ಹಬ್ಬ ಮತ್ತು ಹುಲಿ

Author : ಬಿ.ಟಿ. ಲಲಿತಾ ನಾಯಕ್

Pages 106

₹ 40.00




Year of Publication: 1989
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

ʼಹಬ್ಬ ಮತ್ತು ಹುಲಿʼ ಲೇಖಕಿ ಬಿ. ಟಿ. ಲಲಿತಾನಾಯಕ್‌ ಅವರ ಕಥಾ ಸಂಕಲನ. ಇಲ್ಲಿಯ ಕಥೆಗಳು ಸಾಮಾಜಿಕ ವಲಯದ ಒಳಗೆ ನಡೆಯುವ ಧೋರಣೆಗಳನ್ನು ತೋರಿಸುತ್ತದೆ. ಲಂಬಾಣಿ ಜನಾಂಗದ ಹಬ್ಬ ಆಚರಣೆಗಳು ಮತ್ತು ಸಾಂಸ್ಕೃತಿಕ ವಿಚಾರಗಳಿಗಿಂತ ಅಲ್ಲಿರುವ ಹಸಿವು, ಅನಕ್ಷರತೆ ಮುಂತಾದ ಸಾಮಾಜಿಕ ಸಂಗತಿಗಳೇ ಇಲ್ಲಿಯ ಕತೆಗಳಲ್ಲಿ ಪ್ರಮುಖವಾಗಿದೆ. ಕತೆಯ ಒಡಲಲ್ಲಿ ತೀರಾ ಅನಿವಾರ್ಯ ವಾದಾಗ ಮಾತ್ರ ಸಾಂಸ್ಕೃತಿಕ ವಿವರಗಳನ್ನು ನೀಡಲಾಗಿದೆ.ಇಂದಿನ ಸಮಾಜದಲ್ಲಿ ಕಾಣ ಸಿಗುವಂತಹ ವಸ್ತುಗಳನ್ನೇ ವಸ್ತುಸಂಗತಿಗಳನ್ನಾಗಿ ಮಾಡಿ ಕಥೆ ಹೆಣೆಯಲಾಗಿದೆ. ಬಹುಪಾಲು ಕತೆಗಳು ಲಂಬಾಣಿ ಸಮುದಾಯದ ಕುರಿತಾಗಿಯೇ ಲೇಖಕರು ಚಿತ್ರಿಸಿದ್ದಾರೆ.

About the Author

ಬಿ.ಟಿ. ಲಲಿತಾ ನಾಯಕ್
(04 April 1945)

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.   ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...

READ MORE

Related Books