ಶಿವನಪಳ್ಳಿಯ ಕಪ್ಪುಚಿರತೆ ಮತ್ತು ಇತರ ಕಥೆಗಳು

Author : ನಡಹಳ್ಳಿ ವಸಂತ್‌

Pages 156

₹ 120.00
Year of Publication: 2017
Published by: ಸಿರಿಗನ್ನಡ ಪುಸ್ತಕ ಮನೆ
Address: ಶಿವಮೊಗ್ಗ.
Phone: 9341068242

Synopsys

ಪೂರ್ಣಚಂದ್ರ ತೇಜಸ್ವಿಯವರು ಕನ್ನಡಿಗರಿಗೆ ಕೆನೆತ್ ಆಂಡರ್ಸನ್ ಅವರನ್ನು ಪರಿಚಯಿಸದ ಮೇಲೆ ನರಭಕ್ಷಕಗಳ ಬೇಟೆಯ ಹಿಂದಿನ ಕಲೆಗಾರಿಗೆಯನ್ನು ಅರಿಯಲು ಸಾಧ್ಯವಾಯಿತು. ಇಲ್ಲಿ ಕೆನೆತ್ ಆಂಡರ್ಸನ್ ಅವರ ಎಂಟು ಬೇಟೆಯ ಅನುಭವಗಳ ಸಂಗ್ರಹಾನುವಾದವಿದೆ. ಗಮನಾರ್ಹ ವಿಚಾರವೆಂದರೆ ಇವುಗಳಲ್ಲಿ ನಾಲ್ಕು ಕರ್ನಾಟಕದ ಕಾಡುಗಳಿಗೆ ಸಂಬಧಿಸಿದ್ದಾಗಿದ್ದರೆ ಉಳಿದ ನಾಲ್ಕು ಹತ್ತಿರದ ತಮಿಳನಾಡಿನ ಅರಣ್ಯಗಳಲ್ಲಿ ನಡೆದದ್ದು. ಕೆನೆತ್ ಆಂಡರ್ಸನ್ ಬರಹಗಳೆಂದರೆ ಅದ್ಭುತ ದೃಷ್ಯಕಾವ್ಯ. ಕಾಡಿನಲ್ಲಿ ಪ್ರತಿಕ್ಷಣವೂ ನಡೆಯುವುದನ್ನು ಕಣ್ಣೆದುರು ಕಟ್ಟಿಕೊಡುವ ಅವರ ಕಥನ ಕೌಶಲ್ಯ ಅನನ್ಯವಾದದ್ದು. ಪರಿಸರ ಮತ್ತು ವನ್ಯಜೀವಿಗಳ ಬಗೆಗಿನ ಅವರ ಕಾಳಜಿ ಕೇವಲ ಹಣದ ಯೋಜನೆಗಳನ್ನು ರೂಪಿಸುವ ನಮ್ಮ ಸರ್ಕಾರಗಳ ಕಣ್ಣು ತೆರೆಸಬೇಕು. ಸ್ವಾತಂತ್ರಾನಂತರದ ಅಭಿವೃದ್ಧಿಯ ಅಂಧಯುಗದಲ್ಲಿ ನಾವು ಕಳೆದುಕೊಂಡಿರುವ ವನ್ಯಸಂಪತ್ತಿನ ಬಗೆಗೆ ಇಂದಿನ ಹಾಗೂ ಮುಂದಿನ ತಲೆಮಾರಿನವರಿಗೆ ಅರಿವಾಗಬೇಕಾದರೆ ಇಂತಹ ಪುಸ್ತಕಗಳನ್ನು ಓದಬೇಕು. ಎಲ್ಲಾ ಪೋಷಕರೂ ತಮ್ಮ ಮಕ್ಕಳಿಗೆ ಕೆನೆತ್ ಆಂಡರ್ಸನ್ ಅವರ ಬರಹಗಳನ್ನು ಓದಲು ಪ್ರೋತ್ಸಾಹಿಸಿದರೆ ಅವರಿಗೆ ಹೊಸದೊಂದು ರಮ್ಯ ಲೋಕವನ್ನು ಪರಿಚಯಿಸಬಹುದು.

About the Author

ನಡಹಳ್ಳಿ ವಸಂತ್‌

ನಡಹಳ್ಳಿ ವಸಂತ್‌ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್‌ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್‌ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್‌ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...

READ MORE

Related Books