ಈಸೋಪನ ಲೋಕನೀತಿ ಕಥೆಗಳು

Author : ಆನಂದ (ಅಜ್ಜಂಪುರ ಸೀತಾರಾಂ)

Pages 232

₹ 120.00

Buy Now


Year of Publication: 2012
Published by: ನವಕರ್ನಾಟಕ ಪ್ರಕಾಶನ

Synopsys

‘ಈಸೋಪನ ಲೋಕನೀತಿ ಕಥೆಗಳು’ ಕೃತಿಯು ಆನಂದ ಅವರ ಕಥಾಸಂಕಲನವಾಗಿದೆ. ಸುಮಾರು ನೂರಿಪ್ಪತ್ತು ಕಥೆಗಳಿರುವ ಈ ಸಂಕಲನದಲ್ಲಿ ಕಥಾಹಂದರಕ್ಕೆ ಸಂಬಂಧಿಸಿದಂತೆ ಸುಮಾರು ನೂರಾಹತ್ತು ಚಿತ್ರಗಳನ್ನು ನೀಡಲಾಗಿದೆ. ಇದು ಓದುಗರು ಮತ್ತಷ್ಟು ಕುತೂಹಲಿಗಳಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಕಥಾವಿನ್ಯಾಸ, ನಿರೂಪಣೆಯ ಧಾಟಿ, ಪಾತ್ರಗಳ ಪೋಷಣೆ ಹಾಗೂ ಹೆಸರುಗಳು ಓದುಗರಲ್ಲಿ ಕುತೂಹಲ ಮತ್ತು ಆಸಕ್ತಿಯನ್ನುಂಟು ಮಾಡುತ್ತವೆ. ಗಾದೆ ಮತ್ತು ಒಗಟುಗಳ ವಿವರಣೆಯಂತಿರುವ ಈ ಕಥೆಗಳು ಲೌಕಿಕ ಜ್ಞಾನದ ಜೊತೆಗೆ ಸಾಮಾಜಿಕ ವಿವೇಕವನ್ನು ಬೆಳೆಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ, ಯಂತ್ರ ನಾಗರಿಕತೆಗೆ ಮನಸೋತು, ಸದಾ ನಿರ್ಜೀವಿ ವಸ್ತುಗಳಂತೆ ಬದುಕು ತ್ತಿರುವ ಹಾಗೂ ದಣಿಯುತ್ತಿರುವ, ಈ ಲೋಕದ ಪ್ರತಿಯೊಂದು ಜೀವಿಯನ್ನು ಭೋಗದ ವಸ್ತುವಂತೆ ಕಾಣುತ್ತಿರುವ ಈ ನಾಗರಿಕ ಸಮಾಜಕ್ಕೆ ನಿಸರ್ಗ ಹಾಗೂ ಸಾಮಾಜಿಕ ಜ್ಞಾನವನ್ನು ಈ ನೀತಿ ಕಥೆಗಳು ನೀಡುತ್ತವೆ.

About the Author

ಆನಂದ (ಅಜ್ಜಂಪುರ ಸೀತಾರಾಂ)
(18 August 1902 - 17 November 1963)

’ಆನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅಜ್ಜಂಪುರ ಸೀತಾರಾಂ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮಾಸ್ತಿಯವರ ಸಣ್ಣಕಥಾ ಪರಂಪರೆಯಲ್ಲಿ ಆನಂದರು ಹೆಜ್ಜೆಗುರುತು ಮೂಡಿಸುವ ಬರವಣಿಗೆ. ಇವರು ಜನಿಸಿದ್ದು 1902 ಆಗಸ್ಟ್‌ 18ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜನಿಸಿದರು.  ಸೀತಾರಾಮ್ ಅವರ ಪ್ರಾರಂಭಿಕ ಶಿಕ್ಷಣ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ನಡೆಯಿತು. ಹೈಸ್ಕೂಲು ಹಾಗೂ ಜ್ಯೂನಿಯರ್ ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್‌ಸಿ ಪದವಿ ಗಳಿಸಿದರು. ಕೈಲಾಸಂರವರು ಶಿವಮೊಗ್ಗದಲ್ಲಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತಿದ್ದ ಎಂ.ಆರ್.ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು ಸಾಹಿತ್ಯಾಭ್ಯಾಸಕ್ಕೆ ಉತ್ತೇಜನ ...

