ಸಸಿಯ ಸಲಹಿ

Author : ಬಿದರಹಳ್ಳಿ ನರಸಿಂಹಮೂರ್ತಿ

₹ 180.00




Year of Publication: 2021
Published by: ರೂಪ ಪ್ರಕಾಶನ
Address: ಮೈಸೂರು

Synopsys

ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಥಾ ಸಂಕಲನ-ಸಸಿಯ ಸಲಹಿ. ಕೃತಿಗೆ ಬೆನ್ನುಡಿ ಬರೆದ ಲೇಖಕಿ ವೈದೇಹಿ ‘ಕಥೆ ಎಂಬುದಕ್ಕೆ ಇರುವ ಸಾಮಾನ್ಯ ಆಕೃತಿಯನ್ನು ತಳ್ಳಿ ಹೊಸತೊಂದು ಸ್ವರೂಪವನ್ನು ಕಲ್ಪಿಸಿಕೊಳ್ಳುವ ಆಶಯ ಕಥೆಯ ಸ್ಥಾಪಿತ ಚೌಕಟ್ಟಿನಿಂದ ಬಿಡುಗಡೆಗೊಂಡು ನವಕಟ್ಟೋಣದ ಕಡೆ ನಡೆಯುವ ತುಡಿತ ಇಂತೆಲ್ಲದರಿಂದ ಈ ಸಂಕಲನವು ಕುತೂಹಲಕಾರಿಯಾಗಿದೆ’ ಎಂದು ಪ್ರಶಂಸಿಸಿದ್ದರೆ, ಮತ್ತೋರ್ವ ಲೇಖಕ ಡಾ. ರಾಜೇಂದ್ರ ಚೆನ್ನಿ ‘ಬಿದರಹಳ್ಳಿಯವರ ಭಾಷೆಯ ಸಾಮರ್ಥ್ಯದ ಪ್ರತ್ಯೇಕ ಅಧ್ಯಯನ ಅಗತ್ಯ. ಓದಿದಷ್ಟು ಬೆರಗು ಹುಟ್ಟಿಸುವಂಥ ಬಹುಸ್ತರೀಯವಾದ ಲವಲವಿಕೆ ಅವರ ಭಾಷೆಗಿದೆ’ ಎಂದು ಶ್ಲಾಘಿಸಿದ್ದಾರೆ.  

ಹಿರಿಯ ಸಾಹಿತಿ ಡಾ. ಬಸವರಾಜ ಕಲ್ಗುಡಿ ಅವರು ‘ಬಿದರಹಳ್ಳಿ ಇಂಗ್ಲಿಷ್ ಮೇಷ್ಟ್ರು. ಆದರೆ ಪಶ್ಚಿಮದ ಪ್ರಭಾವವು, ತಮ್ಮ ಸೃಜನಶೀಲತೆಯ ಮೇಲೆ ನೆರಳು ಕವಿಯದಂತೆ ನೋಡಿಕೊಂಡವರು ಇವರು. ಮಲೆನಾಡನ್ನು ಮೆಚ್ಚುವ ನನಗೆ ಶಿವಮೊಗ್ಗದ ಸುತ್ತಮುತ್ತಲ ಪರಿಸರ ತನ್ನೆಲ್ಲ ಒಲವು ಚೆಲುವಿನ ಜೊತೆಗೂಡಿ ಇವರ ಬರವಣಿಗೆಯಲ್ಲಿ ಒಡಮೂಡಿರುವುದೂ ಇವರ ಬರಹಗಳ ಬಗ್ಗೆ ಆಸಕ್ತಿ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿಯೇ ಅವರ ಕಥಾಸಂಕಲನವನ್ನು ಕುತೂಹಲದಿಂದ ಓದಲು ಆರಂಭಿಸಿದೆ.

ಬಿದರಹಳ್ಳಿ ಅವರು ಅನೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕಥಾ ಪ್ರಕಾರವು ಇವರಿಗೆ ಹೆಚ್ಚು ಒಗ್ಗಿದ ಬರವಣಿಗೆ ಎಂದೆ ನನಗೆ ಅನ್ನಿಸಿದೆ. ಈ ಸಂಕಲನದ ೨೨ ಕಥೆಗಳಲ್ಲಿ ಸುಮಾರು ಎರಡು ದಶಕಗಳಿಂದಲೂ ಬರೆಯುತ್ತಾ ಬಂದಿರುವ ಕಥೆಗಳು ಸೇರ್ಪಡೆಯಾಗಿವೆ.

ಕಥೆಯನ್ನು ಹೇಳುವ ರೀತಿಯ ಅನೇಕ ಪ್ರಯೋಗಗಳು ಬಿದರಹಳ್ಳಿ ಅವರ ಇಲ್ಲಿನ ಬರಹದಲ್ಲಿ ಕಂಡುಬಂದರೂ ಅನುಭವವನ್ನು ಬಗೆಯುವ ಅವರ ಭಾಷೆಯೇ ಹೆಚ್ಚು ಸೂಕ್ಷ್ಮವಾಗಿದೆ ಎಂದು ನನಗೆ ಅನ್ನಿಸುತ್ತಿದೆ. ವಿವರಗಳ ಪಾತಳಿಯನ್ನು ಮೀರಿ ಭಾಷೆ ಇಲ್ಲಿ ಸಹಜ ಧ್ವನಿಯನ್ನು ಗಳಿಸಿಕೊಳ್ಳುತ್ತದೆ. ಇದೇ ಇಲ್ಲಿನ ಕೆಲವು ಕಥೆಗಳು ಗಟ್ಟಿಗೊಳ್ಳುವ ಒಂದು ಪ್ರಮುಖ ಅಂಶವಾಗಿದೆ. ಅದನ್ನೇ ಅವರು ಅನುಭಾವದಂತೆ ಗಟ್ಟಿ ಹಿಡಿಯಬೇಕೆಂದು ನನಗೆ ಪದೇ ಪದೇ ಅನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books