ಕಾಜೂ ಬಿಸ್ಕೆಟ್

Author : ಕಿರಣ್ ಕುಮಾರ್ ಕೆ.ಆರ್

Pages 100

₹ 125.00
Year of Publication: 2023
Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

ಹೊಸ ತಲೆಮಾರುಗಳ ತಲ್ಲಣಗಳ ಗುಚ್ಛ ಕಿರಣ್ ಕುಮಾರ್ ಕೆ.ಆರ್ ಅವರ “ಕಾಜೂ ಬಿಸ್ಕೆಟ್” ಕಥಾಸಂಕಲನ. ಈ ಕಥಾಸಂಕಲನದಲ್ಲಿ ಒಟ್ಟು 12 ಕತೆಗಳಿದ್ದು, ವಸ್ತು ವೈವಿಧ್ಯಯ ವಿಚಾರಗಳೊಂದಿಗೆ ಕತೆಗಳು ಪುರುಷನ ಜವಾಬ್ಧಾರಿಯ ಕುರಿತು ಮಾತನಾಡುತ್ತವೆ ಹಾಗು ಈ ಅಷ್ಟೂ ಕತೆಗಳು ಪುರುಷ ಪ್ರಧಾನ ಕತೆಗಳು ಎನ್ನುವುದನ್ನು ಸೂಚ್ಯವಾಗಿ ಹೇಳುತ್ತದೆ‌. ಇನ್ನು ಹನ್ನೆರಡು ಕತೆಗಳಲ್ಲಿ ಕೆಲವು ಕತೆಗಳು ಪ್ರೀತಿ ಪ್ರೇಮ, ಮದುವೆ, ದಾಂಪತ್ಯದ ವಿವಿಧ ಮಜುಲುಗಳನ್ನು ಪರಿಚಯಿಸಿದರೆ, ಕೆಲವು ಕತೆಗಳು ಒಬ್ಬಂಟಿಗರ ಕತೆಗಳನ್ನು ಅವರ ತಾಕಲಾಟಗಳನ್ನು ಹೇಳುತ್ತಾ ಹೋಗುತ್ತವೆ. ಇನ್ನು ಕೆಲವು ಕತೆಗಳು ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡತೊಡಗುತ್ತವೆ. ಒಟ್ಟಿನಲ್ಲಿ ಲೇಖಕರು ಅವರ ಪುಸ್ತಕದ ಮೊದಲ‌ ಮಾತಿನಲ್ಲಿ ಹೇಳಿದ ಹಾಗೆ‌ ಅತಿ ಸಾಮಾನ್ಯ ಎನಿಸುವ ಸಂಗತಿಗಳನ್ನು ಅವರು ಕತೆಗಳಲ್ಲಿ ಹೇಳಿದರೂ ಅವು ಈಗಿನ ಕಾಲದ ಜ್ವಲಂತ ಸಮಸ್ಯೆಗಳು ಸಹ ಎನ್ನುವುದನ್ನು ನಮಗೆ ತಮ್ಮದೇ ಬರಹದ ಶೈಲಿಯಿಂದ ಮನವರಿಕೆ ಮಾಡಿಕೊಡುತ್ತಾ ಹೋಗುತ್ತಾರೆ. ಹಾಗೆಯೇ ಒಂದು ಕತೆಯಲ್ಲಿ ಬರೀ ಒಂದು ಸಮಸ್ಯೆ ಅಷ್ಟೇ ಇರದೆ ಅದಕ್ಕೆ ತಾಳೆ ಹಾಕಿಕೊಂಡಂತೆ ಮತ್ತೊಂದು ಸಮಸ್ಯೆಯೂ ಸಹ ಇರುತ್ತದೆ. ಆ ಸಮಸ್ಯೆಗಳಿಂದ ಹೊರಬರಲು ಒದ್ದಾಡುವವರ ಕತೆಗಳ ಗುಚ್ಛವೇ “ಕಾಜೂ ಬಿಸ್ಕೆಟ್” ಎನ್ನಬಹುದು.

About the Author

ಕಿರಣ್ ಕುಮಾರ್ ಕೆ.ಆರ್

ಕಿರಣ್ ಕುಮಾರ್ ಕೆ.ಆರ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿಯ ವಿಚಾರ. ಅವರ ಚೊಚ್ಚಲ ಕಥಾಸಂಕಲನ ‘ಕಾಜೂ ಬಿಸ್ಕೆಟ್’.  ...

READ MORE

Related Books