ಸಂಸ್ಕೃತಿ ಮರೆತಾಗ

Author : ಅನಿತಾ ದುಬೈ.ಯಾದಗಿರಿ.

Pages 104

₹ 100.00
Year of Publication: 2020
Published by: ಲಕ್ಷ್ಮೀಕಾಂತ ಪ್ರಕಾಶನ.
Address: ಶರಣನಗರ (ಕಿಣ್ಣಿ) ತಾ.ಬಸವಕಲ್ಯಾಣ. ಜಿ.ಬೀದರ. 585437
Phone: 9945129331

Synopsys

ಸಂಸ್ಕೃತಿ ಮರೆತಾಗ (ಮತ್ತಿತರ ಮಿನಿ ಕಾದಂಬರಿಗಳು) ಕೃತಿಯಲ್ಲಿ ಚೈತ್ರದ ಚಂದ್ರಮ,ನೀತಿಶನ ಉದಯ,ಮತ್ತು ಸಂಸ್ಕೃತಿ ಮರೆತಾಗ ಎಂಬ ಮಿನಿ ಕಾದಂಬರಿಗಳಿವೆ. ಈ ಕೃತಿ 2019 ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಧನಸಹಾಯ ಪಡೆದಿದೆ. ಗ್ರಾಮೀಣ ಜನ ಜೀವನದ ಚಿತ್ರಣ, ಸಾಮಾಜಿಕ ಸಮಸ್ಯೆಗಳನ್ನು ಕಟ್ಟುಕೊಡುತ್ತವೆ ಇಲ್ಲಿಯ ಕಥೆಗಳ ವಸ್ತು.  ಚೈತ್ರದ ಚಂದ್ರಮ ಕಾದಂಬರಿಯು ವಿಧವಾ ಮಹಿಳೆ ಮತ್ತು ಆಕೆಯ ಹೆಣ್ಣು ಮಗುವಿಗೆ ಕೌಟುಂಬಿಕ ಸದಸ್ಯರು ನಿರ್ಲಕ್ಷ್ಯ ಮಾಡುವ ಪರಿ ಕರುಳು ಹಿಂಡುವಂತಿದ್ದರೆ,  ನೀತಿಶನ ಉದಯದಲ್ಲಿ ಶಾಲಾ ಬಾಲಕನೊಬ್ಬನ ಬಂಡಾಯ ಮೆಲ್ವರ್ಗದ ಗೌಡರ ವಿರುದ್ಧ ಇರುವ ಅಸಮಾಧಾನ ಕತೆಯುದ್ದಕ್ಕೂ ಓದಿಸಿಕೊಂಡು ಹೋಗುತ್ತದೆ. ಮೂರನೇ ಕಥೆಯು ‘ಸಂಸ್ಕೃತಿ ಮರೆತಾಗ’ ಆದಿವಾಸಿಗಳ ಸಂಸ್ಕೃತಿ ಬಿಂಬಿಸುತ್ತದೆ. 

About the Author

ಅನಿತಾ ದುಬೈ.ಯಾದಗಿರಿ.
(06 May 1996)

ಅನಿತಾ ದುಬೈ. ಇವರು ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ (6-5-1996 ) ಗ್ರಾಮದವರು. ಡಿ.ಇಡಿ ಅಧ್ಯಯನ ಮಾಡಿ ಸದ್ಯ ಪದವಿ ವಿದ್ಯಾರ್ಥಿನಿ. ' ಸಂಸ್ಕೃತಿ ಮರೆತಾಗ' ಕಾದಂಬರಿ ಪ್ರಕಟಿಸಿದ್ದು,  ಈ ಕಾದಂಬರಿ 2019 ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿ ಸಹಾಯ ಧನಕ್ಕೆ ಆಯ್ಕೆಯಾಗಿತ್ತು.  ...

READ MORE

Related Books