READ MORE

Reviews

(ಹೊಸತು, ನವೆಂಬರ್ 2012, ಪುಸ್ತಕದ ಪರಿಚಯ)

ಈ ನೀತಿಕಥೆಗಳಲ್ಲಿ ಮನುಷ್ಯ ಪಾತ್ರಗಳಿಗಿಂತ ಪ್ರಾಣಿ-ಪಕ್ಷಿಗಳ ಪಾತ್ರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಪ್ರಾಣಿ-ಪಕ್ಷಿ-ಮನುಷ್ಯ ಪಾತ್ರಗಳು ಪರಸ್ಪರ ಸಂಭಾಷಿಸುತ್ತವೆ. ಈ ಸಂಭಾಷಣೆಯು ಅಸಹಜವೂ, ಅಲೌಕಿಕವೂ, ಅಸಂಭವವೂ ಆಗಿದ್ದರೂ, ಇದು ಜನಪದರ ನಿಸರ್ಗಪ್ರಿಯತೆಗೆ ಸಾಕ್ಷಿಯಾಗಿದೆ. ಹಾಗೆಯೇ ಮಾನವ-ಮಾನವೇತರ ಜೀವಸಂಕುಲದ ನಡುವೆ ಇರಲೇಬೇಕಾದ ಸಹಬಾಳ್ವೆಯ ಸಂಬಂಧವನ್ನು ಮನಗಾಣಿಸುತ್ತವೆ. ಸುಮಾರು ನೂರಿಪ್ಪತ್ತು ಕಥೆಗಳಿರುವ ಈ ಸಂಕಲನದಲ್ಲಿ ಕಥಾಹಂದರಕ್ಕೆ ಸಂಬಂಧಿಸಿದಂತೆ ಸುಮಾರು ನೂರಾಹತ್ತು ಚಿತ್ರಗಳನ್ನು ನೀಡಲಾಗಿದೆ. ಇದು ಓದುಗರು ಮತ್ತಷ್ಟು ಕುತೂಹಲಿಗಳಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಕಥಾವಿನ್ಯಾಸ, ನಿರೂಪಣೆಯ ಧಾಟಿ, ಪಾತ್ರಗಳ ಪೋಷಣೆ ಹಾಗೂ ಹೆಸರುಗಳು ಓದುಗರಲ್ಲಿ ಕುತೂಹಲ ಮತ್ತು ಆಸಕ್ತಿಯನ್ನುಂಟು ಮಾಡುತ್ತವೆ. ಗಾದೆ ಮತ್ತು ಒಗಟುಗಳ ವಿವರಣೆಯಂತಿರುವ ಈ ಕಥೆಗಳು ಲೌಕಿಕ ಜ್ಞಾನದ ಜೊತೆಗೆ ಸಾಮಾಜಿಕ ವಿವೇಕವನ್ನು ಬೆಳೆಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ, ಯಂತ್ರ ನಾಗರಿಕತೆಗೆ ಮನಸೋತು, ಸದಾ ನಿರ್ಜೀವಿ ವಸ್ತುಗಳಂತೆ ಬದುಕು ತ್ತಿರುವ ಹಾಗೂ ದಣಿಯುತ್ತಿರುವ, ಈ ಲೋಕದ ಪ್ರತಿಯೊಂದು ಜೀವಿಯನ್ನು ಭೋಗದ ವಸ್ತುವಂತೆ ಕಾಣುತ್ತಿರುವ ಈ ನಾಗರಿಕ ಸಮಾಜಕ್ಕೆ ನಿಸರ್ಗ ಹಾಗೂ ಸಾಮಾಜಿಕ ಜ್ಞಾನವನ್ನು ಈ ನೀತಿ ಕಥೆಗಳು ನೀಡುತ್ತವೆ.

Related Books