ಕದ ತೆರೆದ ಆಕಾಶ

Author : ಮಂಜುನಾಥ್ ಚಾಂದ್

Pages 144

₹ 120.00
Year of Publication: 2015
Published by: ಅಕ್ಷರ ಮಂಡಲ ಪ್ರಕಾಶನ
Address: ಚಾಂದ್ ಕುಟೀರ, #132 ಮೊದಲ ಬ್ಲಾಕ್, ಬಿ.ಡಿ.ಎ. ಬಡಾವಣೆ, ಬನಶಂಕರಿ ಆರನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು - 560098
Phone: 9449238154

Synopsys

ಕರಾವಳಿ ನೆಲದ ಕಥನವನ್ನು ವಿಭಿನ್ನ ನೆಲೆಗಟ್ಟಿನಲ್ಲಿ ‘ಕದ ತೆರೆದ ಆಕಾಶ’ ಕಥಾ ಸಂಕಲನದ ಮೂಲಕ ಕಟ್ಟಿದ್ದಾರೆ ಕತೆಗಾರ ಮಂಜುನಾಥ್ ಚಾಂದ್. ಕೃತಿಗೆ ಬೆನ್ನುಡಿ ಬರೆದಿರುವ ಎ. ವಿ. ನಾವಡ ಅವರು “ಚಾಂದ್ ಅವರ ಹೆಚ್ಚಿನ ಕತೆಗಳ ಜೀವದನಿ ಇರುವುದು ನಾಗರಿಕವಲ್ಲದ ಊರೊಳಗೆ. (ಇದಕ್ಕೆ ಅಪವಾದ ಗೋಡೆಗಳನು ದಾಟಿ, ಕುಬೇರ ಶಿಕಾರಿ, ಕದ ತೆರೆದ ಆಕಾಶ ಕತೆಗಳು). ಕೆಲವು ಕತೆಗಳಲ್ಲಿ ಅಮಾನವೀಯ ನಾಗರಿಕ ಜಗತ್ತಿನೊಳಗೂ ಅವರು ಪ್ರವೇಶಿಸುತ್ತಾರೆ. ‘ಕುಬೇರ ಶಿಕಾರಿ’ಯಲ್ಲಿ ಯಂತ್ರದೊಂದಿಗೆ ಯಂತ್ರವಾಗುವ ಪತ್ರಿಕಾ ಸಂಪಾದಕ ಬಳಗ, ಅವರೊಳಗಿನ ಸ್ನೇಹ, ವಿರಸ, ಈರ್ಷೆ,  ಸುಖ-ಕಷ್ಟಗಳ ವಿವರಗಳೊಂದಿಗೆ ಮನುಷ್ಯರ ಜೀವಂತಿಕೆಯನ್ನು ಹೀರುವ ವಿಷಣ್ಣ ವಾತಾವರಣದ ಚಿತ್ರಣವಿದೆ” ಎಂದು ವಿಶ್ಲೇಷಿಸಿದ್ದಾರೆ.

About the Author

ಮಂಜುನಾಥ್ ಚಾಂದ್

ಲೇಖಕ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಭಾಷೆಯಲ್ಲಿ ಅವರು ಬರೆದಿರುವ ಅನೇಕ ಕಥೆಗಳು ಜನಮನ್ನಣೆ ಗಳಿಸಿವೆ. ‘ಅಮ್ಮ ಕೊಟ್ಟ ಜಾಜಿ ದಂಡೆ’, ಕದ ತೆರೆದ ಆಕಾಶ’, 'ಹೃದಯದ ಮಾತು' ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಕಾದಂಬರಿ. ಇದಕ್ಕೆ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಲಭಿಸಿದ್ದು ಚಲನಚಿತ್ರ ಕೂಡ ಆಗಿದೆ. ...

READ MORE

Related Books