ಸಾರ್ಥಕ ಮನಗಳು

Author : ಸುಪ್ರೀತಾ ವೆಂಕಟ್

Pages 95

₹ 100.00
Year of Publication: 2022
Published by: ಸುಪ್ರೀತ ವೆಂಕಟ್ ಪ್ರಕಾಶನ

Synopsys

ಸಾರ್ಥಕ ಮನಗಳು ಸುಪ್ರೀತ ವೆಂಕಟ್ ಅವರ ಕಥೆಗಳ ಸಂಗ್ರಹವಾಗಿದೆ. ಬರಹ ವರ್ತಮಾನಕ್ಕೆ ಕನ್ನಡಿ, ಭವಿಷ್ಯಕ್ಕೆ ಮುನ್ನುಡಿ, ಮಾನವನ ನಿಜವಾದ ಸ್ನೇಹಿತ ಪುಸ್ತಕಗಳೇ, ದಾರಿ ತೋರುವ ಸಹೃದಯಿ, ಜ್ಞಾನ ತುಂಬುವ ಅರಿವಿನ ಕಡಲು, ನೋವಿನ ಸಮಯದಲ್ಲಿ ಸಂತೈಸುವ ಆತ್ಮೀಯ, ಕಗ್ಗಂಟಿನ ಸಮಯದಲ್ಲಿ ಧೈರ್ಯ ತುಂಬುವ ಮಿಶ್ರ ಓದು ಬರವಣಿಗೆ ನೀಡುವ ರಸಾನುಭಾವಕ್ಕೆ ಯಾವುದೂ ಸಾಟಿ ಇಲ್ಲ ಎಂದು ಶ್ರೀಮತಿ ಸಾಯಿಸುತೆ ಅವರು ಪುಸ್ತಕ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸುಪ್ರೀತಾ ವೆಂಕಟ್

ಕವಿ ಸುಪ್ರೀತಾ ವೆಂಕಟ್ ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಳೆದ 8 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪುಸ್ತಕಗಳನ್ನು ಓದುವುದು - ಕಥೆ, ಕಾದಂಬರಿಗಳು - ಸಾಮಾಜಿಕ, ವೈಜ್ಞಾನಿಕ ವಿಚಾರಗಳ ಕುರಿತು ಬರೆಯುವುದು, ಅಡಿಗೆಯಲ್ಲಿ ಹೊಸ ರುಚಿಗಳನ್ನು ಪ್ರಯತ್ನಿಸುವುದು, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಆಡುವುದು ಅವರ ಹವ್ಯಾಸ. ಕನ್ನಡ ಪತ್ರಿಕೆಗಳ ಪುರವಣಿಗಳಿಗೆ ಲೇಖನ, ಕವಿತೆ, ಬ್ಲಾಗ್'ಗಳನ್ನು ಬರೆಯುತ್ತಾರೆ. ...

READ MORE

Related Books