ಮಣ್ಣಿನ ಗುಣ

Author : ವಿರೂಪಾಕ್ಷಪ್ಪ ಕೋರಗಲ್‌

Pages 81

₹ 25.00
Year of Publication: 1992
Published by: ಪ್ರಗತಿಪರ ವೇದಿಕೆ ಪ್ರಕಾಶನ
Address: ಪ್ರಗತಿಪರ ವೇದಿಕೆ ಪ್ರಕಾಶನ,ಪಂಪ ವಿದ್ಯಾನಗರ,ಹಾವೇರಿ 581101

Synopsys

"ಮಣ್ಣಿನ ಗುಣ" ಲೇಖಕ ಕೋರಗಲ್ ವಿರೂಪಾಕ್ಷಪ್ಪ ಸಂಕಲನದ ಕೃತಿ. ಉತ್ತರ ಕರ್ನಾಟಕದ ಅದರಲ್ಲಿಯೂ ಹೈದರಾಬಾದ ಕರ್ನಾಟಕದ ಮಟ್ಟಿಗೆ ಭಾಷೆ, ಭಾವನೆ ಇಣುಕು ಹಾಕಿದೆ. ಈ ಸಂಕಲನದಲ್ಲಿ ನಗರದ ನಾಗರಿಕತೆಯಿಂದ ದೂರವುಳಿದ ಹಳ್ಳಿಯ ಮುಗ್ಧ ಬದುಕಿನ ಸುತ್ತ ಕಥೆ ಬೆಳೆಯುತ್ತವೆ. ಹಸಿರೆಲೆ,ಕಥೆ ಅಂದ್ರೆ ಕಥೆ ಅಲ್ಲ,ಶಿಷ್ಯ,ಮುಖವಾಡ,ಬೆಲ್ಲದ ಸುತ್ತ,ಕೊಲ್ಲುವವ ಕಾಯುವವ,ಗಂಧ ಗಾಳಿ ಬೆಳೆತ ಮೇಲೆ,ಮಣ್ಣಿನ ಗುಣ,ಹೆಣ್ಣು ದೆವ್ವ ಇವು ಈ ಸಂಕಲನದಲ್ಲಿ ಇರುವ ವಿಷಯ ವಸ್ತು.

About the Author

ವಿರೂಪಾಕ್ಷಪ್ಪ ಕೋರಗಲ್‌

ಹಿರಿಯ ಸಾಹಿತಿ ವಿರೂಪಾಕ್ಷಪ್ಪ ಕೋರಗಲ್ ಅವರು ಕೊಪ್ಪಳ ಜಿಲ್ಲೆಯ ವದಗನಹಾಳ ಗ್ರಾಮದವರು. ಅಪ್ಪಟ ಮೊಘಲಾಯಿಯ ಗ್ರಾಮೀಣ ಪ್ರತಿಭೆ. ಎರಡನೆಯ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದರು. ಗವಿಮಠದಲ್ಲಿ ಶಿಕ್ಷಣ ಪೂರೈಸಿ 30 ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತ ಬಂದಿದ್ದಾರೆ. ಓದುವಿಕೆ ಅವರ ಹವ್ಯಾಸ. ಸಣ್ಣ ಕತೆ ಅವರ ಆರಂಭದ ಸಾಹಿತ್ಯ ಪ್ರಕಾರ. ಕತೆ, ಪುರಾಣ ಕಾವ್ಯ ರಚನೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತದ ಪ್ರಾಧ್ಯಾಪಕರಾಗಿ, ಗಣಿತದ ಸಂಶೋಧನೆಯನ್ನು ಕನ್ನಡದಲ್ಲಿ ಮಾಡಿದ್ದಾರೆ. ಕೃತಿಗಳು: ಮುತ್ತಿನ ಚಿಪ್ಪಿನ ಸೂತ್ರಗಳು, ಭೂ ಅಳತೆಯಕ್ಷೇತ್ರ ಗಣಿತ, ಕಾವೇರಿಯಿಂದ ಗೋದಾವರಿವರೆಗೆ, ರಾಜಾದಿತ್ಯ, ನಾಯಿ  ...

READ MORE

Related Books