’ಸಾವಿನ ಸೆರಗಿನಲ್ಲಿ’ ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರ ಹೊಸ ಕೃತಿ. ಗುರುಪ್ರಸಾದ್ ಅವರ ಸಾಹಿತ್ಯ-ಬರವಣಿಗೆ ಮೇಲಿನ ಪ್ರೀತಿ ಕನ್ನಡಿಗರಿಗೆ ಹೊಸದೇನಲ್ಲ. ವೃತ್ತಿಯಲ್ಲಿ ಇದ್ದ ದಿನಗಳಲ್ಲಿಯೇ ಅವರು ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಪತ್ರಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದಿದ್ದಾರೆ. ’ಸಾವಿನ ಸೆರಗಿನಲ್ಲಿ’ ಕುತೂಹಲ ಹುಟ್ಟಿಸುವ ಕೃತಿ. ಸಾವು ಹುಟ್ಟು ಹಾಕುವ ಆತಂಕ, ತಳಮಳವನ್ನು ದಾಖಲಿಸುವ ಕೃತಿ. ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಿದ್ದದಾರೆ. ಲೇಖಕರು ಅಪರಾಧಿಗಳ ಮನಸ್ಸಿನಲ್ಲಿ ನಡೆಯುತ್ತಿದ್ದ ತುಮುಲವನ್ನು ದಾಖಲಿಸಿದ್ದಾರೆ. ಸಾವಿನ ಬಾಗಿಲಲ್ಲಿ ನಿಂತ ವ್ಯಕ್ತಿಯ ಮನಸ್ಥಿತಿಯನ್ನು ಹಿಡಿದಿಡುವ 14 ನೈಜ ಕತೆಗಳು ಈ ಕೃತಿಯಲ್ಲಿವೆ.
ಬರೆಹಗಾರ ಡಿ. ವಿ. ಗುರುಪ್ರಸಾದ್ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳು. ಅವರು ರಾಜ್ಯದ ಪೋಲೀಸ್ ಗುಪ್ತಚರದಳದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳ ಅನುಭವ ಮತ್ತು ತಮ್ಮ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವ ಮೂಲಕ ಕ್ರೈಂ ಲೋಕದ ವಿಸ್ಮಯ ಸಂಗತಿಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ, ವೀರಪ್ಪನ್ : ದಂತಚೋರನ ಬೆನ್ನಟ್ಟಿ, ಕೈಗೆ ಬಂದ ತುತ್ತು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಪೊಲೀಸ್ ಎನ್ ಕೌಂಟರ್’ ಅವರ ಕಾದಂಬರಿ. ...
READ MORE