ಇಬ್ಲೀಶ್

Author : ಡಿ.ಎಂ. ನದಾಫ್

Pages 100

₹ 90.00




Year of Publication: 2021
Published by: ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಸರಸ್ವತಿ ಗೋದಾಮು ಹತ್ತಿರ, ಕಲಬುರಗಿ-585 101

Synopsys

ಲೇಖಕ ಡಿ.ಎಂ ನದಾಫ್ ಅವರ ಕತಾ ಸಂಕಲನ ಇಬ್ಲೀಶ್. ಕೃತಿಯಲ್ಲಿ ಸಂಗನಗೌಡ ಹಿರೇಗೌಡ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ ಇಲ್ಲಿನ ಕಥೆಯ ನಿರೂಪಣೆಯು ಎಲ್ಲಿಯೂ ತತ್ತರಸ್ಯಾಡದೇ ಸರಾಗವಾಗಿ ಸಾಗುತ್ತದೆ. ಕತ್ತಲು, ಬೆಳಕು, ಸುಡು ಮಧ್ಯಾಹ್ನವನ್ನು ಮತ್ತು ಆದಾಗತಾನೆ ಮೋಡದ ಒಡಲಿಂದ ಉದುರಿದ ಸೂರ್ಯ ಚಂದ್ರರನ್ನು ಹಾಗೂ ಭೀಮಾ ತೀರದ ಪರಿಸರವನ್ನು ಅಷ್ಟೇ ಸೊಗಸಾಗಿ ಹಿಡಿದಿಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಪ್ರತಿಯೊಂದು ಕಥೆಯೂ ಒಂದೊಂದು ಕಾದಂಬರಿಯಾಗುವಷ್ಟು ಸಂವೇದನೆಯನ್ನು ಹೊತ್ತು ಬಂದು ತಕ್ಷಣಕ್ಕೆ ಮೌನವಹಿಸಿ ಸಣ್ಣ ಕಥೆಯಾಗಿ, ಈ ನೆಲೆದ ಬದುಕಿನ ವ್ಯಥೆಯಾಗಿ ಉಳಿದುಬಿಡುತ್ತವೆ. ಹೈದ್ರಾಬಾದ್ ಕರ್ನಾಟಕದ ಸಂವೇದನಾಶೀಲ ಬರೆಹಗಾರರಲ್ಲಿ ಡಿ. ಎಮ್. ನದಾಫ್ ಅವರೂ ಕೂಡಾ ಒಬ್ಬರು. ಕನ್ನಡ ಸಾಹಿತ್ಯದ ಲೋಕ ಇವರ ಕಥೆಗಳನ್ನು ಆಗು ಮಾಡಿಕೊಳ್ಳುತ್ತದೆ ಎನ್ನುವುದಕ್ಕೆ ಯಾವುದೇ ಅನುಮಾನ ಪಡೆದುಕೊಳ್ಳಬೇಕಾಗಿಲ್ಲವೆಂದು ಅನಿಸುತ್ತದೆ. ಅವರಿಂದ ಮತ್ತಷ್ಟು ಸಂವೇದನಾಶೀಲ ಬರವಣಿಗೆ ಬರಲಿ' ಎಂದು ನಾನು ಹಾರೈಸುತ್ತೇನೆ ಎಂದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ದಕ್ಕದವಳು, ಅಕ್ಷರದ ಹಾದರ, ಹತ್ತಿರವೆಂಬ ದೂರ, ಕಾಕತಾಳೀಯ, ಮದರ್ ಇಂಡಿಯಾ, ಇಬ್ಲೀಶ್, ತನು-ಮನ ಸುಡುವ ಜಡಿ ಮಳೆ, ಮುನಿಸು, ಮಳೆ, ಸೌಗಂಧಾಯಣ, ಹನನ, ಕಾಡಪ್ಪ ಕೈಲಾಸ ಕಂಡ ಕತೆ, ನಿಸ್ಸಂತಾನ ಸೆರಿದಂತೆ 17ಕತೆಗಳಿವೆ.

About the Author

ಡಿ.ಎಂ. ನದಾಫ್

ಲೇಖಕ ಡಿ.ಎಂ. ನದಾಫ್ ಅವರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದವರು. ಎಂ.ಎ, ಬಿ.ಇಡಿ ಪದವೀಧರರು. ಭಾರತ ಜ್ಞಾನ-ವಿಜ್ಞಾನ ಸಮಿತಿಯ ಗುಲಬರ್ಗಾ ಸಮಿತಿಯ ಕಾರ್ಯಕಾರಿ ಮಂಡಳಿ ಸದಸ್ಯರು, 50ಕ್ಕೂ ಆದಿಕ ಪವಾಡ ಬಯಲು ಕಾರ್ಯಕ್ರಮಗಳ ಪ್ರದರ್ಶನ, ಸಮಿತಿಯ ‘ಚೈತ್ರದ ಚಿಗುರು’ ಶಿಬಿರದ ಸಂಚಾಲಕರು, ಉದಯೋನ್ಮುಖ ಬರಹಗಾರರ ಬಳಗದ ಸ್ಥಾಪಕ ಸದಸ್ಯರು, ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ (1994-97) ತಾಲೂಕು ಪ್ರತಿನಿಧಿ, ಗುಲಬರ್ಗಾ ರಂಗ ಸಮುದಾಯ ತಂಡದ ಸದಸ್ಯ, ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ (2016 ...

READ MORE

Related Books