿದ್ದಾರೆ. ಎಚ್ಚೆಸ್ವಿ ಅವರು ಕೃತಿಗೆ ಬೆನ್ನುಡಿ ಬರೆದಿದ್ದಾರೆ.

About the Author

ಸಂಧ್ಯಾ ಶರ್ಮ ವೈ.ಕೆ
(01 June 1955)

ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ  ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ  ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...

READ MORE

Related Books