ಜಾಲಿ ಮುಳ್ಳು ಮತ್ತ ಇತರ ಕತಿಗುಳು

Author : ನಂದಕುಮಾರ ಜಿ ಕೆ

Pages 80

₹ 80.00
Year of Publication: 2021
Published by: ಅಂಕಿತ ಪುಸ್ತಕ
Address: #53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

‘ಜಾಲಿ ಮುಳ್ಳು ಮತ್ತ ಇತರ ಕತಿಗುಳು’ ಕೃತಿಯು ನಂದಕುಮಾರ ಜಿ. ಕೆ ಅವರ ಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಹಿರಿಯ ರಂಗಕರ್ಮಿ ಅಕ್ಷರ ಕೆ. ವಿ ಅವರು, `ಇಲ್ಲಿನ ಕತೆಗಳು ಸಮಕಾಲೀನ ಕನ್ನಡದ ಕಥೆಗಳಿಗಿಂತ ಹೆಚ್ಚು ಬಯಲುಸೀಮೆಯ ಹಳ್ಳಿಗಳಿಂದ ಸಂಗ್ರಹಿಸಿಕೊಂಡು ಬಂದ ಜಾನಪದ ಆಖ್ಯಾಯಿಕೆಗಳ ಹಾಗಿದ್ದವು. ಈ ‘ಕತಿಗುಳು’ ಒದ್ದಕ್ಕಿಂತ ಇನ್ನೊಂದು ಬೇರೆಯಾಗಿವೆ. ಪ್ರತಿಯೊಂದು ವಿಭಿನ್ನ ಅನುಭವಗಳ ಅನ್ಷೇಷಣೆಗೆ ಹೊರಡುತ್ತದೆ. ಆದರೆ, ಎರಡು ಪ್ರಮುಖ ಅಂಶಗಳು ಈ ಎಲ್ಲ ಕತೆಗಳಿಗೆ ಸ್ಥಾಯಿಯಾಗಿವೆ. ಒಂದು ಬಳ್ಳಾರಿ ಪ್ರಾಂತ್ಯದ ಬಯಲುಸೀಮೆಯ ಭಾಷೆ, ಎರಡನೇಯದ್ದು ಒಂದು ಬಗೆಯ ಜಾನಪದ ನಿರೂಪಣೆಯ ಚೌಕಟ್ಟು. ಇದು ಕೇವಲ ಉಪಭಾಷೆಯ ಬಳಕೆಯಲ್ಲಿ ಮಾತ್ರವಲ್ಲ, ಭಾಷೆಯನ್ನು ಆಡುವ ನುಡಿಯಾಗಿ ನುಡಿಸುವಲ್ಲಿ ನುಡಿಸುವ ವಿಧಾನದಲ್ಲಿ ಸ್ಪಷ್ಟವಾಗಿ ನನಗೆ ಕಾಣಿಸಿದೆ. ಇನ್ನು ಜಾನಪದ ಮಾದರಿಯ ಕಥನ ಕ್ರಮವು ಈ ಕಥೆಗಳಿಗೆ ಒಂದು ವಿಶೇಷವಾದ ವೈಶಿಷ್ಟ್ಯವನ್ನಂತೂ ಕೊಟ್ಟಿದೆ. ಈ ಯಾವ ಕಥನಕವೂ ನಿಜವಾಗಿ ನಡೆದ ಕಥೆಯಲ್ಲ, ಬದಲು,ಕಟ್ಟಿದ ಕಥೆ-ಎಂಬ ಅವ್ಯಕ್ತ ಸಂವಹನೆ ಈ ಕಥನದೊಳಗೇ ಅಡಕವಾಗಿದೆ. ಇದು ಸ್ವಭಾವೋಕ್ತಿಗಿಂತ ಭಿನ್ನವಾದ ಬೇರೆ ಬಗೆಯ ಕಥನವನ್ನು ಮಾಡುತ್ತಿದೆ ಎಂಬಂಥ ಸೂಚನೆ ಈ ಕತೆಗಳಲ್ಲಿರುವಂತೆ ತೋರುತ್ತದೆ'  ಎಂದು ಅಭಿಪ್ರಾಯಪಟ್ಟಿದ್ದಾರೆ..

About the Author

ನಂದಕುಮಾರ ಜಿ ಕೆ

ರಂಗಕರ್ಮಿ, ಲೇಖಕ ನಂದಕುಮಾರ ಜಿ. ಕೆ ಅವರು ಮೂಲತಃ ವಿಜಯ ನಗರ  ಜಿಲ್ಲೆಯ ಹಡಗಲಿಯವರು. 1992 ಸೆಪ್ಟೆಂಬರ್ 30 ರಂದು ಜನನ. ವೃತ್ತಿಯಲ್ಲಿ ಕಲಾವಿದ. ಉತ್ತಮ ಸಂಘಟಕರು ಆಗಿದ್ದಾರೆ. ಕಾಲೇಜು ದಿನಗಳಲ್ಲಿ ಹೂವಿನ ಹಡಗಲಿಯ ಹೆಸರಾಂತ ರಂಗಸಂಸ್ಥೆಯಾದ ರಂಗಭಾರತಿಯಲ್ಲಿ ನಟರಾಗಿ ಅಭಿನಯಿಸಿ, 2017ರ ಸಾಲಿನಲ್ಲಿ ನೀನಾಸಂ ರಂಗಶಿಕ್ಷಣಕ್ಕೆ ಆಯ್ಕೆಯಾಗಿ ಪದವಿ ಪಡೆದುಕೊಂಡು, ಎರಡು ವರ್ಷ ನೀನಾಸಂ ತಿರುಗಾಟದಲ್ಲಿ ನಟಿಸಿ, ನಂತರ ರಂಗಭೂಮಿಯ ಉನ್ನತ ಅಭ್ಯಾಸಕ್ಕಾಗಿ ಡ್ರಾಮಾ ಸ್ಕೂಲ್ ಮುಂಬೈನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. ಮೈಸೂರು ರಂಗಾಯಣ ಪ್ರಸ್ತುತ ಪಡಿಸಿದ ‘ಪರ್ವ’ ಮಹಾರಂಗಪ್ರಯೋಗದಲ್ಲಿ ನಟಿಸಿದ್ದು, ಪ್ರಸ್ತುತ ರಂಗಭೂಮಿಯಲ್ಲಿ ನಟ, ನಿರ್ದೇಶಕ, ಕತೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಕೃತಿಗಳು ; ...

READ MORE

Related Books